ಅಂತರ್ಜಲ ಹೆಚ್ಚಿಸಲು ಪಟ್ಟಣ ಪಂಚಾಯತಿಯಿಂದ ಕ್ರಮ
(ಮಡಿವಾಳಪ್ಪ ಟಿ ಯತ್ನಾಳ)
ಯಡ್ರಾಮಿ:ಮಾ.8:ಪಟ್ಟಣ ಪಂಚಾಯತಿ ವತಿಯಿಂದ ಅಂತರ್ಜಲ ಹೆಚ್ಚಿಸಲು ಐತಿಹಾಸಿಕ ರಾಮ ತೀರ್ಥಕ್ಕೆ ನೀರು ಹರಿಸುವ ಮೂಲಕ ನೀರಿನ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂತೋಷಕುಮಾರ ರಡ್ಡಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಯಡ್ರಾಮಿ ಪಟ್ಟಣ ಹಾಗೂ ಸುಂಬಡ ಗ್ರಾಮಕ್ಕೆ ಐತಿಹಾಸಿಕ ರಾಮ ತೀರ್ಥ ಬಾವಿಯಿಂದ ನೀರು ಒದಗಿಸಿದ್ದು ರಾಮ ತೀರ್ಥ.ಅಂತಹ ರಾಮ ತೀರ್ಥದಲ್ಲಿ ಬೇಸಿಗೆ ಇರುವುದರಿಂದ ನೀರು ಇಲ್ಲದೆ ಇರುವುದು ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಹಲವಾರು ವಾರ್ಡಿನ ಜನರು ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದು.ಅದನ್ನು ಅರಿತುಕೊಂಡ ಪಟ್ಟಣ ಪಂಚಾಯತಿ ಸತತವಾಗಿ ಜಿಲ್ಲಾಧಿಕಾರಿಗಳ ಘಮನಕ್ಕೆ ತಂದು ನೀರು ಹರಸುವ ಮೂಲಕ ಯಶಸ್ವಿಯಾಗಿದ್ದಾರೆ.
ಇದರಿಂದ ಅಂತರ್ಜಲ ಹೆಚ್ಚಾಗಿ ಕೊಳವೆ ಬಾವಿಗೆ ನೀರು ಬರುವ ವಿಶ್ವಾಸ ಇದ್ದು.ಪಟ್ಟಣದ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೂ ನೀರಿನ ಸಮಸ್ಯೆ ತಪ್ಪಿಸಬಹುದಾಗಿದೆ.
ಬೇಸಿಗೆ ಇರುವದರಿಂದ ಪಟ್ಟಣದ ವಾರ್ಡಿನ ಕೊಳವೆ ಬಾವಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು.ರಾಮ ತೀರ್ಥಕ್ಕೆ ನೀರು ತುಂಬುವ ಮೂಲಕ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ.
—ಸಂತೋಷಕುಮಾರ ರಡ್ಡಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಯಡ್ರಾಮಿ.
ಪಟ್ಟಣದ ಪ್ರತಿಯೊಂದು ವಾರ್ಡಗಳಲ್ಲಿ ನೀರಿನ ಸಮಸ್ಯೆ ಇದ್ದು.ಈ ರಾಮ ತೀರ್ಥಕ್ಕೆ ನೀರು ಬಿಡಲಾಗಿದೆ.ಇದರಿಂದ ನೀರಿನ ಮಟ್ಟ ಹೆಚ್ಚಾಗಿ.ಕೊಳವೆಯಲ್ಲಿ ನೀರು ಬರುವ ಭರವಸೆಯಲ್ಲಿ ಪಟ್ಟಣ ಜನರು ಇದ್ದಾರೆ.
—ಮಲ್ಲಿಕಾರ್ಜುನ ಹಂಚಿನಾಳ ಪಟ್ಟಣದ ನಿವಾಸಿ.