ನಾಳೆ ಮಹಿಳಾ ಮಂಡಳ ವಾರ್ಷಿಕೋತ್ಸವ
ಕಲಬುರಗಿ,ಮಾ.8: ಇಲ್ಲಿನ ಸಂಗಮೇಶ್ವರ ಮಹಿಳಾ ಮಂಡಳದ 48ನೇ ವಾರ್ಷಿಕೋತ್ಸವ ಇದೇ ಮಾ.9ರಂದು ಸಂಜೆ 5.30ಕ್ಕೆ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಹಾಗೂ ಲೇಖಕಿ ಸಂಧ್ಯಾ ಹೊನಗುಂಟಿಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದೇವೇಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಬ್ಬರು ಸಾಧಕಿಯರಿಗೆ ಸನ್ಮಾನ ನಡೆಯಲಿದೆ ಎಂದಿದ್ದಾರೆ.ಶಿಕ್ಷಣ ತಜ್ಞೆ ಡಾ.ಶಾಂತಿ ದೇಸಾಯಿ ಹಾಗೂ ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದು, ಮಂಡಳದ ಅಧ್ಯಕ್ಷೆ ವೈಶಾಲಿ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಓಂಕಾರ ನೃತ್ಯ ಸಾಧನ ಸಂಸ್ಥೆಯ ಡಾ.ಶುಭಾಂಗಿ ಸುಧೀಂದ್ರ ಹಾಗೂ ಮಧುರ ಮೈತ್ರಿ ಮಹಿಳಾ ಮಂಡಳದ ಅಧ್ಯಕ್ಷೆ ಛಾಯಾ ಮುಳೂರ ಅವರನ್ನು ಸನ್ಮಾನಿಸಲಾಗುತ್ತಿದ್ದು, ಖ್ಯಾತ ಗಾಯಕಿ ಹಾಗೂ ಸರ್ವೋದಯ ಇಂಗ್ಲಿಷ್ ಶಾಲೆಯ ಸಂಚಾಲಕಿ ಶಿಲ್ಪ ಮುಡಬಿ ಜಾನಪದ ಗೀತೆಗಳ ಗಾಯನ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.