ಸ್ಕೌಟ್ಸ್ ಗೈಡ್ಸ್‌ನಿಂದ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಸಾಧ್ಯ
ಕೋಲಾರ,ಸೆ,೧೭:ಭಾರತ ದೇಶ ಇಂದು ವಿಶ್ವದ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿರುವ ಸಂಗತಿ ಎಲ್ಲರಗೂ ತಿಳಿದಿದೆ, ಆದರೆ ಈ ಜನಸಂಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಎಲ್ಲಾ ರೀತಿಯ ಸೌಲಭ್ಯಗಳು ಸಿಗಲು ಜನಸಂಖ್ಯೆಯಂತೆ ಭೂಮಿ, ನೀರು,ಪರಿಸರ, ಹೆಚ್ಚಾಗುತ್ತಿಲ್ಲ, ಆದ್ದರಿಂದ ಎಲ್ಲಾ ರೀತಿಯ ಸೌಲಭ್ಯಗಳು ಸರ್ಕಾರ ನೀಡಲಿ ಎಂದು ಕೂರದೇ ಸ್ವಯಂ ಉಧ್ಯೋಗದತ್ತ ಯುವಕರು ಆಸಕ್ತಿವಹಿಸಿ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಮುಖ್ಯ ಅಯುಕ್ತ ಕೆ.ವಿ.ಶಂಕರಪ್ಪ ತಿಳಿಸಿದರು.
ಬಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಸಂಸ್ಥೆ, ಜಿಲ್ಲಾ ಸಂಸ್ಥೆ ಮತ್ತು ರೋಟರಿ ಕೋಲಾರ ನಂದಿನಿ ಸಂಸ್ಥೆಗಳ ಆಶ್ರಯದಲ್ಲಿ ನಗರದ ಸ್ಕೌಟ್ ಭವನದಲ್ಲಿ ರಾಜ್ಯ ಮಟ್ಟದ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ಟಿಕಲ್ಸ್ ವಸ್ತುಗಳ ರಿಪೇರಿ ಮತ್ತು ಮಾಹಿತಿ ತರಬೇತಿ ಶಿಬಿರ ಮತ್ತು ಜಿಲ್ಲಾ ಮಟ್ಟದ ಪ್ರೇರಣಾ ಶಿಬಿರವನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದೇಶದಲ್ಲಿ ಶಾಲಾ ಮಕ್ಕಳನ್ನು ಉತ್ತಮ ನಾಗರೀಕರಾಗಲು ಹಾಗೂ ಅವರ ಭವಿಷ್ಯಕ್ಕೆ ಅಗತ್ಯವಾದ ತರಬೇತಿಗಳನ್ನು ಆಯೋಜಿಸುತ್ತಿರುವ ಸಂಸ್ಥೆ ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ರವರ ನಾಯಕತ್ವದಲ್ಲಿ ಯುವಜನರಿಗೆ ಬೇಕಾದ ಕೌಶಲ ತರಬೇತಿಗಳನ್ನು ಆಯೋಜಿಸಿ ಯುವಜನತೆ ತಮ್ಮ ಭವಿಷ್ಯದಲ್ಲಿ ಯಾವುದೇ ಉಧ್ಯೋಗಕ್ಕಾಗಿ ಕಾಯದೇ ತಮಗೆ ಇಷ್ಟವಾದ ರಂಗದಲ್ಲಿ ಸ್ವಯಂ ಉಧ್ಯೋಗವನ್ನು ರೂಪಿಸಿಕೊಂಡು ತಾವು ಇತರೆ ನಿರುಧ್ಯೋಗಿಗಳಿಗೆ ಉಧ್ಯೋಗವನ್ನು ಸೃಷ್ಟಿಸುವಂತಾಗಬೇಕು ಎನ್ನುವ ಮಹದಾಸೆ ಇಂದ ಇಂತಹ ಶಿಬಿರಗಳಿಗೆ ಪ್ರೋತ್ಸಾಹ ನೀಡಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಜಿಲ್ಲಾ ಮಹಿಳಾ ಸಂರಕ್ಷಣಾ ಕೇಂದ್ರದ ಅಧ್ಯಕ್ಷೆ ಮಂಗಳ ವಿ. ಗೌಡ ರವರು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಆಧುನಿಕ ಜಗತ್ತಿನಲ್ಲಿ ಮಹಿಳೆ ಪುರುಷ ಎಂಬ ಬೇಧ ಭಾವ ಇಲ್ಲದೇ ಎಲ್ಲರೂ ಸಮಾನರು , ಎಲ್ಲರಿಗೂ ಮುಕ್ತವಾದ ಅವಕಾಶವಿದೆ ಇದನ್ನು ಅರಿತು ಬಾಳಿದರೆ ಜೀವನ ಸ್ವರ್ಗವಾಗಲಿದೆ. ಇತ್ತಿಚೀನ ಪ್ರಕರಣಗಳನ್ನು ಗಮಿಸಿದರೆ ಮನುಷ್ಯ ಮಾನವೀಯ ಮೌಲ್ಯಗಳನ್ನು ಮರೆತು ರಾಕ್ಷಸನ ರೂಪದಲ್ಲಿ ವರ್ತಿಸುತ್ತಿರುವುದು ಸಮಾಜದಲ್ಲಿ ಅಶಾಂತಿ ಹೆಚ್ಚಾಗುತ್ತಿದೆ, ಯುವಜನತೆ ನಮ್ಮ ಸಂವಿಧಾನವನ್ನು ಓದಿ ಅರ್ಥಮಾಡಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಸಮಾಜ ಸೇವಕರಾದ ಸಿ.ಎಂ.ಆರ್. ಶ್ರೀನಾಥ್ ರವರು ಮಾತನಾಡಿ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಅಂತರ್ ರಾಷ್ಟೀಯ ಮನ್ನಣೆಯನ್ನು ಪಡೆದು ಯುವಜನತೆಯನ್ನು ಉತ್ತಮ ನಾಗರೀಕರನ್ನಾಗಿ ತಯಾರು ಮಾಡಲು ಬೇಕಾದ ಅನೇಕವಿಧವಾದ ತರಬೇತಿ ಮತ್ತು ಶಿಬಿರಗಳನ್ನು ಆಯೋಜನೆ ಮಾಡಿದ್ದು ಇಂತಹ ಸಂಸ್ಥೆಗೆ ಸ್ಥಳೀಯ ಸರ್ಕಾರಗಳು ಜಿಲ್ಲೆಯಲ್ಲಿ ಸಹಕಾರ ನೀಡದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ರವರ ನಾಯಕತ್ವದಲ್ಲಿ ದಾನಿಗಳ ಸಹಕಾರ ಪಡೆದು ಕಟ್ಟಡವನ್ನು ನಿರ್ಮಿಸಿ ಈ ಕಟ್ಟಡದಲ್ಲಿ ಅನೇಕ ತರಬೇತಿಗಳಿಂದ ಸಾವಿರಾರು ಜನರಿಗೆ ಉಪಯೋಗವಾಗಿದೆ.
ರಾಜ್ಯ ಮಟ್ಟದ ಶಿಬಿರವನ್ನು ಪ್ರತಿ ವರ್ಷ ಆಯೋಜನೆ ಮಾಡುತ್ತಿರವುದು ನಮ್ಮ ಜಿಲ್ಲೆಯ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಡಾ.ರಮೇಶ್, ಸಂಪನ್ಮೂಲ ವ್ಯಕ್ತಿ ಮೋಹನ್, ಬೇವಹಳ್ಳಿ ಶಂಕರ್, ರತ್ನಮ್ಮ, ವಿಠಲ್ ರಾವ್ ರವರು ಮಾತನಾಡಿದರು, ಈ ಸಂದರ್ಭದಲ್ಲಿ ಶಿಬಿರದ ನಾಯಕರಾದ ಮಂಜುನಾಥ್, ಸ್ಕೌಟ್ ಆಯುಕ್ತರಾದ ಸುರೇಶ್, ಪಲ್ಲವಿ,ಕೃಷ್ಣಮೂರ್ತಿ, ವಿಙಶ್, ಸ್ಕೌಟ್ ಬಾಬು, ನವೀನ್ ಮುಂತಾದವರು ಉಪಸ್ಥಿತರಿದ್ದರು.