ವಿಶೇಷ ಪೂಜೆ ಪವಿತ್ರೋತ್ಸವ
ಮಾಲೂರು.ಸೆ.೧೬-ತಾಲೂಕಿನ ಚಿಕ್ಕ ತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪವಿತ್ರೋತ್ಸವ ಜರುಗಿತು.
ಭಕ್ತಾದಿಗಳು ಹಾಗೂ ಸೇವಾ ಕರ್ತರ ಸಹಕಾರದಿಂದ ಸ್ವಾಮಿಗೆ ಪವಿತ್ರೋತ್ಸವ, ದೇವಾಲಯದ ಪ್ರಧಾನ ಅರ್ಚಕ ರವಿ ನೇತೃತ್ವದ ಅವರ ತಂಡವು ಶ್ರದ್ಧಾ ಭಕ್ತಿಯಿಂದ ವಿವಿಧ ರೀತಿಯ ಪೂಜಾ ಕೈಂಕರ್‍ಯಗಳನ್ನು ನಡೆಸುವುದರ ಮೂಲಕ ಪವಿತ್ರೋತ್ಸವ ನಡೆಯಿತು.
ಪವಿತ್ರೋತ್ಸವ ಅಂಗವಾಗಿ ಸೇವಾ ಕರ್ತರ ಸಹಕಾರದಿಂದ ಸೆ.೧೪ರಂದು ಪವಿತ್ರೋತ್ಸವ ಕಾರ್ಯಕ್ರಮಗೊಂಡು ೧೫ ರಂದು ಹೋಮ ಪವಿತ್ರ ಧಾರಣೆ ಸ್ವಾಮಿಯ ಉತ್ಸವ ನಡೆಯಿತು ಸೆ.೧೬ರಂದು ಪ್ರಸನ್ನ ವೆಂಕಟರಮಣ ಸ್ವಾಮಿಗೆ ಅಭಿಷೇಕದ ನಂತರ ವಿಶೇಷ ಹೂವಿನ ಹಾಗೂ ಆಭರಣ ಸಮೇತ ಅಲಂಕಾರ ಮಾಡಲಾಗಿತ್ತು, ದೇವಾಲಯದ ಆವರಣದಲ್ಲಿ ನಡೆದ ಹೋಮ ಪೂರ್ಣಾಹುತಿ ನಂತರ ಸ್ವಾಮಿಗೆ ಮಹಾಮಂಗಳಾರತಿ ನಡೆಯಿತು.
ಪವಿತ್ರೋತ್ಸವ ಕಾರ್ಯಕ್ರಮಕ್ಕೆ ಆಗಮಸಿದ್ಧ ಭಕ್ತಾದಿಗಳು ಮಂಗಳಾರತಿ ನಂತರ ತೀರ್ಥ ಪ್ರಸಾದ ಸ್ವೀಕರಿಸಿದರು.
ಜಿಲ್ಲಾ ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ, ಪೇಷ್ಕರ್ ಚೆಲುವರಾಜ್, ಮುಖಂಡ ವೆಂಕಟೇಶ್ ಗೌಡ, ದೇವಾಲಯ ಸಮಿತಿಯ ಮಾಜಿ ಸದಸ್ಯ ಸುರೇಶ್, ಸೇವಾ ಕರ್ತರಾದ ಬಾಬುರೆಡ್ಡಿ, ಇನ್ನಿತರರು ಪವಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.