2 ವರ್ಷ ಜೈಲು ಶಿಕ್ಷೆ ದಂಡ ವಿಧಿಸಿ ತೀರ್ಪು
ಯಾದಗಿರಿ : ಮಾ. 08 : ವಿಶೇಷ ಮೊಕದ್ದಮೆ ಸಂಖ್ಯೆ:10/2015 ರಲ್ಲಿ ಆರೋಪಿ 2 ಮಲ್ಲಿಕಾರ್ಜನ ತಂದೆ ಸಿದ್ದಲಿಂಗರೆಡ್ಡಿ ಹೊಸಮನಿ ಸಾ.ತಂಗಡಗಿ ಇವರಿಗೆ ಜೀವಾವಧಿ ಜೈಲು ಶಿಕ್ಷೆ ರೂ5000/-ದಂಡ ಹಾಗೂ ಆರೋಪಿ ನಂ.2 ಮಲ್ಲಿಕಾರ್ಜನ ತಂದೆ ಸಿದ್ದಲಿಂಗರೆಡ್ಡಿ ಹೊಸಮನಿ ಸಾ:ತಂಗಡಗಿ ಆರೋಪಿ ನಂ: 3 ಶಬನಾ ತಂದೆ ಸೋಪಿಸಾಬ ಸೈಯದ್ ಸಾ:ತಂಗಡಗಿ ಇವರಿಗೆ 2 ವರ್ಷ ಜೈಲು ಶಿಕ್ಷೆ 2000 ರೂ. ದಂಡ ವಿಧಿಸಿದ ತೀರ್ಪುನ್ನು ನೀಡಿ ಆದೇಶ ಹೊರಡಿಸಿದ್ದಾರೆ ಎಂದು ಯಾದಗಿರಿ ವಿಶೇಷ ಸರಕಾರಿ ಅಭಿಯೋಜಕರು ಹಯ್ಯಾಳಪ್ಪ ಅವರು ತಿಳಿಸಿದ್ದಾರೆ.
ಮಾಡಿದ್ದು ಇರುತ್ತದೆ. ಆರೋಪಿ ನಂ.3ನೇಯವಳು ಈ ಘಟನೆ ಜರುಗುವಾಗ ಬೇರೆಯವರು ಹಳ್ಳದ ಕಡೆಗೆ ಬರದಂತೆ ಮತ್ತು ಆರೋಪಿ ನಂ 1,2, ರವರಿಗೆಗ ಮೃತ ಆಶಾಬೀಳಿಗೆ ಬಲತ್ಕಾರ ಸಂಭೋಗ ಮಾಡಿ ಕೊಲೆ ಮಾಡಲು ಸಹಕರಿಸಿದ್ದು ಸಾಕ್ಷಿದಾರರ ಹೇಳಿಕೆಯಿಮದ ಹಾಗೂ ಕಾಲ್ ಡಿಸೇಲ್ಸಗಳಿಂದ ಹಾಗು ತನಿಖೆಯಿಂದ ದೃಢಪಟ್ಟಿರುತ್ತದೆ.
ಕಾರಣ ದೋಷಪತ್ರದ ಕಾಲಂ ನಂ 12 ರಲ್ಲಿ ನಮೂದಿಸಿದ ಆರೋಪಿ ನಂ:1 2 ಮತ್ತು 3 ರವರು ಕಲಂ:376 (ಂ) (ಆ) 302 11,114, ಖ/W 34 ಐಪಿಸಿ ಕಲಂ.6 & 17 ಪೊಕ್ಸೋ ಎಕ್ಟ್ ಪ್ರಕಾರ ಅಪರಾಧ ಎಸಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣೆ ಪತ್ರವನ್ನು ತನಿಖಾಧಿಕಾರಿಯವರಾದ ಜೆ.ಎಸ್. ನ್ಯಾಮಗೌಡರ ವೃತ್ತ ನಿರೀಕ್ಷಕರು ಶಹಾಪೂರ ರವರು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇರುತ್ತದೆ.
ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಬಿ.ಎಸ್ ರೇಖಾ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಯಾದಗಿರಿ ಇವರ ಮುಂದೆ ಸದರಿ ಪ್ರಕರಣವು ಅಧಿ ವಿಚಾರಣೆಗಾಗಿ ಬಂದಿದ್ದು ಪ್ರಕರಣದ ಅಧಿ ವಿಚಾರಣೆಯನ್ನು ಮಾಡಿ ಆರೋಪಿತರು ಮಾಡಿರುವ ಆರೋಪ ಸಾಭೀತಾಗಿರುವುದರಿಂದ,
ಆರೋಪಿ ನಂ ಆರೋಪಿ 2 ಮಲ್ಲಿಕಾರ್ಜನ ತಂದೆ ಸಿದ್ದಲಿಂಗರೆಡ್ಡಿ ಹೊಸಮನಿ ಸಾ.ತಂಗಡಗಿ ಇವರುಗಳ ವಿರುದ್ದ ಕಲಂ: 302 ಸಂ 34 ಐಪಿಸಿ ಅಡಿಯಲ್ಲಿನ ಅಪರಾಧಕ್ಕೆ ಜೀವಾವಧಿ ಶಿಕ್ಷೆ ರೂಪಾಯಿ 5000/ ದಂಡವಿಧಿಸಲಾಗಿದೆ. ಹಾಗೂ ಆರೋಪಿ ನಂ.2 ಮಲ್ಲಿಕಾರ್ಜ ತಂದೆ ಸಿದ್ದಲಿಂಗರೆಡ್ಡಿ ಹೊಸಮನಿ ಸಾ.ತಂಗಡಗಿ 376 (2) ಸಂ.34 ಐಪಿಸಿ& 6 ಪೋಕ್ಸ್ ಎಕ್ಟ್ ಅಡಿಯಲ್ಲಿ ಅಪರಾಧಕ್ಕೆ 10 ಜೈಲು ಶಿಕ್ಷೆ ರೂ 5000/-ದಂಡವಿಧಿಸಲಾಗಿದೆ.
ಆರೋಪಿ ನಂ.2 ಮಲ್ಲಿಕಾರ್ಜನ ತಂದೆ ಸಿದ್ದಲಿಂಗರೆಡ್ಡಿ ಹೊಸಮನಿ ಸಾ.ತಂಗಡಗಿ ಆರೋಪಿ ನಂ.3 ಶಬನಾ ತಂದೆ ಸೋಪಿಸಾಬ ಸೈಯದ್ ಸಾ:ತಂಗಡಗಿ ವಿರುದ್ದ ಕಲಂ.111, 114, ಐಪಿಸಿ & 17 ಪೋಕ್ಸ್ ಎಕ್ಟ್ ಸಂ.34 ಐಪಿಸಿ ಅಡಿಯಲ್ಲಿ ಅಪರಾಧಕ್ಕಾಗಿ 2 ವರ್ಷಜೈಲು ಶಿಕ್ಷೆ ತಲಾ ರೂ 2000/-ದಂಡ ವಿಧಿಸಲಾಗಿದೆ. ದಿನಾಂಕ: 29-02-2024 ರಂದು ತೀರ್ಪುನ್ನು ನೀಡಿದ್ದು ಇರುತ್ತದೆ. ಈ ಪ್ರರಕಣದಲ್ಲಿ ಸರ್ಕಾರದ ಪರವಾಗಿ ಯಾದಗಿರಿ ವಿಶೇಷ ಸರಕಾರಿ ಅಭಿಯೋಜಕರು ಶ್ರೀ ಹಯ್ಯಾಳಪ್ಪ ಅವರು ವಾದವನ್ನು ಮಂಡಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.