ಪುನರ್ ನವೀಕರಣಗೊಂಡ ಶರಣಬಸವೇಶ್ವರ ಕೆರೆ ಉದ್ಯಾನವನ ಲೋಕಾರ್ಪಣೆಕಲಬುರಗಿ ನಗರದಲ್ಲಿನ ಕೆರೆ, ಉದ್ಯಾನವನ ಸಂರಕ್ಷಣೆಗೆ ಕ್ರಮ:ಪ್ರಿಯಾಂಕ್ ಖರ್ಗೆ
ಕಲಬುರಗಿ:ಮಾ.7:ಕೋವಿಡ್ ಲಾಕ್‍ಡೌನ್ ಕಾರಣ ಸ್ಥಗಿತಗೊಂಡಿದ್ದ ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಶ್ರೀ ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರದಿಂದ ನಿರ್ವಹಣೆಗೆ ಒಳಪಟ್ಟ ಪುನರ್ ನವೀಕರಣಗೊಂಡ ಶರಣಬಸವೇಶ್ವರ ಕೆರೆ ಉದ್ಯಾನವನನ್ನು ಗುರುವಾರ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಗರದಲ್ಲಿನ ಉದ್ಯಾನವನ ಜೊತೆಗೆ ಕೆರೆಭೋಸಗಾ, ಖಾಜಾ ಕೋಟನೂರ ಕೆರೆ ಸಂರಕ್ಷಿಸಿ ಅಭಿವೃದ್ಧಿಪಡಿಸಲಾಗುತವುದು. ಇತ್ತೀಚೆಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿರುವ ಮಜರ್ ಆಲಂ ಖಾನ್ ಅವರು ಇದರ ಅಭಿವೃದ್ದಿಗೆ ಉತ್ಸುಕರಾಗಿದ್ದು, ಸರ್ಕಾರ ಮತ್ತು ಕೆ.ಕೆ.ಆರ್.ಡಿ.ಬಿ. ಮಂಡಳಿ ಸಹ ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಅಪ್ಪನ ಕೆರೆ ಉದ್ಯಾನವನ ಇಂದಿಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿಸಿದೆ. ಇದಕ್ಕೆ ಶ್ರಮಿಸಿದ ಆರ್.ಸಿ ಕೃಷ್ಣ ಭಾಜಪೇಯಿ ಅವರಿಗೆ ವೈಯಕ್ತಿಕ ಅಭಿನಂದನೆ ಸಲ್ಲಿಸುವೆ. ಇನ್ನು ಇಲ್ಲಿಗೆ ಬರುವ ವಿವಿಧ ಜಾತಿಯ 61 ಪಕ್ಷಿಗಳ ಕುರಿತು ಶಂಕ್ರಪ್ಪ ಹತ್ತಿ ಅವರು ಪುಸ್ತಕ ಬರೆದು, ದಾಖಲೀಕರಣ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕೆರೆ ಮತ್ತು ಉದ್ಯಾನವನ ಜನರ ಆಸ್ತಿ. ಇದು ಸರ್ಕಾರ ಮಾತ್ರ ಸಂರಕ್ಷಿಸಬೇಕೆಂಬ ಮನೋಭಾವನೆ ಬಿಟ್ಟು ಎಲ್ಲರೂ ಇದರ ಸಂರಕ್ಷಣೆ ಮತ್ತು ಇಲ್ಲಿನ ಪರಿಸರ ಸಂರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಆರ್.ಕೆ.ಪಾಟೀಲ ನೇತೃತ್ವದಲ್ಲಿ ಕಲಬುರಗಿ ಹಾಲು ಒಕ್ಕೂಟ ಶ್ವೇತ ಕ್ರಾಂತಿ ಮಾಡುತ್ತಿದೆ. ಹೊಸದಾಗಿ ಡೈರಿ ಸ್ಥಾಪಿಸಲು ಸರ್ಕಾರದಿಂದ ಸಹಕಾರ ನೀಡಲಾಗುವುದು. ಕಲಬುರಗಿ ಒಕ್ಕೂಟದಿಂದ ಪ್ರತಿ ತಿಂಗಳು 40 ಟನ್ ತುಪ್ಪ ಹೊರಬರುತ್ತಿದ್ದರೆ, ತುಮಕೂರು ತಾಲೂಕಿನ ಶಿರಾ ತಾಲೂಕು ಒಂದರಲ್ಲಿಯೆ ಇಷ್ಟು ಹೊರತರಲಾಗುತ್ತಿದೆ. ಹೀಗಾಗಿ ಇಲ್ಲಿ ಹೈನುಗಾರಿಕೆ ಕ್ಷೇತ್ರ ಇನ್ನೂ ಹೆಚ್ಚು ಬೆಳೆಯಬೇಕಿದೆ. ಇದಕ್ಕಾಗಿ ಒಕ್ಕೂಟ ಇನ್ನು ಹೆಚ್ಚಿನ ಶ್ರಮ ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಬರಗಾಲದ ಸಂದರ್ಭದಲ್ಲಿ ದೊಡ್ಡಪ್ಪ ಅಪ್ಪ ಅವರು ಕೆರೆ ನಿರ್ಮಾಣ ಮಾಡಿ ನಗರದ ಕುಡಿಯುವ ನೀರಿನ ದಾಹ ನೀಗಿಸಿದ್ದ ಇತಿಹಾಸವುಳ್ಳ ಅಪ್ಪನ ಕೆರೆ ಉದ್ಯಾನವನ ಕೋವಿಡ್ ಕಾರಣ ಸ್ಥಗಿತಗೊಂಡು ಹಾಳುಬಿದ್ದಿತ್ತು. ಇದೀಗ ನಮ್ಮ ಸರ್ಕಾರ ಪುನಹ ಮಕ್ಕಳು, ಸಾರ್ವಜನಿಕರಿಗೆ ಮನೋರಂಜನೆಗೆ ಮತ್ತು ವಾಯು ವಿಹಾರ ಅನುಕೂಲಕ್ಕೆ ಉದ್ಯಾನವನ್ನು ಪುನರ್ ನವೀಕರಣ ಮಾಡಿದೆ. ಕೆರೆ ಒತ್ತುವರಿ ನಿಲ್ಲಿಸಬೇಕು. ಕೆರೆ ಸಂರಕ್ಷಣೆಗೆ ಎಲ್ಲರು ಮುಂದಾಗಬೇಕು ಎಂದರು.
