ಬಿಲ್ವ ಪತ್ರೆ ಪಂಚಾಮೃತ ವಿತರಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.08: ಜಿಲ್ಲೆಯ ಸಿರುಗುಪ್ಪ ತಾಲೂಕಿನ‌ ಹಚ್ಚೊಳ್ಳಿ ಗ್ರಾಮದ ಶ್ರೀ ಆರಾಧ್ಯರಂಗ ಬಳಗದಿಂದ ಇಂದು ನಗರದ ದುರ್ಗಮ್ಮ ದೇವಸ್ಥಾನದ ಬಳಿ ಶಿವರಾತ್ರಿ ಪ್ರಯುಕ್ತ ಬಿಲ್ವ ಪತ್ರೆ ಮತ್ತು ಪಂಚಾಂಮೃತವನ್ನು ವಿತರಿಸಲಾಯ್ತು. ಕಳೆದ 11ವರ್ಷಗಳಿಂದ  ನಿರಂತರವಾಗಿ ಈ ಕಾರ್ಯ ಮಾಡುತ್ತಾ ಬಂದಿದೆ.
ಇಂದಿನ  ಬಿಲ್ವಪತ್ರೆ ಹಂಚಿಕೆ ಕಾರ್ಯಕ್ಕೆ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು ಚಾಲನೆ ನೀಡಿದರು.
ಈ ವೇಳೆ  ಪಂಪಾಪತಿ ಶಾಸ್ತ್ರಿಗಳು,  ಅಂಬರೀಶ ಹಚ್ಚೊಳ್ಳಿ, ಜೆ.ಎಸ್.ಬಸವರಾಜ್ ಸ್ವಾಮಿ, ಬಂಡ್ರಾಳು ಮೃತ್ಯುಂಜಯ ಸ್ವಾಮಿ, ಎಚ್. ಕೆ. ಗೌರಿಶಂಕರಸ್ವಾಮಿ, ಜಾಲಿಹಾಳ್ ಶ್ರೀಧರ್,  ದಮ್ಮೂರ್ ರವಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.