ಗುಂಪು ಘರ್ಷಣೆ-ನಾಲ್ವರಿಗೆ ಗಾಯ
ಕೋಲಾರ,ಸೆ,೧೭-ಈದ್ ಮಿಲಾದ್ ಮೆರವಣಿಗೆಯಲ್ಲಿ ಹಳೆಯ ವೈಷ್ಯಮದ ಹಿನ್ನಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ನಾಲ್ವರು ಗಾಯಗೊಂಡ ಘಟನೆ ನಗರದ ಅಂಜುಮಾನ್ ಇಸ್ಲಾಂಮಿಯ ಸಂಸ್ಥೆ ಬಳಿ ಸೋಮವಾರ ಸಂಜೆ ನಡೆದಿದೆ.
ಗಾಯಾಳುಗಳನ್ನು ಸೈಯದ್ ಸಲ್ಮಾನ್, ಸೈಯದ್ ಸೈಫ್, ಹುಸೇನ್ ಕಾಷಿಪ್, ಖಲೀಲ್ ಅಹಮದ್ ಎಂದು ಗುರುತಿಸಲಾಗಿದೆ
ಹಳೆಯ ವೈಷ್ಯಮದ ಹಿನ್ನಲೆಯಲ್ಲಿ ಹಾಗೂ ವಕ್ಫ್ ಕಾಯ್ದೆಗೆ ವಿರೋಧವಾಗಿದ್ದ ಪ್ಯಾಲೇಸ್ತೇನ್ ಸಂಘನೆಯ ಕಾರಣಕ್ಕಾಗಿ ನಡೆದ ಮಾತಿನ ಚಕಮಕಿಯಲ್ಲಿ ಸೆಯ್ಯದ್ ವಾಸೀಂ ಪಾಷಾ, ಥಾಹೀರ್ ಎಂಬುವರು ಮತ್ತೊಂದು ಗುಂಪಿನಿಂದ ನಾಲ್ವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಗಾಯಾಳುಗಳನ್ನು ನಗರದ ಜಿಲ್ಲಾ ಎಸ್.ಎನ್.ಆರ್. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ.
ಸ್ಥಳದಲ್ಲಿ ನಿಯೋಜಿತ ನಗರ ಠಾಣಾ ಪೊಲೀಸರು ಕೊಡಲೇ ಎರಡು ಗುಂಪನ್ನು ಚದುರಿಸುವ ಮೂಲಕ ಉಂಟಾಗ ಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಬೇಟಿ ನೀಡಿ ಪೊಲೀಸ್ ಅಧಿಕಾರಿಗಳಿಗೆ ಮುನ್ನೆಚ್ಚರಿಕೆಯ ಸೂಚನೆಗಳನ್ನು ನೀಡಿದರು.
ಈ ಘಟನೆ ನಂತರ ಪ್ರಕ್ಯುಬ್ದ ವಾತವರಣ ಸಹಜ ಸ್ಥಿತಿಗೆ ಮರಳಿತು. ನಿಗಧಿಪಡೆಸಲಾಗಿದ್ದ ಮೆರವಣಿಗೆಯು ಶಾಂತರೀತಿಯಲ್ಲಿ ಮುಂದುವರೆದು ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಅಂಜುಮಾನ್ ಸಂಸ್ಥೆವರೆಗೂ ಮುಂದುವರೆಯಿತು. ಘಟನೆಗೆ ಕಾರಣವಾದ ಆರೋಪಿಗಳಿಗಾಗಿ ನಗರಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಫ್ರೀಪ್ಯಾಲೇಸ್ತೇನ್ ಬಾವುಟ ಪ್ರದರ್ಶನ:
ಚಿಕ್ಕಮಗಳೂರು ಬಳಿಕ ಕೋಲಾರದಲ್ಲೂ ಹಾರಾಡಿದ ಪ್ಯಾಲೇಸ್ತೇನ್ ಪರ ಕೂಗು ಮುಂದುವರೆದ ಪ್ರಕರಣ ನಗರದ ಅಂಜುಮಾನ್ ಸಂಸ್ಥೆ ಎದುರು ನಡೆಯಿತು. ಪ್ರೀ ಪ್ಯಾಲೇಸ್ತೇನ್ ಎಂದು ಬರೆಯಲಾಗಿದ್ದ ಬಾವುಟ ನಗರಠಾಣೆಯ ಸಿಪಿಐ ಸದಾನಂದ ಬಾವುಟ ಹಾರಾಟ ಮಾಡದಂತೆ ತಿಳಿ ಹೇಳಿದ ಬಳಿಕ ಫ್ರೀ ಪ್ಯಾಲೇಸ್ತೇನ್ ಎಂದು ಬರೆದಿದ್ದ ಬಾವುಟ ತೆರವುಗೊಳಿಸಿದರು.