ಕಲಬೆರಕೆ ಸೇಂಧಿ ಮಾರಾಟ: ಮಹಿಳೆ ಬಂಧನ
ಕಲಬುರಗಿ,ಮಾ.7-ನಗರದ ಫಿಲ್ಟರ್ ಬೆಡ್ ರಸ್ತೆಯ ಅಂಬೇಡ್ಕರ್ ಆಶ್ರಯ ಕಾಲೋನಿಯಲ್ಲಿ ಕಲಬೆರಕೆ ಸೇಂಧಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆಯ ಪಿಎಸ್‍ಐ ದೇವಿಂದ್ರಪ್ಪಾ ಬಿ.ಮತ್ತು ಸಿಬ್ಬಂದಿ ದಾಳಿ ನಡೆಸಿ ಲಲಿತಾ ದತ್ತು ಗದ್ವಾಲ್ ಎಂಬುವವರನ್ನು ಬಂಧಿಸಿ 600 ರೂ.ಮೌಲ್ಯದ 12 ಲೀಟರ್ ಕಲಬೆರಕೆ ಸೇಂಧಿ ಜಪ್ತಿ ಮಾಡಿದ್ದಾರೆ.
ವಿಜಯನಗರ ಕಾಲೋನಿಯ ಪ್ರಕಾಶ ದೇವಪ್ಪ ಚೌಧರಿ ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರ ಬಂಧನ
ನಗರದ ಆಜಾದಪುರ ರಸ್ತೆಯ ಫಂಕ್ಷನ್ ಹಾಲ್ ಹತ್ತಿರ ಗಾಂಜಾ ಮಾರಾಟ ಮಾರಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಎಸ್‍ಐ ಶಿವಪ್ಪ ಹಾಗೂ ಸಬ್ಬಂದಿ ದಾಳಿ ನಡೆಸಿ ಮೊಹಮದ ಮಹೆಬೂಬ ಮತ್ತು ಶಹಾಬಾಜ್ ಅಹ್ಮದ್ ಎಂಬುವರರನ್ನು ಬಂಧಿಸಿ 2950ರೂ.ಮೌಲ್ಯದ 295 ಗ್ರಾಂ.ಗಾಂಜಾ ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓರ್ವನ ಬಂಧನ
ನಗರದ ಬ್ರಹ್ಮಪುರ ವಡ್ಡರಗಲ್ಲಿಯ ಭಗತ್ ಸಿಂಗ್ ಚೌಕ್ ಹತ್ತಿರದ ಖುಲ್ಲಾ ಜಾಗದಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತಿದೆ ಎಂಬ ಮಾಹಿತಿ ಮೇಲೆ ಅಶೋಕನಗರ ಪೊಲೀಸ್ ಠಾಣೆಯ ಪಿಎಸ್‍ಐ ಬಸವಲಿಂಗಪ್ಪ ಮತ್ತು ಸಿಬ್ಬಂದಿ ದಾಳಿ ನಡೆಸಿ ವಿನೋಕುಮಾರ ಟೈಗರ್ ಎಂಬಾತನನ್ನು ಬಂಧಿಸಿ 1030 ರೂ.ನಗದು ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.