ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಖಾತೆ ಸಚಿವರ ಪ್ರವಾಸ
ಕಲಬುರಗಿ:ಮಾ.7:ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಖಾತೆ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಬೆಂಗಳೂರಿನಿಂದ ವಿಮಾನದ ಮೂಲಕ ಮಾರ್ಚ್ 8 ರಂದು ಶುಕ್ರವಾರ ಬೆಳಿಗ್ಗೆ 9.35 ಗಂಟೆಗೆ ಕಲಬುರಗಿಗೆ ಅಗಮಿಸುವರು.
ನಂತರ ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಕೆ.ಕೆ.ಆರ್.ಡಿ.ಬಿ. ಯಲ್ಲಿ “ಅಕ್ಷರ
ಆವಿಷ್ಕಾರ್” ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನಂತರ ಮಧ್ಯಾಹ್ನ 1.05 ಗಂಟೆಗೆ ಕಲಬುರಗಿಯಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.