ವಿಶ್ವಕ್ಕೆ ಉತ್ತಮ ಮಾರ್ಗದರ್ಶನ ನೀಡಿದ ಕೀರ್ತಿ ವೀರಶೈವ ಧರ್ಮದ್ದು
ಮುದ್ದೇಬಿಹಾಳ: ಮಾ.8:ಈ ನಾಡಿಗೆ ದೇಶಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಸಂಸ್ಕಾರ, ಸಂಸ್ಕøತಿ ಆಚಾರ ವಿಚಾರಗಳ ಜಾಗೃತಿ ಮೂಡಿಸುವ ಮೂಲಕ ಒಳ್ಳೆಯ ಮಾರ್ಗದರ್ಶನ ನೀಡಿದ ಕೋಡುಗೆ ವೀರಶೈವ ಧರ್ಮಕ್ಕೆ ಸಲ್ಲುತ್ತದೆ ಅಷ್ಟೋಂದು ಪರಂಪರೆ ಇತಿಹಾಸವನ್ನು ಉಳ್ಳಧರ್ಮ ಇದಾಗಿದೆ ಇಂತಹ ಶ್ರೇಷ್ಠ ಧರ್ಮದಲ್ಲಿ ಜನಿಸಿ ಇಂದು ಪಂಚಪೀಠಾಧೀಶರ ಸಮ್ಮುಖದಲ್ಲಿ ಅವರ ಆಶಿರ್ವಾದದಿಂದ ಕುಂಟೋಜಿ ಶ್ರೀ ಚನ್ನವೀರದೇವರುರವರ ಪಟ್ಟಾಧಿಕಾರ ಕಾರ್ಯಕ್ರಮ ನಡೆದಿರುವುದು ಮತ್ತುಷ್ಟು ಸಾಮಾಜಿಕ ಜವಾಬ್ದಾರಿ ನೀಡಿದಂತಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿರೇಮಠ ಸಂಸ್ಥಾನದ ಶ್ರೀ ಚನ್ನವೀರ ದೇವರು ಅವರು ಪಟ್ಟಾಧಿಕಾರ ಹಾಗೂಧರ್ಮ ಸಭೆಯ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಅಣ್ಣ ಬಸವಣ್ಣವರು ಬೆರೋಂದು ಧರ್ಮದಲ್ಲಿ ಜನಿಸಿದರೂ ಕೂಡ ಪವಿತ್ರ ವೀರಶೈವ ಧರ್ಮವನ್ನು ಒಪ್ಪಿ ಅಪ್ಪಿಕೊಂಡು ತಮ್ಮ ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದ್ದರಿಂದ ಇಂದು ಬಸವಣ್ಣನವರು ವಿಶ್ವಗುರು ಆಗಿ ಪ್ರಸಿದ್ಧಿಯಾದರು. ಇಂತಹ ಧರ್ಮದಲ್ಲಿ ಬೇಳೆದು ಬಂದ ಕುಂಟೋಜಿ ಹಿರೇಮಠಕ್ಕೆ ಹಳೆ ತಲೆಮಾರಿನ ಇತಿಹಾಸವೂ ಕೂಡ ಇದೇ. ಈ ಹಿನ್ನೆಲೆಯಲ್ಲಿ ಶ್ರೀ ಚನ್ನವೀರ ದೇವರುಗಳ ಸಧ್ಯ ಪಟ್ಟಾಧಿಕಾರಗೊಂಡು ಷಟಸ್ಥಲಭ್ರಹ್ಮಿಗಳಾಗಿದ್ದಾರೆ ಅವರ ಮಾರ್ಗದರ್ಶನದಲ್ಲಿ ಇಡೀ ವಿಜಯಪುರ ಜಿಲ್ಲೇಯಲ್ಲಿಯೇ ಭಕ್ತರ ಬಾಳಿಗೆ ಬೆಳಕು ನೀಡುವ ಸಾಮಾಜಿಕ ಕಳಕಳಿಯುಳ್ಳ ಅತಿ ದೊಡ್ಡ ಮಠವಾಗಿ ಬೆಳದು ನಿಲ್ಲಲಿದೇ ಎಂಬುದು ತುಂಬಾ ಸಂತಸ ತಂದಿದೆ ಎಂದರು.
