ಭಾರತದಲ್ಲಿ ಹಬ್ಬಗಳ ಮೂಲಕ ಆತ್ಮೀಯತೆಯನ್ನು ಬೆಳೆಸುವಲ್ಲಿ ತುಂಬಾ ಪ್ರಭಾವ ಬೀರುತ್ತದೆ: ಬಿಕೆ ಲಕ್ಷ್ಮೀಜಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.08- ಭಾರತ ಆಧ್ಯಾತ್ಮಿಕ ದೇಶವಾಗಿದೆ. ಹಬ್ಬಗಳ ಮೂಲಕ ಸಂಸ್ಕøತಿಯನ್ನು ಸಾರುವದೇಶ. ಸರ್ವರಲ್ಲೂ ಸಾಮರಸ್ಯ, ಸ್ವಚ್ಛತೆ, ಆತ್ಮೀಯತೆಯನ್ನು ಬೆಳೆಸುವಲ್ಲಿ ತುಂಬಾ ಪ್ರಭಾವ ಬೀರುತ್ತದೆಎಂದು ಮೈಸೂರುಉಪವಲಯದ ಬ್ರಹ್ಮಾಕುಮಾರಿಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರುಆದ ಬಿಕೆ ಲಕ್ಷ್ಮೀಜಿರವರು ತಿಳಿಸಿದರು.
ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಆಶ್ರಯದಲ್ಲಿ ಶ್ರೀ ಚಾಮರಾಜೇಶ್ವರದೇವಾಲಯದ ಮುಂದೆ ನಡೆಯುತ್ತಿರುವದ್ವಾದಶಜ್ಯೋತಿಲಿರ್ಂಗದರ್ಶನಉದ್ಘಾಟನೆಯಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ ಪ್ರಜಾಪಿತಈಶ್ವರೀಯ ವಿಶ್ವ ವಿದ್ಯಾಲಯಇಂದು ಜಗತ್ತಿನಲ್ಲಿ.147 ದೇಶಗಳಲ್ಲಿ ಕಾರ್ಯ ನಿರ್ವಹಿಸಿ ಮಾನವ ಕುಲಕ್ಕೆ. ಶಾಂತಿ ಸಂದೇಶ,ಯೋಗಜೀವನವನ್ನುರಾಜಯೋಗಧ್ಯಾನ ಕೆಂದ್ರಗಳನ್ನು ಸ್ಥಾಪಿಸಿ ಮಾನವ ಕುಲಕ್ಕೆ ಶ್ರೇಷ್ಠ ಕೊಡುಗೆ ನೀಡಿದೆ.ಯೋಗಜೀವನದ ಮೂಲಕ ಜ್ಞಾನದಜೀವನ ನಡೆಸಿ ಸತ್ಯ ಹೃದಯ,ಸರಳ ವಿಧಾನದ ಮೂಲಕ ದುಷ್ಕರ್ಮವನ್ನು ಹೋಗಲಾಡಿಸಬೇಕು.ಮನುಷ್ಯ ವ್ಯರ್ಥಚಿಂತನೆ ಬಿಟ್ಟು ಸಕಾರಾತ್ಮಕಚಿಂತನೆ, ದೈವ ಸ್ಮರಣೆಯ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕುಎಂದರು.
ಕಾರ್ಯಕ್ರಮವನ್ನುಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಮಾತನಾಡಿ, ಚಾಮರಾಜೇಶ್ವರದೇವಸ್ಥಾನದ ಮುಂದೆದ್ವಾದಶ ಲಿಂಗಗಳ ದರ್ಶನದ ಭಾಗ್ಯಕರುಣಿಸುವ ಮೂಲಕ ಪ್ರಜಾಪಿತ ಬ್ರಹ್ಮಾಕುಮಾರಿ ಸಂಸ್ತೆ ನಗರದಜನರಿಗೆಉತ್ತಮಕಾರ್ಯವನ್ನು ಒದಗಿಸಿದೆ. ಜನರುದ್ವಾದಶ ಲಿಂಗಗಳ ದರ್ಶನ ಹಾಗೂ ಚಿಂತನೆಯ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕೊಳ್ಳೇಗಾಲ ಮುಖ್ಯ ಸಂಚಾಲಕರಾದ ಪ್ರಭಾಮಣೀಜೀ ಮಾತನಾಡಿದ್ವಾದಶ ಲಿಂಗಗಳ ದರ್ಶನದಿಂದ ಮನಸ್ಸಿಗೆ ಆನಂದ, ಸಂತೋಷಹಾಗೂ ಭಕ್ತಿಯನ್ನು ಹೆಚ್ಚಿಸಿ ನೆಮ್ಮದಿಯಜೀವನ ನಡೆಸಲು ಸ್ಪೂರ್ತಿತುಂಬುತ್ತದೆಎಂದರು.
