ಮಾ. 13 ರವರೆಗೆಕಲಬುರಗಿ ಜಿಲ್ಲೆಯಲ್ಲಿ ವಿಭಾಗಿಯ ಮಟ್ಟದ ವಸ್ತು ಪ್ರದರ್ಶನ ಮಾರಾಟ ಮೇಳ
ಕಲಬುರಗಿ:ಮಾ.7: ಮಹಿಳಾ ಸ್ವ-ಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳ ಹೆಚ್ಚಿನ ಮಹತ್ವ ಇದೆ. ನಿಮಗೆ ಯಾವ ರೀತಿ ಸಹಕಾರ ಬೇಕು ನಮೊಂದಿಗೆ ಸಂವಾದ ಮಾಡಿ ತಿಳಿಸಿ ಎಂದು ಬಿ ಫೌಜಿಯಾ ತರನ್ನುಮ್ ಅವರು ಹೇಳಿದರು.
ಗುರುವಾರದಂದು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಎಲ್ಲಾ ಜಿಲ್ಲೆಗಳ ಸ್ತ್ರೀ ಶಕ್ತಿ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸ್ವ-ಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳ ಕಲಬುರಗಿ ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಆನ್‍ಲೈನ್‍ನಲ್ಲಿ ನಿಮ್ಮ ವ್ಯವಹಾರವನ್ನು ಯಾವ ರೀತಿಯಾಗಿ ಮಾಡಬೇಕು ಎಂಬುವದರ ಬಗ್ಗೆ ವಿಚಾರ ಮಾಡುತ್ತಿದ್ದೆವೆ ಎಂದು ಹೇಳಿದರು.
ಮುಖ್ಯ ಕಾರ್ಯವಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ಭಂವರ್ ಸಿಂಗ್ ಮೀನಾ ಮಾತನಾಡಿ, ಮಹಿಳೆಯರಿಗೆ ಯಾವ ರೀತಿಯಾದ ತಮ್ಮ ವ್ಯವಹರದಲ್ಲಿ ಆದಾಯ ಜಾಸ್ತಿ ಮಾಡಬೇಕು ಎಂಬ ಬಗ್ಗೆ ವಿಚಾರ ಮಾಡುತ್ತಿದ್ದೇವೆ. ಮಹಿಳೆಯರಿಗೆ ತರಬೇತಿ ಕೊಡುತ್ತಿದ್ದೆವೆ ಬಹಳಷ್ಟು ಸಂಸ್ಥೆಯೊಂದಿಗೆ ಒಂದು ಸಹಯೋಗವಾಗಿದ್ದೆವೆ ಒಂದು ರೀತಿಯಾದ ರೋಡ್ ಮ್ಯಾಪ್ ಮಾಡುತ್ತಿದ್ದೆವೆ ನಿಮ್ಮ ಒಂದು ವ್ಯವಹರಕ್ಕೆ. ನಿವು ಒಗ್ಗಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.