ಅಂತರಂಗ-ಬಹಿರಂಗ ಶುದ್ಧವಾಗಿದ್ದರೆ ಸತ್ಯದ ಅರಿವು
ಧಾರವಾಡ,ಮಾ.4: :ಮನುಷ್ಯನುಅಂತರಂಗ ಮತ್ತು ಬಹಿರಂಗವಾಗಿ ಶುದ್ಧವಾಗಿದ್ದರೆ ಸತ್ಯದಅರಿವನ್ನು ಹೊಂದುವನು. ಇಂಥಅರಿವು ಹೊಂದಿದವರು ಹೊಸಹಳ್ಳಿಯ ಬೂದೀಶ್ವರ ಸ್ವಾಮಿಗಳಾಗಿದ್ದರು ಎಂದು ಶ್ರೀ ಜಗದ್ಗುರು ಬೂದೀಶ್ವರ ವಿದ್ಯಾಪೀಠದ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಾನಂದ ಧೂಳಪ್ಪನವರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಹೊಸಹಳ್ಳಿ ಪರಮಪೂಜ್ಯ ಶ್ರೀ ಬೂದೀಶ್ವರ ಮಹಾಸ್ವಾಮಿಗಳ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಶ್ರೀ ಬೂದೀಶ್ವರ ಮಹಾಸ್ವಾಮಿಗಳ ಕೊಡುಗೆ’ ಕುರಿತುಉಪನ್ಯಾಸ ನೀಡಿದರು.
ಬೂದೀಶ್ವರ ಸ್ವಾಮಿಗಳು 12ನೇ ಶತಮಾನದ ಶರಣರ ವಚನಗಳಂತೆ ಜನರಲ್ಲಿಅಜ್ಞಾನ, ದಾರಿದ್ರ್ಯವನ್ನು ಹೋಗಲಾಡಿಸಲು ಲೋಕ ಸಂಚಾರ ಮಾಡಿದರು. ಹಳ್ಳಿಹಳ್ಳಿಗೆ ಸಂಚರಿಸಿ ನೊಂದವರಕಣ್ಣೀರು ಒರೆಸಿದರು. ಸತ್ಯಪಥದಲ್ಲಿ ನಡೆಯುವಂತೆಜನರಿಗೆ ಭೋಧಿಸಿದರು.ಮಾನವಧರ್ಮ ಶ್ರೇಷ್ಠವಾಗಿದ್ದು ಉಳಿದೆಲ್ಲ ಧರ್ಮಗಳ ಬಗ್ಗೆ ಯೋಚಿಸದೇ ಮಾನವಧರ್ಮವನ್ನು ಪಾಲಿಸಿರಿ ಎಂದುಜನತೆಗೆ ಭೋಧಿಸಿದರು.
ಬೂದೀಶ್ವರ ಸ್ವಾಮಿಗಳು ತಮ್ಮಅಂತಃಶಕ್ತಿಯಿಂದ ಪವಾಡಎನ್ನುವ ಹಾಗೆ ಕಷ್ಟದಲ್ಲಿದ್ದವರನ್ನು ಕೈ ಹಿಡಿದು ಮುನ್ನಡೆಸಿದ ಮಹಾ ಶರಣರಾಗಿದ್ದರು. ಧರ್ಮದಿಂದ ನಡೆದರೆ ಶಾಂತಿ, ಪ್ರೀತಿ, ಪುಣ್ಯತಾನೇತಾನಾಗಿ ಲಭಿಸುವುದುಎಂದು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿಗ್ರಾಮೀಣದಲ್ಲಿ ನೆಮ್ಮದಿಯ ಬದುಕುತಂದುಕೊಟ್ಟ ಬೂದೀಶ್ವರ ಸ್ವಾಮಿಗಳು ಸದಾವಕಾಲ ಸ್ಮರಣೀಯರುಎಂದರು.
ದತ್ತಿದಾನಿಗಳ ಪರವಾಗಿತೊಂಬತ್ತೇರಡರ ವಯಸ್ಸಿನ ನಿವೃತ್ತಿ ಶಿಕ್ಷಕ ಹದಿನೈದು ವರ್ಷಗಳಿಂದ ನಿವೃತ್ತಿ ವೇತನವನ್ನು ಬಸವಾದಿ ಶರಣರತತ್ವಆಚರಣೆಯ ಕಾರ್ಯಗಳಿಗೆ ನೀಡುತ್ತಾ ಬಂದಿರುವದೇಮಪ್ಪಯಲ್ಲಪ್ಪ ಗಾಳಿ ಅವರನ್ನು ಸನ್ಮಾನಿಸಲಾಯಿತು.
ದತ್ತಿದಾನಿ ಅಶೋಕ ನಿಡವಣಿ ಮಾತನಾಡಿ, ಬೂದೀಶ್ವರ ಸ್ವಾಮಿಗಳ ಕಲ್ಯಾಣದಕಾರ್ಯವನ್ನು ನಾಡಿಗೇ ಪರಿಚಯಿಸಲು ಸಂಘದಲ್ಲಿಅವರ ಹೆಸರಿನಲ್ಲಿದತ್ತಿಇಡಲಾಗಿದೆಎಂದರು.
ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಬೂದೀಶ್ವರ ದ್‍ಸ್ವಾಮಿಗಳು ಎಷ್ಟು ವರ್ಷ ಬಾಳಿದರು ಎನ್ನುವುದಕ್ಕಿಂತಅವರತ್ಯಾಗದಜೀವನದ ಸ್ಮರಣೆಯಿಂದ ನಮ್ಮೊಳಗೆ ಚೈತನ್ಯ ತಂದುಕೊಳ್ಳುವಂತಾಗಬೇಕು.ಒಂದು ಕಾಲಕ್ಕೆ ಮಠಗಳು ಸಮಾಜಕ್ಕೆ ನೊಂದಜನರಿಗೆ ಮಾರ್ಗದರ್ಶಿಸುವ ಕೇಂದ್ರವಾಗಿದ್ದವು.ಇಂದು ಅವು ತಮ್ಮ ಮೂಲ ಆಶಯದಿಂದ ವಿಮುಖವಾಗಿ ನಡೆದುಕೊಳ್ಳುತ್ತಿರುವುದರಿಂದ ಸಮಾಜದಲ್ಲಿಅಶಾಂತಿ ಹೆಚ್ಚಾಗಿದೆಎಂದರು.
ಸತೀಶತುರಮರಿ ಸ್ವಾಗತಿಸಿದರು.ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿವಾನಂದ ಭಾವಿಕಟ್ಟಿ ಸನ್ಮಾನಿತರನ್ನು ಪರಿಚಯಿಸಿದರು.ಶಂಕರ ಕುಂಬಿ ನಿರೂಪಿಸಿದರು.ಡಿ.ಎಂ. ನಿಡವಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಂತಪ್ಪತೋಟದ, ಕೆ.ಎಂ.ಅಂಗಡಿ ಸೇರಿದಂತೆ ಬೂದೀಶ್ವರ ಮಹಾಸ್ವಾಮಿಗಳ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.