ಬಿಳಿಗಿರರಂಗನ ಬೆಟ್ಟದ ವಿಶ್ವಶಾಂತಿಆಶ್ರಮದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ಮಾತನಾಡಿ ಶಿವರಾತ್ರಿಯಲ್ಲಿ ಶಿವನ ಧ್ಯಾನದ ಮೂಲಕ ಅಂತರಂಗದ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ಶಿವನ ದರ್ಶನ, ಅವತಾರದ ಹಿನ್ನಲೆಯಇತಿಹಾಸವನ್ನೂಅರಿಯಬೇಕು. ಯೋಗಧ್ಯಾನದ ಸಂದೇಶಗಳು ನಮ್ಮನ್ನುಅರಿಯಲು ಸಾಧ್ಯವಾಗುತ್ತದೆಎಂದರು.
ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಎಸ್ ಬಾಲರಾಜು ಮಾತನಾಡಿಈಶ್ವರೀಯ ವಿಶ್ವ ವಿದ್ಯಾಲಯ ಶಾಂತಿಯ ಸಂದೇಶ, ಜೀವನ ಮೌಲ್ಯವನ್ನುಜಗತ್ತಿಗೆ ಸಾರುತ್ತಿದೆಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದ ಸುರೇಶ್‍ಎನ್‍ಋಗ್ವೇದಿ.ಮಾತನಾಡಿಇತಿಹಾಸದಲ್ಲಿ.ಮೊದಲಿಗೆದ್ವಾದಶ ಲಿಂಗಗಳ ದರ್ಶನ ಹಾಗೂ ಇತಿಹಾಸ ತಿಳಿಯಲು ಭವ್ಯವಾಗಿ ರೂಪಿಸಿರುವುದು ನಗರದಜನರ ಪುಣ್ಯವೆಂದರು.ಜನತೆ ಶಿವ ಧ್ಯಾನದಜೊತೆಗೆಅಂತರಂಗ ತಿಳಿಯುವ ಮೂಲಕ ಸನ್ಮಾರ್ಗದಲ್ಲಿಜೀವನ ರೂಪಿಸಿಕೊಳ್ಳಿ ಎಂದರು.
ಸರ್ವರನ್ನುಚಾಮರಾಜನಗರ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರು, ಸ್ವಾಮಿ ವಿವೇಕಾನಂದರಾಷ್ಟ್ರ ಸದ್ಭಾವನಾ ಪ್ರಶಸ್ತಿ ಪುರಸ್ಕೃತೆರಾಜಯೋಗಿನಿ ಬ್ರಹ್ಮಾಕುಮಾರಿದಾನೇಶ್ವರೀಜೀಯವರು ಸರ್ವರನ್ನು ಸ್ವಾಗತಿಸಿದರು.
ಉಪ ತಹಸಿಲ್ದಾರರಾದ ಗಿರಿಜಮಾತನಾಡಿರಾಜಯೋಗಧ್ಯಾನವುಆರೋಗ್ಯವನ್ನು ಸುಧಾರಿಸುತ್ತದೆಎಂದುಅಭಿಪ್ರಾಯಪಟ್ಟರು. ಕಾರ್ಯಕ್ರಮಕ್ಕೆ ಮೊದಲು ಸೇವಾಕೇಂದ್ರದಿಂದದೇವಸ್ಥಾನದವರೆಗೆರಾಜಯೋಗ ವಿದ್ಯಾರ್ಥಿಗಳು ಹಾಗೂ ಬ್ರಹ್ಮಾಕುಮಾರಕುಮಾರಿಯರು ಶಾಂತಿ ಶೋಭಾಯಾತ್ರೆ ನಡೆಸಿಕೊಟ್ಟರು. ಓಂಶಾಂತಿ ನ್ಯೂಸ್ ಸರ್ವಿಸ್‍ನ ಬಿಕೆ ಆರಾಧ್ಯ, ಸುರೇಶ್‍ನಾಗ್ ನಂಜುಂಡಸ್ವಾಮಿ, ನಾರಾಯಣಶೆಟ್ಟಿ, ಶ್ರೀನಿವಾಸ,ತಾಂಡವಮೂರ್ತಿ,ಡಾ.ಪರಮೇಶ್ವರಪ್ಪ, ಸುರೇಶ್‍ಗೌಡ್ರು ಹಾಜರಿದ್ದರು.
ಪುಣ್ಯದರ್ಶನವು ಪ್ರತಿನಿತ್ಯ ಬೆಳಗ್ಗೆ 6 ರಿಂದರಾತ್ರಿ 8 ರವರೆಗೆ ದಿನಾಂಕ 13 ರವರೆಗೆಉಚಿತವಾಗಿತೆರೆದಿರುತ್ತದೆಎಂದು ಸಂಸ್ಥೆ ತಿಳಿಸಿದೆ.