ಶ್ರೀ ಕುಂಟೋಜಿ ಶ್ರೀ ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಮುದ್ದೇಬಿಹಾಳ ತಾಲೂಕಿನಲ್ಲೋಂದು ದಸರಾ ದರ್ಭಾರ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡು ಯಶಸಿಗೊಳಿಸಬೇಕು ಎಂದು ಸಧ್ಯ ಬಾಳೇಹೊನ್ನೂರಿನ ರಂಭಾಪೂರಿ ಡಾ, ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರು ಮಹಾಸ್ವಾಮಿಗಳು ಈಗಾಗಲೇ ನಮಗೆ ಸೂಚಿಸಿದ್ದಾರೆ ಮುಂದೊಂದು ದಿನ ಆ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತು ಹೆಗಲಿಗೆ ಹೆಗಲು ಕೊಟ್ಟು ಯಶಸ್ವಿಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಬಾಳೇಹೊನ್ನೂರಿನ ರಂಭಾಪೂರಿ ವೀರಸಿಂಹಾಸನಾಧೀಶ್ವರ 1008 ಜಗದ್ಗುರು ಪ್ರಸನ್ನ ರೇಣುಕ ಡಾ, ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದಕ ಮಹಾಸ್ವಾಮಿಗಳು ಧಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು ವೀರಶೈವ ಧರ್ಮ ಪೀಠ ಮತ್ತು ಮಠಗಳು ಬರಿ ಸಾಮಾಜಿಕ ಕಳಕಳಿಯ ಧರ್ಮ ಪ್ರಚಾರ ಮಾಡುವುದಲ್ಲದೇ ಶೈಕ್ಷಣಿಕವಾಗಿ ಹಿಂದುಳಿದು ವಿದ್ಯೆ ಕಲಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಶೈಕ್ಷಣಿಕವಾಗಿ ಪ್ರಗತಿಯನ್ನು ಹೊಂದಿ ಬಹುದೊಡ್ಡ ಸಾಣೆ ಮಾಡುವುದರೊಂದಿಗೆ ಲಕ್ಷಾಂತರ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಶ್ರೇಷ್ಠತೆಯನ್ನು ಮೆರೆದಿದೆ.
ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ಧರ್ಮದವರನ್ನು ಸಮಾನತೆಯಿಂದ ಗೌರವದಿಂದ ಕಾಣುವಲ್ಲಿ ಮಠಗಳ ಮಠಾಧಿಪತಿಗಳ ಪ್ರಮುಖ ಜವಾಬ್ದಾರಿಯಾಗಿದೆ. ಜ್ಞಾನದ ಜತೆಗೆ ಸಂಸ್ಕಾರ ಪರಂಪರೆ ಹಾಗೂ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ವೀರಶೈವ ಧರ್ಮ ಪ್ರಮುಖ ಪಾತ್ರವಹಿಸಿದೆ. ಕಳೇದ ಮೂರು ದಿನಗಳಿಂದ ಕುಂಟೋಜಿ ಗ್ರಾಮದಲ್ಲಿ ಹಿರೇಮಠದ ಭಕ್ತರು ಸೇರಿಕೊಂಡು ಶ್ರೀ ಚನ್ನವೀರ ದೇವರು ಅವರ ಪಟ್ಟಾಧಿಕಾರ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಸಡಗರದಿಂದ ತನುಮನದಿಂದ ಸಂಪೂರ್ಣ ಮೂರು ದಿನಗಳು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರಿ ಎಂದರೆ ಹೀರೇಮಠದ ಭಕ್ತರ ಪ್ರೀತಿ, ಶ್ರಮವೇ ಕಾರಣ.
ಅಧರ್ಮದಲ್ಲಿ ನಿಷ್ಠೆ, ಪರಧರ್ಮದಲ್ಲಿ ಸಹಿಷ್ಣುತೆಯನ್ನು ಕಾಪಾಡಿಕೊಂಡು ಬರುವೂದೆ ಎಲ್ಲ ಧರ್ಮಗಳ ಅಗತ್ಯ ಕರ್ತವ್ಯವಾಗಿದೆ ಆದರೇ ಇಂದು ಜಾತಿ, ಜಾತಿಗಳ ಮದ್ಯೆ ಜಾತಿ ಜನಾಂಗಗಳ ಮದ್ಯೆ ಪುಷ್ಠಿಕರಿಸುವಂತಹ ಮತ್ತು ಕೆಲವು ಸಮೂದಾಯಗಳನ್ನು ಸಂಪೂರ್ಣವಾಗಿ ತುಳಿಯುವಂತಹ ಹುನ್ನಾರ ನಡೆದಿದೆ ಆದು ಆಗಬಾರದು. ಆ ಬೆಳವಣಿಗೆಯೂ ಒಳ್ಳೆಯದಲ್ಲ ಎಂಬುದನ್ನು ಭಕ್ತರು ಅರಿತು ನಡೆಯಬೇಕಿದೆ.
