ವೀರಭದ್ರೇಶ್ವರ ದೇವಾಲಯ ಭೂಮಿ ಪೂಜೆ
ಕಲಬುರಗಿ,ಮಾ.8: ಬೀದರ ಜಿಲ್ಲೆ ಬಸವಕಲ್ಯಾಣ ಪಟ್ಟಣದ ಹೊರವಲಯದ ಶಿವಪುರ ರಸ್ತೆಯಲ್ಲಿ ಶ್ರೀನಿವಾಸ ಸರಡಗಿ ಚಿಕ್ಕವಿರೇಶ್ವರ ಸಂಸ್ಥಾನ ಹಿರೇಮಠದ ಡಾ.ರೇವಣಸಿದ್ದ ಶಿವಾಚಾರ್ಯರು ಬಸವಕಲ್ಯಾಣ ಗವಿಮಠದ ಡಾ. ಘನಲಿಂಗ ರುದ್ರಮನಿ ಶಿವಾಚಾರ್ಯರು ವೀರಭದ್ರೇಶ್ವರ ದೇವಾಲಯದ ಭೂಮಿ ಪೂಜೆ ನೆರವೇರಿಸಿದರು.
ಬಸವಕಲ್ಯಾಣ ಅಕ್ಕಸಾಲಿಗ ಶೀಲವಂತ ಸಮಾಜ ಬಾಂಧವರು ಭೂಮಿ ಪೂಜೆಯಲ್ಲಿ ಸಂಭ್ರಮದಿಂದ ಭಾಗವಹಿಸಿದರು. ಸಮಾಜದ ಅಧ್ಯಕ್ಷ ಸೂರ್ಯಕಾಂತ ಶೀಲವಂತ, ಉಪಾಧ್ಯಕ್ಷ ದಯಾನಂದ ಶೀಲವಂತ ಸೇರಿದಂತೆ ಹಲವಾರು ಅಕ್ಕಸಾಲಿಗ ಶೀಲವಂತ ಸಮಾಜ ಬಾಂಧವರು ಉಪಸ್ಥಿತರಿದ್ದರು ಎಂದು ಕಲಬುರಗಿ ವಿಶ್ವಾರಾಧ್ಯ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬುಲಗೆ ತಿಳಿಸಿದ್ದಾರೆ.