ಕರ್ತವ್ಯ ಅರಿತು ಕೆಲಸ ಮಾಡಿ
ರೋಣ,ಮಾ8: ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ಅರ್ಥ ಮಾಡಿಕೊಂಡು ಉತ್ತಮ ಕೆಲಸ ಮಾಡುವ ಮ?ಲಕ ತಾಲೂಕಿನ ಪ್ರಗತಿ ಹಾಗೂ ಕೀರ್ತಿಗೆ ನಿಮ್ಮದೇ ಆದ ಕೊಡುಗೆಯನ್ನು ನೀಡಿ ಅಂತಾ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರವಿ.ಎ.ಎನ್ ಹೇಳಿದರು.
ಪಟ್ಟಣದ ಗುರು ಭವನದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಹಾಗೂ ನರೇಗಾ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ದಲ್ಲಿ ವಿವಿಧ ಸಿಬ್ಬಂದಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ರೋಣ ತಾಲೂಕಿನ ಪ್ರಗತಿ ಉತ್ತಮ ಗೊಳಿಸಲು ನಿಮ್ಮದೆ ಆದ ಕೊಡುಗೆಯನ್ನು ನೀಡುವ ಮೂಲಕ ತಾಲೂಕನ್ನು ಉನ್ನತ ಸ್ಥಾನದಲ್ಲಿ ಇರಿಸಿದ್ದಿರಿ. ನಿಮ್ಮೆಲ್ಲರ ಶ್ರಮ ಮತ್ತು ದುಡಿಮೆ ಯಿಂದ ನಮ್ಮ ತಾಲೂಕು ಮೇಲ್ಮಟ್ಟದಲ್ಲಿ ಇದೆ ಹಾಗಾಗಿ ನಿಮ್ಮನ್ನು ಗೌರವಿಸುವದು ನಮ್ಮ ಕರ್ತವ್ಯ ಎಂದರು. ಇನ್ನೊಂದು ದೃಷ್ಟಿಯಿಂದ ನೋಡಿದಾಗ ಈ ರೀತಿಯ ಸಮಾಗಮದಿಂದ ಸಂಬಂಧಗಳು ಗಟ್ಟಿ ಆಗುವುದರ ಜೊತೆಗೆ ನಂಬಿಕೆ, ಪ್ರೀತಿ, ವಿಶ್ವಾಸ ಹೆಚ್ಚು ಆಗಿ ಕೆಲಸ ವೃದ್ದಿಯಾಗುತ್ತದೆ ನಿಮ್ಮೆಲ್ಲರ ಒಗ್ಗಟ್ಟಿನಿಂದ ಈ ಕಾರ್ಯಕ್ರಮ ಯಶಸ್ವಿ ಆಯಿತು. ಪ್ರತಿ ವರ್ಷವೂ ಇಂತಹ ಕಾರ್ಯಕ್ರಮ ವನ್ನು ಮಾಡೋಣ ಉತ್ತಮ ಕೆಲಸ ಮಾಡಿದವರ ಕಾರ್ಯವನ್ನು ಮೆಚ್ಚಿ ಶಬಾಶ್ ಅಂದಾಗ ಆಗುವ ತೃಪ್ತಿಯೇ ಬೇರೆ ಅದರಿಂದ ಹುಮ್ಮಸ್ಸು ಮೂಡಿ ಇನ್ನು ಹತ್ತಾರು ಕೆಲಸವನ್ನು ಮಾಡಲಿಕ್ಕೆ ಪ್ರೇರಣೆ ಬರುತ್ತದೆ ಎಂದರು. ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವವರಿಗೆ ಒತ್ತಡ ಇರುತ್ತದೆ, ಎಷ್ಟೇ ಒತ್ತಡ ಇದ್ದರು ಸಹ ಅದನ್ನು ಬದಿಗೊತ್ತಿ ಒಗ್ಗಟ್ಟಾಗಿ ಕೆಲಸ ಮಾಡಿ ಜಿಲ್ಲೆಯ ಹಿತ ದೃಷ್ಟಿಯಿಂದ ತಾಲೂಕಿನ ಹಿತ ದೃಷ್ಟಿಯಿಂದ ಹೊಸ ಆರ್ಥಿಕ ವರ್ಷದಲ್ಲಿ ತಮ್ಮ ಸೇವೆ ಹಾಗೂ ಕಾರ್ಯ ಅವಶ್ಯ ಎಂದರು.
ರೋಣ ತಹಶಿಲ್ದಾರ ನಾಗರಜ್ ಕೆ ಮಾತನಾಡಿ ಇಲಾಖೆಯ ಆಧಿನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ವಾರ್ಷಿಕವಾಗಿ ವಿಶೇಷವಾಗಿ ಕಾರ್ಯ ನಿರ್ವಹಿಸಿದವರನ್ನು ಗರುತಿಸಿ ಅವರಿಗೆ ಶಬಾಷ್ ಅನ್ನುವುದು ಒಂದು ಉತ್ತಮ ಕಾರ್ಯ ಇದನ್ನು ತಾಲೂಕ ಪಂಚಾಯತ ಅಧಿಕಾರಿಗಳು ಮಾಡಿದ್ದಾರೆ.
ಇದನ್ನು ಮಾಡುವುದರಿಂದ ಮುಂದಿನ ದಿನದಲ್ಲಿ ಉಳಿದ ಸಿಬ್ಬಂದಿಗಳಿಗೆ ಪ್ರೇರಣೆ ಬರುವ ಹಾಗೆ ಮಾಡಿದ್ದಾರೆ. ಇದು ನಿಜವಾಗಿಯೂ ಒಳ್ಳೆಯ ನಡೆ, ಆಡಳಿತಾತ್ಮಕ ದೃಷ್ಟಿಯಿಂದ ಇದು ಸ್ಪೂರ್ತಿ ನೀಡುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಸಹಾಯಕ ನಿರ್ಧಶಕರಾದ ರಿಯಾಜ ಖತೀಬ್ ( ಗ್ರಾಮೀಣ ಉದ್ಯೋಗ) ಮಾತನಾಡಿದರು. ಸಹಾಯಕ ನಿರ್ದೇಶಕರಾದ (ಪಂಚಾಯತ ರಾಜ್) ಶಿವಯೋಗಿ ರಿತ್ತಿ ಸ್ವಾಗತಿಸಿದರು. ಪಿಡಿಓ ಶಿವನಗೌಡ ಮೆಣಸಗಿ ಹಾಗೂ ಕಾವೇರಿ ಅಸೂಟಿ ಅನಿಸಿಕೆ ವ್ಯೆಕ್ತಪಡಿಸಿದರು. ಮೇಘರಾಜ ಸಿಂಗ್ರಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ ಸಿ.ಎಸ್, ನಿಲಗುಂದ, ತಾಲೂಕ ಪಂಚಾಯತಿ ವ್ಯವಸ್ಥಾಪಕರಾದ ದೇವರಾಜ ಸಜ್ಜನಶೆಟ್ಟರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೀತಾ, ಪಿಡಿಓ ಸಂಘದ ತಾಲೂಕ ಅಧ್ಯಕ್ಷರಾದ ಲೋಹಿತ ಪೂಜಾರ ಸೇರಿದಂತೆ
ಪಿಡಿಒಗಳು, ತಾಂತ್ರಿಕ ಸಹಾಯಕರು, ಡಿಇಒಗಳು, ಬಿಎಫ್.ಟಿ, ಗ್ರಾಮ ಕಾಯಕ ಮಿತ್ರರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ತಾಲೂಕ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು…