ಸಚಿವರ ಮಾತಿಗೆ ಕಿಮ್ಮತ್ತಿಲ್ಲ,ವಿದ್ಯಾರ್ಥಿ ವೇತನ ವಿತರಣೆಯಿಲ್ಲ
ಕೋಲಾರ.ಸೆ,೧೫- ಕೋಲಾರ ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಾನಂದ ಅವರು ವರ್ಗಾವಣೆಯಾಗಿ ಸುಮಾರು ಒಂದು ತಿಂಗಳು ಕಳೆದರೂ ಸಹ ಇನ್ನು ಅವರ ಸ್ಥಾನಕ್ಕೆ ಬೇರೆ ಅಧಿಕಾರಿಗಳನ್ನು ನಿಯೋಜಿಸದ ಹಿನ್ನಲೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ನಗರಸಭೆಯಲ್ಲಿ ನೆನಗುದಿಗೆ ಬಿದ್ದಿದೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.
ನಗರಸಭೆಯ ಪೌರಾಯುಕ್ತರ ಹುದ್ದೆಯನ್ನು ನಗರಾಯೋಜನಾ ನಿರ್ದೇಶನಾಲಯ ಅಧಿಕಾರಿಗಳಿಗೆ ನಿಯೋಜಿತರಾಗಿದ್ದು ಅದರೆ ಅವರ ನಗರಸಭೆಗೆ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಲು ಮಾತ್ರ ಸೀಮಿತವಾಗಿದ್ದು ಸಾರ್ವಜನಿಕರ ಪಾಲಿಗೆ ಅವರ ದರ್ಶನವೇ ಸಿಗುತ್ತಿಲ್ಲ. ಕಳೆದ ೨೦೨೩-೨೪ ನೇ ಸಾಲಿನ ವಿದ್ಯಾರ್ಥಿ ವೇತನ ಎಸ್.ಸಿ.ಎಸ್.ಟಿ. ವರ್ಗಕ್ಕೆ ನೀಡಿ ಎರಡು ತಿಂಗಳು ಕಳೆದರೂ ಸಹ ಸಾಮಾನ್ಯ ವರ್ಗದವರಿಗೆ ಮಾತ್ರ ವಿತರಣೆ ಮಾಡದೆ ನೆನಗುದಿಗೆ ಬಿದ್ದಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿ ವೇತನವನ್ನು ಹಿಂದಿನ ವರ್ಷದ್ದು ವಿತರಿಸದೆ ಪ್ರಸಕ್ತ ಸಾಲಿನ ೨೦೨೪-೨೫ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿರುವುದು ಎಷ್ಟು ಮಾತ್ರ ಸಮಾಂಜಸವಾಗಿದೆ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಸಂಬಂಧವಾಗಿ ಆಗಸ್ಟ್ ೧೫ ರಂದು ಪತ್ರಿಕಾ ಗೋಷ್ಠಿಯಲ್ಲಿ ಸಂಬಂಧ ಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ದಿ, ನಗರಯೋಜನಾ ಸಚಿವರು ಅಗಿರುವ ಬೈರತಿ ಸುರೇಶ್ ಮತ್ತು ಜಿಲ್ಲಾ ಮುಖ್ಯ ಮಂತ್ರಿಗಳ ಕಾರ್ಯದರ್ಶಿಗಳ ನಸ್ಸೀರ್ ಆಹಮದ್ ಅವರ ಗಮನಕ್ಕೆ ತರಲಾಗಿತ್ತು ಈ ಸಂದರ್ಭದಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದು ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿ ಒಂದು ತಿಂಗಳು ಅಗಿದೆ ಅದರೆ ಈವರೆಗೆ ವಿತರಣೆಯಾಗದೆ ವಿದ್ಯಾರ್ಥಿಗಳು ನಗರಸಭೆ ಆಲೆದಾಡಿ ಎರಡು ಜೂತೆ ಚಪ್ಪಲಿ ಸವೆಸಿದರೂ ಸಹ ಇನ್ನು ಬಿಡುಗಡೆ ಮಾಡದೆ ಆಗೋ ಈಗೋ ಎಂದು ಕಾಲಹರಣ ಮಾಡಲಾಗುತ್ತಿದೆ
