ಕನ್ನಡ ನಾಮಫಲಕ ಕಡ್ಡಾಯಕ್ಕೆ ಮನವಿ
ಲಕ್ಷ್ಮೇಶ್ವರ,ಮಾ8: ಸರ್ಕಾರದ ನಿಯಮಾವಳಿ ಪ್ರಕಾರ ಕನ್ನಡ ನಾಮಪಲಕಗಳನ್ನು ಕಡ್ಡಾಯಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪುರಸಭೆಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗದಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಗೆ ಸೊಪ್ಪಿನವರು ಕರ್ನಾಟಕದಲ್ಲಿ ಕನ್ನಡ ಭಾಷೆಯ ರಕ್ಷಣೆಗಾಗಿ ರಕ್ಷಣಾ ವೇದಿಕೆ ಛಲ ಬಿಡದೆ ಹೋರಾಟ ಮಾಡಿದರ ಫಲವಾಗಿ ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿವೇಕವನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದಿದ್ದು ಶೇಕಡ 60ರಷ್ಟು ಕನ್ನಡ ನಾಮಫಲಕಗಳು ಕಡ್ಡಾಯವಾಗಿ ಇರಬೇಕೆಂದು ಆದೇಶಿಸಿದೆ.
ಆದ್ದರಿಂದ ಪಟ್ಟಣದಲ್ಲಿನ ಅನ್ಯ ಭಾಷೆಯ ನಾಮಫಲಕಗಳನ್ನು ತೆರವಗೊಳಿಸಿ ಗಡುವಿನೊಳಗೆ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿದ್ದರೆ ರಕ್ಷಣಾ ವೇದಿಕೆ ಈ ನಿಟ್ಟಿನಲ್ಲಿ ಮುಂದಾಗ ಬೇಕಾಗುತ್ತದೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಸಿದರು.
ತಾಲೂಕ ಘಟಕದ ಅಧ್ಯಕ್ಷ ಲೋಕೇಶ ಸುತಾರ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೊಚ್ಚಿಗೇರಿ ಮಠ ಮತ್ತು ಚನ್ನಬಸಯ್ಯ ಗಡ್ಡದೇವರ ಮಠ ಮಾತನಾಡಿದರು
ಮನವಿ ಸ್ವೀಕರಿಸಿದ ಪುರಸಭೆ ಕಂದಾಯ ಅಧಿಕಾರಿ ಶಿವಾನಂದ್ ಅಜ್ಜಣ್ಣವರ್ ನಿಗದಿತ ಅವಧಿಯ ಒಳಗೆ ಪಟ್ಟಣದಲ್ಲಿ ಕಡ್ಡಾಯಗೊಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಪ್ರವೀಣ್ ಗೌರಿ ಬಸವರಾಜ ರಗಟಿ ಗಣೇಶ ಮೆಹರ್ವಾಡೆ ಪ್ರಕಾಶ ಹುಡೇದ ಪ್ರವೀಣ್ ಕುರಿ ಕೈಸರ್ ಮಹಮ್ಮದ್ ಅಲಿ ಗಂಗಾಧರ್ ಕೊಂಚಿಗೇರಿ ಮಠ ಬಸನಗೌಡ ಪಾಟೀಲ ಮುತ್ತು ಕರ್ಜೆಕ್ಕಣ್ಣವರ ಗಂಗಾಧರ ಕರ್ಜೆಕ್ಕಣ್ಣವರ ಕುಮಾರ್ ಕಣಿವೆ ಆದೇಶ ಸವಣೂರ ಬಸವರಾಜ್ ಮಲ್ಲೂರ ನಿಖಿಲ್ ಗೋಸಾವಿ ಚಂದ್ರು ನೀರಲಗಿ ಸೇರಿದಂತೆ ಅನೇಕರಿದ್ದರು.