ಪ್ರಚೋದನಕಾರಿ ಭಾಷಣ ಆರೋಪ: ಶಾಸಕರಾದ ರಾಜಾಸಿಂಗ್, ಯತ್ನಾಳರನ್ನು ಬಂಧಿಸಿ: ಟಪಾಲ್
ವಿಜಯಪುರ,ಮಾ.8:ಒಂದು ಕೋಮಿನ ವಿರುದ್ಧ
ಪ್ರಚೋದನಾಕಾರಿ ಭಾಷಣ ಮಾಡಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ತೆಲಂಗಾಣ ಶಾಸಕ ರಾಜಾಸಿಂಗ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಭಾರತ ಭಾವೈಕ್ಯ ಮಂಚ್ ಮುಖಂಡ ಮಹ್ಮದ್ ರಫೀಕ್ ಟಪಾಲ್ ಎಂಜಿನಿಯರ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 4 ರಂದು ಶಿವಾಜಿ ವೃತ್ತದಲ್ಲಿ ರಾತ್ರಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮುಸ್ಲಿಮರು ದೇಶ ದ್ರೋಹಿಗಳು, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಇಲ್ಲವೇ ಎನ್‍ಕೌಂಟರ್ ಮಾಡಬೇಕು ಎನ್ನುವ ಮೂಲಕ ಸಾರ್ವಜನಿಕ ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಸಾಮರಸ್ಯಕ್ಕೆ ಧಕ್ಕೆಯನ್ನುಂಟು ಮಾಡುವ ಹೇಳಿಕೆ ಇದಾಗಿದೆ. ಹಾಗಾಗಿ ಅವರನ್ನು ತಕ್ಷಣ ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ಗಂಗಾಧರ ಸಂಬಣ್ಣ, ಅಬ್ದುಲ್‍ರಜಾಕ ಹೊರ್ತಿ, ಎಂ.ಸಿ. ಮುಲ್ಲಾ ಮಾತನಾಡಿ, ‘ಪ್ರಚೋದನಕಾರಿ ಭಾಷಣ ಮಾಡಿ, ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡಿದ ಇಬ್ಬರು ಶಾಸಕರ ವಿರುದ್ಧ ಪೆÇಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿಯವರಿಗೆ ಮನವಿ ಮಾಡಿದರು.
ಮುಖಂಡರಾದ ಫಯಾಜ್ ಕಲಾದಗಿ, ನ್ಯಾಯವಾದಿ ಹಾಜಿಲಾಲ್ ಪಿಂಜಾರ್, ನಸೀಮ್ ರೋಜಿಂದರ್, ದಾದಾಪೀರ್ ಮುಜವಾ, ಶಕೀಲ್ ಗಡೇದ ಇದ್ದರು.