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಸೂಚನೆ ನೀಡಿ ಒಂದು ತಿಂಗಳು ಕಳೆದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ತಮ್ಮ ಇಲಾಖೆಯ ಸಚಿವರಿಗೆ ಕಿಮ್ಮತ್ತಿನ ಬೆಲೆಯು ನೀಡದೆ ಇರುವುದು ಶಾಸಕಾಂಗದ ಸೂಚನೆಗಳಿಗೆ ಕಾರ್ಯಾಂಗವು ಎಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುವುದು ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ,
ಇದೇ ರೀತಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣೆಯ ಅಧಿಕಾರಿಗಳಾಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿ ಕೊಂಡಿದ್ದಾರೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕೆಲಸದ ಒತ್ತಡ ತೀವ್ರತೆಯಿಂದಾಗಿ ನಗರಸಭೆ ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ ಸಮರ್ಪವಾದ ಕೆಲಸಗಳು ಆಗದೆ ವಿಳಂಭತೆಗೆ ಕಾರಣವಾಗಿತ್ತು. ನಂತರದಲ್ಲಿ ಕೆಲ ದಿನಗಳ ಹಿಂದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳನ್ನು ನಿಯೋಜಿಸಲಾಗಿತ್ತು ಅದರೆ ಅವರು ವರ್ಗಾವಣೆಯ ಪ್ರಯತ್ನದಿಂದಾಗಿ ಕೆಲಸಕ್ಕೆ ನಿರಂತರ ಗೈರು ಹಾಜರಾಗಿದ್ದಾರೆ. ಹಾಗಾಗಿ ಈ ಕೆಲಸವನ್ನು ಸಹ ಜಿಲ್ಲಾಧಿಕಾರಿಗಳೇ ಕಾರ್ಯನಿರ್ವಹಿಸ ಬೇಕಾಗಿರುವ ಹಿನ್ನಲೆಯಲ್ಲಿ ಪಂಚಾಯತ್ ಅಭಿವೃದ್ದಿ ಕಾರ್ಯಗಳು ಬಹುತೇಕ ಹಿನ್ನಡೆ ಉಂಟಾಗಿದೆ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳ ೫೪ ಇಲಾಖೆಯ ಉಸ್ತುವಾರಿ ಗಮನಿಸುವ ಜೊತೆಗೆ ಹೆಚ್ಚುವರಿಯಾಗಿ ಮತ್ತಷ್ಟು ಜವಾಬ್ದಾರಿಗಳನ್ನು ನೀಡಿದರೆ ಎಷ್ಟು ಮಾತ್ರ ಕಾರ್ಯ ನಿರ್ವಹಿಸಲು ಸಾಧ್ಯ ?
ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೇವಲ ೬೫ ಕಿ.ಮಿ. ಅಂತರದಲ್ಲಿರುವ ಕೋಲಾರ ಏಕೆ ಅಭಿವೃದ್ದಿಯಾಗುತ್ತಿಲ್ಲ ಎಂದರೆ ಇಂಥಹ ಜನಪ್ರತಿನಿಧಿಗಳ ಇಂಥಹ ಕಾರ್ಯವೈಖರಿಗಳು ಹಾಗೂ ಅವ್ಯವಸ್ಥೆಗಳಿಂದಾಗಿ ಕೋಲಾರವು ಸ್ವಾತಂತ್ರ್ಯ ಬಂದು ೭೭ ವರ್ಷಗಳೇ ಕಳೆದರೂ ಸಹ ಕೋಲಾರ ಇನ್ನು ದೊಡ್ಡ ಹಳ್ಳಿಯಾಗಿ ಉಳಿದಿದೆ. ಕನಿಷ್ಟ ರಸ್ತೆಗಳು ವಿಸ್ತರಣೆ ಮಾಡಲಾಗದೆ ಓಬಿರಾಯನ ಕಾಲದ ರಸ್ತೆಗಳಿದ್ದು ಸಾರ್ವಜನಿಕರು ನಗರದೊಳಗೆ ವಾಹನ ಹಾಗೂ ಪಾದಚಾರಿಗಳ ಸಂಚರಿಸಲು ಸರ್ಕಸ್ಸ್ ಮಾಡಿ ಕೊಂಡು ಸಂಚರಿಸ ಬೇಕಾದ ದುಃಸ್ಥಿತಿ ಉಂಟಾಗಿರುವುದನ್ನು ಸಚಿವರು ಶಾಸಕರುಗಳು ಹವನಿಯಂತ್ರಣಾದ ಸರ್ಕಾರಿ ಕಾರುಗಳಿಂದ ಇಳಿದು ನಗರದಲ್ಲಿ ಪಾದಯಾತ್ರೆ ನಡೆಸಿದರೆ ಜನರ ಸಮಸ್ಯೆಗಳು ಅರ್ಥವಾಗಲು ಸಾಧ್ಯ ಎಂಬುವುದು ಸಾರ್ವಜನಿಕರ ಪ್ರತಿಪಾದನೆಯಾಗಿದೆ.