ಅಮರೇಶ್ವರ ಪಲ್ಲಕ್ಕಿ ಮೆರವಣಿಗೆ ಭಕ್ತರಿಗೆ ಪ್ರಸಾದ ವಿನಿಯೋಗ
ಔರಾದ : ಮಾ.8:ಪಟ್ಟಣದ ಐತಿಹಾಸಿಕ ಉದ್ಭವಲಿಂಗ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಅಮರೇಶ್ವರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆಯ ಮೂರನೇ ದಿನ ಸ್ವಾಮಿ ವಿವೇಕಾನಂದ ಯುವಕ ಸಂಘದ ವತಿಯಿಂದ ಪ್ರಸಾದ ವಿನಿಯೋಗ ಜರುಗಿತು.
ಪ್ರತಿ ವರ್ಷ ಮಹಾ ಶಿವರಾತ್ರಿಗೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಬೇರೆ ಬೇರೆ ಕಡೆ ಹೋಗಿ ಉದ್ಯೋಗ ಮಾಡುವ ಎಲ್ಲ ಸ್ನೇಹಿತರು ಒಂದೆಡೆ ಸೇರಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ತಮ್ಮದೇ ಆದ ಕಿರು ಸೇವೆ ಸಲ್ಲಿಸುತ್ತಾರೆ. ಉತ್ಸವ ಮೂರ್ತಿಯ ಹಾಗೂ ಪಲ್ಲಕ್ಕಿ ಮೆರವಣಿಗೆಯ ಮೂರನೇ ದಿನ ಸ್ವಾಮಿ ವಿವೇಕಾನಂದ ಯುವಕ ಸಂಘದ ಸದಸ್ಯರು ಅಮರೇಶ್ವರರಿಗೆ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಚನ್ನಬಸವ ಗಜರೆ, ಆನಂದ ದ್ಯಾಡೆ, ಅವಿನಾಶ್ ಪಾಂಚಾಳ, ವಿನೋದ ಬೂದೆ, ಶ್ರೀಕಾಂತ ಚಿದ್ರೆ, ಬಂಡೆಪ್ಪ ಭಾಲ್ಕೆ, ಆಕಾಶ ದ್ಯಾಡೆ, ನವೀನ ರಣವೀರಕರ್, ಸಂತೋಷ ಫುಲಾರಿ, ಮೋಹನ ರಣವೀರಕರ್, ಶ್ರೀಕಾಂತ ಚಾರಿ, ರಾಜು ಚಾರಿ ಸೇರಿದಂತೆ ಇನ್ನಿತರರಿದ್ದರು.