ಮಾನವತ್ವವೇ ಸಂವಿಧಾನದ ಆಶಯ: ಪ್ರೊ. ದಯಾನಂದ ಅಗಸರ
ಕಲಬುರಗಿ:ಮಾ.7:ಡಾ.ಬಿ. ಆರ್. ಅಂಬೇಡ್ಕರ್ ಸಂವಿಧಾನದ ಮೌಲ್ಯಯುತ ಸಂದೇಶಗಳನ್ನು ಅರಿತರೆ ಸಾಲದು. ಅವುಗಳನ್ನು ಅಳವಡಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಮನುಷ್ಯತ್ವಕ್ಕಾಗಿ ಧರ್ಮವೇ ಹೊರತು, ಧರ್ಮಕ್ಕಾಗಿ ಮನುಷ್ಯತ್ವವಲ್ಲ. ಆದರಿಂದ ಮಾನವೀಯ ತತ್ವಗಳನ್ನು ಕುರಿತು ಪ್ರತಿಯೊಬ್ಬರು ಚಿಂತಿಸಬೇಕಿದೆ. ಮಾನವತ್ವವೇ ಸಂವಿಧಾನದ ಆಶಯವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಂiÀದ ಜ್ಞಾನಗಂಗಾ ಆವರಣದಲ್ಲಿ ‘ಸಂವಿಧಾನ ಜಾಗೃತಿ ಜಾಥಾ’ ನಿಮಿತ್ತ ಆಯೋಜಿಸಿದ ಕಾರ್ಯಕ್ರಮವನ್ನು ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಸ್ಥಬ್ಧಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ಪ್ರತಿಯೊಬ್ಬರ ಜೀವನ ಸಾಧನೆಗೆ ಸಂವಿಧಾನವೇ ಮಾರ್ಗ ತೋರಿಸುತ್ತಿದೆ. ಅದನ್ನು ಯುವಕರು ಅಥೈಸಿಕೊಳ್ಳಬೇಕು ಎಂದರು.
ಕುಲಸಚಿವ ಡಾ. ಬಿ. ಶರಣಪ್ಪ ಮಾತನಾಡಿ 75 ವರ್ಷದ ಹಿಂದೆ ಅಳವಡಿಸಿಕೊಂಡಿರುವ ಸಂವಿಧಾನ ಬೃಹತ್ ಪ್ರಜಾಪ್ರಭುತ್ವ ಕಟ್ಟುವ ಮೂಲಕ ಅಗಾಧ ಪ್ರಗತಿ ಕಾಣಲಾಗಿದೆ. ಸಮಾನತೆ, ಸ್ವಾತಂತ್ರ್ಯ ಮತ್ತು ಬಾತೃತ್ವ ತತ್ವಗಳನ್ನ ಅಳವಡಿಸಿ ಅಭಿವ್ಯಕ್ತಿ ಮೂಲಕ ಪ್ರತಿಯೊಬ್ಬರ ನಂಬಿಕೆ, ಆಚರಣೆಯನ್ನು ಗೌರವದಿಂದ ಅನುಭವಿಸಿ ಗೌರವಿಸಬೇಕು ಎಂದ ಅವರು ಆರ್ಥಿಕ ಸಮಾನತೆ, ಸಾಮಾಜಿಕ ಸಮಾನತೆ ಮತ್ತು ಧರ್ಮನಿರಪೇಕ್ಷತೆ ಗುಣಗಳನ್ನು ಪಾಲಿಸಲಾಗಿದೆ. ಮಹಿಳೆಯರು, ದುರ್ಬಲರು, ದೀನದಲಿತರು ಮತ್ತು ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನ ಜಾಗೃತಿ ಮೂಡಿಸಿ ಐಕ್ಯತೆ ಮೂಲಕ ವ್ಯಕ್ತಿ ಗೌರವ ಮತ್ತು ಬೌದ್ದಿಕತೆಯನ್ನು ಸಾಧಿಸಲಾಗಿದೆ. ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೊಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಚಂದ್ರಕಾಂತ ಯಾತನೂರು ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನ ಜಾಥಾ ಮೂಲಕ ಯುವಜನರಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸುತ್ತಿರುವ ಕಾರ್ಯ ಪ್ರಸ್ತುತ ಅತ್ಯಂತ ಮಹತ್ವದಾಗಿದೆ. ಶ್ರೇಷ್ಠ ಸಂವಿಧಾನದ ನೆಲೆಯಲ್ಲಿ ದೇಶ ಆಹಾರ ಸಮರ್ಪಕತೆ, ಆರ್ಥಿಕ ಸದೃಢತೆ, ಬಾಹ್ಯಾಕಾಶ ಸಂಶೋಧನೆ, ಸ್ವಂತಂತ್ರ ವಿದೇಶಾಂಗ ನೀತಿ, ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಿಂದ ದೇಶ ಮೂರನೇ ಅತಿ ಬಲಿಷ್ಠ ರಾಷ್ಟ್ರವಾಗಿ ಬೆಳೆದಿದೆ. ಜಗತ್ತಿನ ಅಭಿವೃದ್ಧಿ ರಾಷ್ಟ್ರಗಳು ಭಾರತದ ಕಡೆಗೆ ದೃಷ್ಠಿ ಬೀರುವಂತಾಗಿದೆ. ಇದಕ್ಕೆ ಶ್ರೇಷ್ಠ ಸಂವಿಧಾನವೇ ಕಾರಣವಾಗಿದೆ. ಆದರೆ, ಇಂದು ಸಂವಿಧಾನ ಸುರಕ್ಷತವಾಗಿದಯೇ? ಪ್ರಜಾಪ್ರಭುತ್ವದ ಸುರಕ್ಷಿತವಾಗಿದೆಯೇ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ದೇಶಕ್ಕೆ ಅಗತ್ಯವಾಗಿದೆ. ಪ್ರಜಾಪ್ರಭುತ್ವ ಸುರಕ್ಷಿತವಾಗಿರಬೇಕಿದೆ. ಮೂಲ ಸಂವಿಧಾನ ಬದಲಾವಣೆ ಮಾಡದಂತೆ ಸಮಿತಿ ತೀರ್ಮಾನ ನೀಡಿರುವುದೇ ಅದರ ಮೌಲ್ಯಕ್ಕೆ ಸಾಕ್ಷಿಯಾಗಿದೆ. ಎಂದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ಪ್ರೊ. ದೇವಿದಾಸ ಮಾಲೆ ಮಾತನಾಡಿದರು. ವಿದ್ಯಾವಿಷೇಯಕ ಪರಿಷತ ಸದಸ್ಯ ಡಾ. ಎನ್. ಜಿ. ಕಣ್ಣೂರು ಉಪಸ್ಥಿತರಿದ್ದರು. ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಜಿ. ಶ್ರೀರಾಮುಲು ಸ್ವಾಗತಿಸಿದರು. ಸಂಶೊಧನಾ ವಿದ್ಯಾರ್ಥಿ ವಂದಿಸಿದರು. ಡಾ. ಕಾಶಿನಾಥ್ ನೂಲಕರ್ ನಿರೂಪಿಸಿದರು.