ವೃದ್ಧಾಶ್ರಮದಲ್ಲಿ ಜನ್ಮದಿನ  ಆಚರಿಸಿಕೊಂಡ ಎಂ.ಜಿ. ಕನಕ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.08: ಧ್ರುವ ಸರ್ಜಾ  ಅಭಿಮಾನಿ, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ ಕನಕ ಅವರು ತಮ್ಮ ಹುಟ್ಟು ಹಬ್ಬವನ್ನು ತಾಲೂಕಿನ ಸಂಗನಕಲ್ಲಿನಲ್ಲಿರುವ ಆದರ್ಶ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹಣ್ಣು ಹಂಪಲು ಮತ್ತು ಅನ್ನದಾನ ಮಾಡುವ ಮೂಲಕ ನಿನ್ನೆ ಆಚರಣೆ ಮಾಡಿಕೊಂಡರು.
ನಂತರ ನಗರದ ಅಧಿ ದೇವತೆ ಬಳ್ಳಾರಿ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕೆಕ್ ಕಟ್ ಮಾಡಲಾಯಿತು.  ಸ್ನೇಹಿತರು ಕನಕ ಅವರ ಕುರಿತು ಸಿದ್ದಪಡಿಸಿದ ಹಾಡನ್ನು ನಗರ ಪಾಲಿಕೆ ಸದಸ್ಯ ಪಿ. ಗಾದೆಪ್ಪ  ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಪಿ. ಗಾದಪ್ಪ, ಕನಕ ಅವರು ಹಲವಾರು ರೀತಿಯಲ್ಲಿ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ. ತಮಗೆ ನೀಡಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಆದ್ದರಿಂದ  ಜನರು ಪ್ರೀತಿಸುತ್ತಾರೆ.‌ ನಿಮ್ಮ ಸಾಮಾಜಿಕ ಕಳಕಳಿ ಹಾಗೂ ಸಮಾಜ ಸೇವೆ ಹೀಗೆ ಮುಂದವರೆಯಲಿ. ನಿಮಗೆ ಬೇಕಾದ ಪ್ರೋತ್ಸಾಹವನ್ನು ನೀಡುತ್ತೇವೆ ಎಂದರು.
 ಕನಕ ಅವರ ಸಾಮಾಜಿಕ ಕಾರ್ಯಗಳನ್ನು ಗುರುತಿಸಿದ ಅವರ ಸ್ನೇಹಿತರು ನಗರದ ಹಲವೆಡೆ ಜನ್ಮ ದಿನ ಆಚರಿಸಿ  ಸಂಭ್ರಮಿಸಿದರು.
 ಈ ಸಂದಭರ್ದಲ್ಲಿ ಕನಕ ಮಾತನಾಡಿ,  ಇಂದಿನ ದಿನಗಳಲ್ಲಿ ಬಡವರಿಗೆ ನಾನು ನನ್ನ ಕೈಲಾದ ಸಹಾಯ ಮಾಡುತ್ತಿದ್ದೆನೆ‌.‌ಇದಕ್ಕೆ ಕಾರಣ ಕನಕ ದುರ್ಗಮ್ಮನ ಆಶಿರ್ವಾದ ಮತ್ತು ನಮ್ಮ ಸ್ನೇಹಿತರ ಪ್ರೋತ್ಸಾಹ ಕಾರಣವಾಗಿದೆ. ಮುಂದಿನ ದಿಗಳಲ್ಲಿಯೂ ನನ್ನ ಕೈಲಾದ ಸಹಾಯವನ್ನು ಜನರಿಗೆ ಮಾಡುತ್ತೆನೆ ಎಂದರು.‌
 ಉಮಾರ್ ಫಾರೂಕ್, ವೈ.ಅರುಣ್ ಕುಮಾರ್, ಸಿ.ತಿಪ್ಪೇರುದ್ರ, ನಾಗರಾಜ್ ಹುಬ್ಬಳ್ಳಿ, ಯೋಗೇಶ್ ಕುಮಾರ್ ಬಂಡಾರಿ, ಮೋಕ ಪಾಷಾ, ಡಿ.ಕೆ ಗಾದಿ, ಗಂಗಾಧರ ಸೇರಿದಂತೆ ಎಂ.ಜಿ ಕನಕ ಅವರು ಸ್ನೇಹಿತ ಬಳಗದವರು ಉಪಸ್ಥಿತರಿದ್ದರು.