ಸಧ್ಯ ನೂತನ ಪಟ್ಟಾಧಿಕಾರಗೊಂಡ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮೊದಲು ನಾನು ಚನ್ನವೀರ ದೇವರು ಆಗಿದ್ದೇ ಎಲ್ಲ ಹರಗುರು ಚರಮೂರ್ತಿಗ¼ ಹಾಗೂ ಪಂಚಪೀಠಾಧೀಶ್ವರ ಸಮ್ಮೂಖದಲ್ಲಿ ಪಟ್ಟಾಧಿಕಾರಗೊಂಡು ಸಧ್ಯ ಚನ್ನವೀರ ಶಿವಾಚಾರ್ಯ ಸ್ವಾಮಿಗಳಾಗಿದ್ದೇನೆ ನನ್ನ ಹೆಸರು ಬದಲಾಗಿರಬಹುದು ಆದರೇ ನಾನು ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿ ಸಾಮಾಜಿಕ ಜವಾಬ್ದಾರಿಯೊಂದಿಗೆ ಎಲ್ಲ ವಿಶ್ವಾಸದೊಂದಿಗೆ ಮಠದ ಪರಂಪರೆ ಉಳಿಸಿ ಬೆಳೆಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ]ಜೊತೆಗೆ ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲ ಧರ್ಮದ ಭಕ್ತರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದರು.
ಈ ವೇಳೆ ಸೋಲಾಪೂರಲೋಕಸಭಾ ಸದಸ್ಯರು ಹಾಗೂ ಗೌಡಗಾಂವನ ಹಿರೇಮಠದ ಶಿವಾಚಾರ್ಯ ರತ್ನ ಡಾ, ಜಯಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ನಾಗಣಸೂರ ರೇವೂರ ಬಮ್ಮಲಿಂಗೇಶ್ವರ ಬೃಹ್ಮಠದ ಶ್ರೀ ಶ್ರೀಕಂಠ ಶಿವಾಚಾರ್ಯ ಸ್ವಾಮಿಗಳುಎಮ್ಮಿಗನೂರ ಹಂಪೆ ಸಾವಿರದೇವರಮಠಠದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಮಳಲಿ ರಂಭಾಪುರಿ ಶಾಖಾಮಠದ ಡಾ, ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮುತ್ತಗಿ ಹಿರೇಮಠದ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು, ಯಂಕಂಚಿ ಹಿರೇಮಠದ ಶ್ರೀ ಅಭಿನವ ರುದ್ರಮನಿ ಶಿವಾಚಾರ್ಯ ಸ್ವಾಮಿಗಳು, ಗುಂಡಕನಾಳ ಬೃಹನ್ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಹಿರೂರ ಅನ್ನದಾನೇಶ್ವರ ಮಠದ ಶ್ರೀ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಕೂಡಲಸಂಗಮ ಹಿರೇಮಠದ ಶ್ರೀ ಜಾತವೇದಮುನಿ ಶಿವಾಚಾರ್ಯ ಸ್ವಾಮಿಗಳು, ಹೂವಿನ ಹಡಗಲಿಶ್ರೀ ಮರಿ ಶಾಂತವೀರ ಶಿವಾಚಾರ್ಯ ಸ್ವಾಮಿಗಳು, ಕುಷ್ಠಗಿ ಹಿರೇಮಠದ ಶ್ರೀ ಮದ್ದಾನೇಶ್ವರ ಶಿವಾಚಾರ್ಯ ಸ್ವಾಮಿಗಳು, ಗುಳೇದಗುಡ್ಡ ಅಮರೇಶ್ವರಮಠದ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮಿಗಳು, ಬದಾಮಿನವಗ್ರಹ ಹಿರೇಮಠಠದ ನೀಲಕಂಠ ಶಿವಾಚಾರ್ಯ ಸ್ವಾಮಿಗಳು, ಚಿಮ್ಮಲಗಿ, ಸಿದ್ಧರೇಣುಕ ಶಿವಾಚಾರ್ಯ ಸ್ವಾಮಿಗಳು, ಮನಗೂಳಿಶ್ರೀ ಸಂಗನಬಸವ ಸ್ವಾಮಿಗಳು, ದೇವರ ಹಿಪ್ಪರಗಿ ಜಡಿಮಠದ ಶ್ರೀ ಜಡೆ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಆಲಮಟ್ಟಿ ಶ್ರೀ ರುದ್ರಮುನಿ ದೇವರು, ತಾಳಿಕೋಟಿ ಖಾಸ್ಗತೇಶ್ವರ ಮಠದ ಶ್ರೀ ಸಿದ್ಧಲಿಂಗ ದೇವರು ಸೇರಿದಂತೆ ಅನೇಕ ಮಠಾಧೀಶರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಯುಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸೇರಿದಂತೆ ಹಲವರು ಇದ್ದರು.