ವರ್ಷ ಕಳೆದರೂ ಮುಗಿಯದ ಗಡಗಿ ಚೆನ್ನಪ್ಪ ಗೋಪುರ ಕಾಮಗಾರಿ
*99 ಅಡಿ ಎತ್ತರ 9 ಅಂತಸ್ತು
* 4 ವರೆ ಮೀ ಆಳದ ಬುನಾದಿ
* 5 ಕೋಟಿ ರೂ ವೆಚ್ಚ
* 50 ಟನ್ ಕಬ್ಬಿಣ, 12  ಸಾವಿರ ಚೀಲ ಸಿಮೆಂಟ್ ಬಳಕೆ
* ಮೆಟ್ಟಿಲು, ಲಿಫ್ಟ್ ವ್ಯವಸ್ಥೆ
* ಟೈಲ್ಸ್ ಕಾಮಗಾರಿ ಪ್ರಗತಿಯಲ್ಲಿ.
ಎನ್. ವೀರಭದ್ರಗೌಡ
ಬಳ್ಳಾರಿ, ಮಾ.08: ನಗರದ ಮಧ್ಯ ಭಾಗದಲ್ಲಿ ನಿರ್ಮಾಣ ಆಗುತ್ತಿರುವ 99 ಅಡಿ ಎತ್ತರದ  ಗಡಗಿ ಚೆನ್ನಪ್ಪ ವೃತ್ತದ ಗಡಿಯಾರ ಗೋಪುರ ನಿರ್ಮಾಣ ಕಾಮಗಾರಿ ಹಲವು ಕಾರಣಗಳಿಂದ ಕಳೆದ ಜುಲೈ ವೇಳೆಗೆ  ಮುಗಿಯಬೇಕಾದ್ದು ಇನ್ನೂ 4-5 ತಿಂಗಳು ಬೇಕಿದೆ.
ಇದನ್ನು ನಿರ್ಮಾಣ ಮಾಡುತ್ತಿರುವುದು  ಲೋಕೋಪಯೋಗಿ ಇಲಾಖೆ. ನಿಗಧಿತ 11 ತಿಂಗಳಲ್ಲಿ ಕಾಮಗಾರಿ ಮಾಡಬೇಕಿತ್ತು.
ಜನರು ಬಾಯಲ್ಲಿ ಕರೆಯುವ ರಾಯಲ್ ಸರ್ಕಲ್ ನಲ್ಲಿ ಈ ಮೊದಲು ಅಲ್ಲಂ ಅವರ ಕುಟುಂಬ 1964 ರಲ್ಲಿ ಗಡಿಯಾರ ಗೋಪುರ ನಿರ್ಮಿಸಿ, ಗಡಗಿ ಚೆನ್ನಪ್ಪ ಅವರ ಹೆಸರನ್ನು  ಇಡಲಾಗಿತ್ತು.
ಈ ಗೋಪುರವನ್ನು 2008 ರಲ್ಲಿ ರಾತ್ರೋ ರಾತ್ರಿ ಧ್ವಂಸಗೊಳಿಸಲಾಯ್ತು. ನಂತರ  ಜಿಲ್ಲಾಡಳಿತದಿಂದ ಮತ್ತೊಂದು ಗಡಿಯಾರ ಗೋಪುರ ನಿರ್ಮಾಣ ಮಾಡಲಾಯ್ತು. 
ಇದನ್ನು ಸಹ ಈ ಹೊಸ ಗೋಪುರ ನಿರ್ಮಾಣಕ್ಕಾಗಿ ಕಳೆದ 2022 ರ ಅ.24 ರಂದು ತೆರವುಗೊಳಿಸಲಾಯ್ತು.
