ಶಿವರಾತ್ರಿ ಪ್ರಯುಕ್ತ ಗಂಗಾಜಲ ವಿತರಣೆ
ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.08: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಾಡಳಿತದಿಂದ ತಹಶೀಲ್ ಕಾರ್ಯಾಲಯದಲ್ಲಿ ಗಂಗಾಜಲ ವಿತರಣೆಗೆ ಗ್ರೇಡ್ 1 ತಹಶೀಲ್ದಾರ್ ಮಹಾಂತೇಶಗೌಡ ಗೌಡರ್ ಚಾಲನೆ ನೀಡಿದರು.
ನಂತರ ಮಹಾಂತೇಶಗೌಡರ್ ಮಾತನಾಡಿ, ಪ್ರತಿ ವರ್ಷ ಮಹಾಶಿವರಾತ್ರಿ ಅಂಗವಾಗಿ ದೇವಸ್ಥಾನಗಳಿಗೆ ಗಂಗಾಜಲವನ್ನು ವಿತರಣೆ ಮಾಡಲಾಗುತ್ತದೆ. ಅದೇ ರೀತಿ ಇಂದು 8 ಕ್ಯಾನ್ ಗಂಗಾಜಲ ಬಂದಿದ್ದು, ಸದರಿ ನಾಲ್ಕು ಹೋಬಳಿಗಳಾದ ವೆಂಕಟಗಿರಿ, ಮರಳಿ, ಆನೇಗೊಂದಿ ಹಾಗೂ ಗಂಗಾವತಿ ನಗರಕ್ಕೆ ಮತ್ತು ಶಿವನ ದೇವಸ್ಥಾನಕ್ಕೆ ವಿತರಣೆ ಮಾಡಲಾಗುತ್ತದೆ ಎಂದರು. 9 ಶಿರಸ್ತೇದಾರ್ ಕೃಷ್ಣವೇಣಿ, ಕಂದಾಯ ನಿರೀಕ್ಷರು ಮಂಜುನಾಥ್ ಹಿರೇಮಠ್ ,ಮಹೇಶ್ ದಲಾಲ ಹಾಲೇಶ ಸಿಬ್ಬಂದಿ ಶಿವು ಕುಮಾರ್ , ಶ್ರೀರಾಮ್ ಜೋಶಿ ಸೇರಿದಂತೆ ಅನೇಕರು  ಉಪಸ್ಥಿತರಿದ್ದರು.
One attachment • Scanned by Gmail