ವಿಪ್ರಶ್ರೀ, ಜಗನ್ನಾಥ ವಿಠ್ಠಲ ಪ್ರಶಸ್ತಿಗೆ ಸಾಧಕರ ಆಯ್ಕೆ
ಕಲಬುರಗಿ:ಮಾ.8: ವಿಶ್ವಮಧ್ವ ಮಹಾಪರಿಷತ್ತಿನ ಅಂಗಸಂಸ್ಥೆಯಾದ ನಗರದ ಹರಿದಾಸ ಸಾಹಿತ್ಯ ಪ್ರಚಾರವಾಹಿನಿಯ 23ನೇ ವಾರ್ಷಿಕೋತ್ಸವ ಮಾರ್ಚ್ 10ರಂದು ನಡೆಯಲಿದ್ದು, ಅದರಂಗವಾಗಿ ವಾಹಿನಿಯಿಂದ ಕೊಡಮಾಡುವ 2023-24ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಸನ್ಮಾನಿತರ ಹೆಸರುಗಳನ್ನು ಸಹ ಆಯ್ಕೆ ಮಾಡಿ ಪ್ರಕಟಿಸಲಾಗಿದೆ.
ದಿ. 10ರಂದು ಸಂಜೆ 6 ಗಂಟೆಗೆ ಬ್ರಹ್ಮಪುರದ ನ್ಯೂ ರಾಘವೇಂದ್ರ ಕಾಲೋನಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಖ್ಯಾತ ವಕೀಲರಾದ ರಾಘವೇಂದ್ರ ನಾಡಗೌಡರು ಹಾಗೂ ವಿಶ್ವಮಧ್ವ ಮಹಾಪರಿಷತ್ ಕಲಬುರಗಿ ಘಟಕದ ಅಧ್ಯಕ್ಷರಾದ ಡಿ.ಕೆ. ಕುಲಕರ್ಣಿ ಅತಿಥಿಗಳಾಗಿ ಆಗಮಿಸುವರು.
ಪ್ರಶಸ್ತಿಗೆ ಆಯ್ಕೆಯಾದವರ ವಿವರ:
ಭಜನಾ ಮಂಡಳಿಗಳನ್ನು ಕಟ್ಟಿ, ಬೆಳೆಸಿ ದಾಸರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯುತ್ತ ಸಾಧನೆಗೈಯುತ್ತಿರುವುದಕ್ಕಾಗಿನ ಸನ್ಮಾನಕ್ಕೆ ಆಯ್ಕೆಯಾದವರು:- ನಳಿನಿ ತುಮಾರನವಿಸ್, ಸಾವಿತ್ರಿ ದೇಶಪಾಂಡೆ, ಮಾಲಾಬಾಯಿ, ಕಾಮಾಕ್ಷಿ ಜಹಗೀರದಾರ, ಸುಧಾ ಕುಲಕರ್ಣಿ, ಗಿರಿಜಾ ವೆಂಕಣ್ಣಾಚಾರ್ಯ, ರುಕ್ಮಿಣಿ ಡಿ. ಕುಲಕರ್ಣಿ, ಸುವರ್ಣಾ ದೇಶಮುಖ, ಮಂಜುಳಾ ಹೊಸೂರಕರ್, ಸವಿತಾ ಕಂದರ್ಪಿ, ರೇಖಾ ದೇಶಪಾಂಡೆ, ಅನುರಾಧಾ ದೇಶಮುಖ, ಅಶ್ವಿನಿ ಕುಲಕರ್ಣಿ, ನಾಗವೇಣಿ ಜೋಶಿ, ಪುಷ್ಪಾ ಅಗ್ನಿಹೋತ್ರಿ, ಜಯಶ್ರೀ ಕುಲಕರ್ಣಿ, ಸುಲಭಾ ಕುಲಕರ್ಣಿ, ಪ್ರತಿಭಾ ಕುಲಕರ್ಣಿ, ಪಲ್ಲವಿ ಕೊಪ್ಪರ.
ಶೋಭಾಯಾತ್ರೆ
ಪ್ರಶಸ್ತಿ ಪ್ರದಾನ ಸಮಾರಂಭದ ಮುನ್ನ 10ರಂದು (ರವಿವಾರ) ಸಂಜೆ 5 ಗಂಟೆಗೆ ಬ್ರಹ್ಮಪುರ ಉತ್ತರಾದಿ ಮಠದಿಂದ ಶ್ರೀ ವೆಂಕಟೇಶ್ವರ ದೇವಸ್ಥಾನದವರೆಗೆ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸನ ಹಾಗೂ ದಾಸರ ಭಾವಚಿತ್ರದ ಶೋಭಾಯಾತ್ರೆ ನಡೆಯಲಿದೆ. ಭಕ್ತರು ಭಾಗವಹಿಸಬೇಕೆಂದು ಹರಿದಾಸ ಸಾಹಿತ್ಯ ಪ್ರಚಾರವಾಹಿನಿಯ ಅಧ್ಯಕ್ಷರಾದ ಪಂ. ಗೋಪಾಲಾಚಾರ್ಯ ಅಕಮಂಚಿ, ಉಪಾಧ್ಯಕ್ಷರಾದ ಪ್ರೊ. ವ್ಯಾಸರಾಜ ಸಂತೆಕೆಲ್ಲೂರ, ಸಂಚಾಲಕರಾದ ಭೀಮಭಟ್ಟ ಬೆಂಕಿ ಮೋತಕಪಲ್ಲಿ ಕೋರಿದ್ದಾರೆ.