ಎತ್ತಿನ ಹೊಳೆ ಯೋಜನೆ ಒಂದು ವರ್ಷದಲ್ಲಿ ಪೂರ್ಣ
ಕೋಲಾರ,ಸೆ,೧೭:ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನ ಹೊಳೆ ಯೋಜನೆಯ ಇನ್ನೊಂದು ವರ್ಷದಲ್ಲಿ ಶೇ ೧೦೦ ರಷ್ಟು ಪೂರ್ಣಗೊಳಿಸುವುದು ಖಚಿತ. ಎರಡು ಜಿಲ್ಲೆಗಳಿಗೆ ಪೈಪುಗಳ ಮೂಲಕ ಪೂರೈಕೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲಾಗುವುದು ಎಂದು ರಾಜ್ಯ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ವಷ್ಟಪಡೆಸಿದರು.
ನಗರದ ಅಂಜುಮಾನ್ ಸಮಿತಿಯ ಅಧ್ಯಕ್ಷ ಜಮೀರ್ ಆಹ್ಮದ್ ಅವರ ಮನೆಗೆ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಮುಖಂಡರಿಗೆ ಹಾರೈಕೆ ಮಾಡಲು ಆಯೋಜಿಸಿದ್ದ ಸಭೆಯ ನಂತರ ಮಾದ್ಯಮದವರೊಂದಿಗೆ ಅವರು ಮಾತನಾಡಿ ಈ ಯೋಜನೆಯ ತಾಂತ್ರಿಕ ಅಭಯಂತರರೊಂದಿಗೆ ಚರ್ಚಿಸಿದಾಗ ಈ ಯೋಜನೆಯ ಪ್ರಕಾರ ೭ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಹಾಸನದಿಂದ ರಾಜ್ಯದ ಗಡಿಯ ಭಾಗ ನಂಗಲಿಯವರೆಗೆ ಕುಡಿಯುವ ನೀರಿನ ಪೂರೈಕೆಗೆ ೧೬ ಟಿ.ಎಂ.ಸಿ. ನೀರು ಸಾಕಾಗುತ್ತದೆ. ಉಳಿದ ೮ ಟಿ.ಎಂ.ಸಿ.ನೀರನ್ನು ೭ ಜಿಲ್ಲೆಯ ಕೆರೆಗಳಿಗೆ ಸಮಾಂತರವಾಗಿ ಹರಿಸಲಾಗುವುದು ಎಂದರು.
ನಮ್ಮ ನಿರೀಕ್ಷೆ ೨೭-೨೮ ಟಿ.ಎಂ.ಸಿ. ನೀರು ಲಭ್ಯವಾಗ ಬಹುದೆಂಬ ನಿರೀಕ್ಷೆ ಇತ್ತು ಅದರೆ ೨೪ ಟಿ.ಎಂ.ಸಿ. ನೀರು ಲಭ್ಯವಾಗುವುದು ಖಚಿತವಾಗಿದೆ. ಈಗಾಗಲೇ ಈ ಯೋಜನೆಯು ಪೂರ್ಣಗೊಳ್ಳ ಬೇಕಾಗಿತ್ತು ಅದರೆ ಈ ಹಿಂದಿನ ಸರ್ಕಾರಗಳು ಈ ಯೋಜನೆಗೆ ಹೆಚ್ಚಿನ ಅದ್ಯತೆ ನೀಡದ ಕಾರಣ ನೆನಗುದಿಗೆ ಬಿದ್ದಿತ್ತು, ಕೊರಟೆಗೆರೆಯಿಂದ ೨೩೦ ಕಿ.ಮಿ.ಪೈಪುಗಳ ಮೂಲಕ ನೀರು ಹರಿಸಲಾಗುವುದು. ಮಧ್ಯದಲ್ಲಿ ಅಕ್ರಮವಾಗಿ ನೀರಿನ ಸಂರ್ಪಕ ಪಡೆಯುವವರ ವಿರುದ್ದ ಕಾನೂನು ಕ್ರಮವನ್ನು ಜರುಗಿಸಲಾಗಿಸುವುದ ಎಂದ ಅವರು ಈ ಯೋಜನೆಗೆ ಚಾಲನೆ ನೀಡಿದ ಸಿದ್ದರಾಮಯ್ಯನವರೇ ಮರುಚಾಲನೆ ನೀಡಲು ಕಾಂಗ್ರೇಸ್ ಸರ್ಕಾರದ ಸಿದ್ದರಾಮಯ್ಯನವರೇ ಬರ ಬೇಕಾಯಿತು ಎಂದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಅಂಜುಮಾನ್ ಇಸ್ಲಾಂಮೀಯ ಸಮಿತಿ ಅಧ್ಯಕ್ಷ ಜಮೀರ್ ಆಹಮದ್, ಮುಸ್ಲಿಂ ಸಮುದಾಯದ ಮುಖಂಡರಾದ ಮುಸ್ತಾಫಾ ಸಾಬ್, ಬ್ಲಾಕ್ ಕಾಂಗ್ರೇಸ್ ಅದ್ಯಕ್ಷರಾದ ಪ್ರಸಾದ್ ಬಾಬು. ಉದಯಶಂಕರ್,ಮಾಲೂರು ಮಧುಸೂದನ್, ಎಸ್.ಸಿ.ಘಟಕದ ಅಧ್ಯಕಷ ಜಯದೇವ್, ಆಲ್ಪಸಂಖ್ಯಾತ ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷರಾದ ಎಲ್.ಖಲೀಲ್ ಆಹಮದ್, ಆಸ್ಲಾಂಪಾಷ,ಮಾಜಿ ಸದಸ್ಯ ಬಾಬಾಜಾನ್ ಮುಂತಾದವರು ಉಪಸ್ಥಿತರಿದ್ದರು,