ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ಇಬ್ಬರು ಪಾರು
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.08- ನಿಯಂತ್ರಣ ತಪ್ಪಿ ಕೆರೆಗೆ ಕಾರು ಬಿದ್ದು ಅದೃಷ್ಟವಶಾತ್ ಇಬ್ಬರು ಪಾರಾಗಿರುವ ಘಟನೆ ತಾಲೂಕಿನ ಹೊಂಗನೂರು ಕೆರೆಯಲ್ಲಿ ಬುಧವಾರ ಸಂಜೆ ನಡೆದಿದೆ.
ತಾಲೂಕಿನ ಚಾಟಿಪುರದಲ್ಲಿ ಕೃಷಿ ಮಾಡುತ್ತಿದ್ದ ಸಾಬ್ ಹಾಗೂ ಚಾಲಕ ಗಾಯಗೊಂಡಿದ್ದು ಸಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಾಟಿಪುರದಿಂದ ಮೈಸೂರಿಗೆ ಪಜಾರೊಕಾರಿನಲ್ಲಿ ತೆರಳುತ್ತಿದ್ದಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದಿದ್ದೆ ಎನ್ನಲಾಗಿದೆ.
ಸದ್ಯ, ಕಾರನ್ನು ಮೇಲಕ್ಕೆತ್ತಿ ಚಾಮರಾಜನಗರ ಪೂರ್ವ ಠಾಣೆ ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.