ಈ ಸ್ಥಳದಲ್ಲಿ ಅಂದು ಸಚಿವರಾಗಿದ್ದ  ಬಿ.ಶ್ರೀರಾಮುಲು, ನಗರ ಶಾಸಕರಾಗಿದ್ದ ಗಾಲಿ ಸೋಮಶೇಖರ ರೆಡ್ಡಿ ಅವರ ಅಭಿಲಾಶೆಯಂತೆ ನಗರದ ಸೌಂದರೀಕರಣ ಹೆಚ್ಚಿಸಲು,  ಸರ್ಕಲ್‌ ನ್ನು ಮತ್ತಷ್ಟು ವಿಸ್ತರಿಸಿ. ಇಲ್ಲಿ   ಲೆಬನಾನ್ ಮಾದರಿಯಲ್ಲಿ  ಈ120 ಅಡಿ ಎತ್ತರದ ಗೋಪುರ ನಿರ್ಮಾಣಕ್ಕೆ ಪಿಡಬ್ಲುಡಿ ಮುಂದಾಗಿ.  5 ಕೋಟಿ ರೂ, ಸರ್ಕಲ್ ಮತ್ತು ರಾಜಕುಮಾರ ರಸ್ತೆಯ ಒಂದಿಷ್ಟು ಭಾಗದ ಅಭಿವೃದ್ಧಿಗೆ 2 ಕೋಟಿ ರೂ ಸೇರಿದಂತೆ ಒಟ್ಟಾರೆ 7 ಕೋಟಿ ರೂ ವೆಚ್ಚದ ಕಾಮಗಾರಿಗೆ
ಕಳೆದ 2022 ರ ಅಗಷ್ಟ್ 15 ರಂದು ಪೂಜೆ ಮಾಡಿತ್ತು.  ಸೆ. 1 ರಿಂದ ಕಾಮಗಾರಿ ಆರಂಭಿಸಿತು. 4 ವರೆ ಮೀಟರ್ ಅಂದಾಜು 15 ಅಡಿ ಆಳ‌ ಬುನಾದಿ ತೋಡಿ ಅಲ್ಲಿಂದ ಗೋಪುರ ನಿರ್ಮಿಸುವ ಕಾರ್ಯ ನಡೆಯಿತು.‌ ಆದರೆ ಕುಡಿಯುವ ನೀರಿನ ಪೈಪ್ ಗಳು ಅಡ್ಡಬಂದಿದ್ದರಿಂದ ಕಾಮಗಾರಿ ಮೂರು ತಿಂಗಳು ಲೇಟಾಯ್ತು.
ನಂತರ  ಚುನಾವಣೆ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಗಕಾರ ಮತ್ತೆ ಮೂರು ತಿಂಗಳು ಕಾಮಗಾರಿ ಸ್ಥಗಿತಗೊಂಡಿತು.
ನೀ ಮೊದಲು ನಿಗಧಿಯಾಗಿದ್ದ ಗೋಪುರದ 120 ಅಡಿ ಎತ್ತರವನ್ನು 99 ಅಡಿಗೆ ಕಡಿಮೆ ಮಾಡಿ. ಸಧ್ಯ ಸಿವಿಲ್ ಕಾಮಗಾರಿ ಮುಗಿದಿದೆ.
ಗೋಪುರದ ಒಳ ಮತ್ತು ಹೊರ ಭಾಗದಲ್ಲಿ ಟೈಲ್ಸ್ ಅಳವಡಿಸುವ ಕಾರ್ಯ ನಡೆದಿದೆ. ಇಕ್ಕಟ್ಟಾದ ಮತ್ತು ಟ್ರಾಫಿಕ್ ನಿಂದ ಕೂಡಿರುವ ಸ್ಥಳ ಆಗಿರುವುದರಿಂದಲೂ ಕಾಮಗಾರಿ ವಿಳಂಬಕ್ಕೆ ಕಾರಣವಂತೆ.
 ಗೋಪುರ 8+1 ಅಂತಸ್ತುಗಳಿಂದ ಕೂಡಿದೆ.  ಮೆಟ್ಟಿಲುಗಳು ಮತ್ತು ಲಿಫ್ಟ್ ವ್ಯವಸ್ಥೆಯೂ ಇದೆ.
ಕಾಮಗಾರಿಗೆ ಅಂದಾಜು 50 ಟನ್ ಕಬ್ಬಿಣ ಮತ್ತು 12 ರಿಂದ ಸಾವಿರ ಚೀಲ ಸಿಮೆಂಟ್ ಬಳಕೆಯಾಗಿದೆಯಂತೆ.
ಪೂರ್ಣ ಕಾಮಗಾರಿ ಮುಗಿಯಲು ಇನ್ನೂ 4-5 ತಿಂಗಳು ಬೇಕಂತೆ.
 ರಾಜ್ಯದಲ್ಲಿಯೇ  ಸರ್ಕಲ್ ಒಂದರಲ್ಲಿ ಅತಿ ಎತ್ತರದ ಗೋಪುರ ಇದಾಗಲಿದೆ. ಅಷ್ಟೇ ಅಲ್ಲದೆ ನಗರಕ್ಕೆ ಆಕರ್ಷಣೀಯ ಕೇಂದ್ರವಾಗಲಿದೆ.
ಮೂಲ ಗಡಿಯಾರ ಗೋಪು