ಬೂಡಾ ಅಧ್ಯಕ್ಷ ಸ್ಥಾನ: ದಲಿತರಿಗೆ ಅನ್ಯಾಯ
ಬೀದರ್:ಮಾ.8: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡುವಲ್ಲಿ ದಲಿತರಿಗೆ ಅನ್ಯಾಯ ಮಾಡಿದಕ್ಕೆ ಸಂಗಮೇಶ ಭಾವಿದೊಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬೀದರ್ ಜಿಲ್ಲೆಯ ದಲಿತ ಮುಖಂಡರಾದ ಬಾಬುರಾವ್ ಪಾಸ್ವಾನ್ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ದುಡಿಯುತ್ತಿದ್ದು, ಜಿಲ್ಲೆಯ ಹಿಂದುಳಿದ ಹಾಗೂ ದಲಿತರ ಚಿಂತಕರಾಗಿ ಬಹಳಷ್ಟು ಶೋಷಿತರ ಹಕ್ಕಿಗಾಗಿ ಹೋರಾಟ ಮಾಡಿ ಪಕ್ಷದಲ್ಲಿ ಸೇರಿ ಎಲ್ಲ ದಲಿತರ ಓಣಿಗಳಿಗೆ ಹೋಗಿ ಅವರ ಮತಗಳನ್ನು ಹಾಕಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದಲ್ಲಿ ದಲಿತರಿಗೆ ಒಳ್ಳೆಯ ಸ್ಥಾನಮಾನ ನೀಡುತ್ತೇನೆ ಎಂಬುದಾಗಿ ಹಾಲಿ ಪೌರಾಡಳಿತ ಸಚಿವ ರಹೀಂ ಖಾನ್ ಭರವಸೆ ನೀಡಿದರು. ಆದರೆ ಸರ್ಕಾರ ಬಂದ ಮೇಲೆ ಯಾವುದೇ ಖಾತೆ ನೀಡದೇ ಇರುವುದರಿಂದ ದಲಿತ ನಾಯಕ ಬಾಬುರಾವ್ ಪಾಸ್ವನ್ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಬಹಳಷ್ಟು ಬೇಸರವಾಗಿದೆ ಎಂದು ಸಂಗಮೇಶ ಪ್ರಕಟಣೆ ಮೂಲಕ ಆರೋಪಿಸಿದ್ದಾರೆ.