ನಂದಿನಿ ಎಮ್ಮೆ ಹಾಲು ಪಾಕೆಟ್ ಬಿಡುಗಡೆ: ಇದೇ ಸಂದರ್ಭದಲ್ಲಿ ಕಲಬುರಗಿ-ಬೀದರ ಹಾಗೂ ಯಾದಗಿರಿ ಹಾಲು ಒಕ್ಕೂಟದಿಂದ ಹೊಸದಾಗಿ ಹೊರತರಲಾಗುತ್ತಿರುವ ಎಮ್ಮೆ ಹಾಲು ಉತ್ಪನ್ನದ ಹಾಲಿನ ಪ್ಯಾಕೆಟ್ ಗಳನ್ನು ಸಚಿವ ಪ್ರಿಯಾಂಕ್ ಖರ್ಗೆ, ದಿನೇಶ ಗುಂಡೂರಾವ ಆದಿಯಾಗಿ ಗಣ್ಯರು ಬಿಡುಗಡೆ ಮಾಡಿದರು. ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ, ಎಂ.ಡಿ ಪಿ.ವಿ.ಪಾಟೀಲ, ಮಾರ್ಕೆಟಿಂಗ್ ಮ್ಯಾನೇಜರ್ ಚಂದ್ರಶೇಖರ ಪತ್ತಾರ ಇದ್ದರು.
ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ಮಾತನಾಡಿ ಒಕ್ಕೂಟದಿಂದ 198 ಪಾರ್ಲರ್ ನಡೆಸಲಾಗುತ್ತಿದೆ, 700 ಜನ ನಂದಿನಿ ಏಜೆಂಟ್ ಇದ್ದಾರೆ. ಕಳೆದ 2022-23ನೇ ಸಾಲಿನಲ್ಲಿ ಒಕ್ಕೂಟಕ್ಕೆ ದೊರೆತ 7 ಕೋಟಿ ರೂ. ಲಾಭ ಪುನಹ ರೈತರಿಗೆ ಪೆÇ್ರೀತ್ಸಾಹ ಧನ ರೂಪದಲ್ಲಿ ನೀಡಲಾಗಿದೆ. ಇಡೀ ರಾಜ್ಯದಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಲಾಭ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.
ಇದಕ್ಕು ಮುನ್ನ ಸಚಿವರು ಮತ್ತು ಗಣ್ಯರು ಉದ್ಯಾನವನ ಅವರಣದಲ್ಲಿನ ನಂದಿನಿ ಮಿಲ್ಕ್ ಪಾರ್ಲರ್, ಎಂಟರಟೇನ್‍ಮೆಂಟ್ ಝೋನ್, ಮಕ್ಕಳ ಆಟಿಕೆ ವಲಯ ಉದ್ಘಾಟಿಸಿದರು. ಮಕ್ಕಳ ಕ್ರಿಕೆಟ್ ಅಂಗಣದಲ್ಲಿ ಸಚಿವ ದಿನೇಶ ಗುಂಡೂರಾವ ಬ್ಯಾಟ್ ಬೀಸಿದರೆ, ಪ್ರಿಯಾಂಕ್ ಖರ್ಗೆ, ಡಾ.ಅಜಯ ಸಿಂಗ್ ಅವರು ಬಾಲ್ ಹಾಕಿ ಗಮನ ಸೆಳೆದರು. ನಂತರ ಕೆರೆ ವೀಕ್ಷಣೆಯ ವಾಚ್ ಟವರ್, ಬೋಟಿಂಗ್, ಕೆಫೆಟೇರಿಯಾ ಹೀಗೆ ಸಂಪೂರ್ಣ ಉದ್ಯಾನವನಕ್ಕೆ ಒಂದು ಸುತ್ತು ಹಾಕಿ ವೀಕ್ಷಿಸಿದರು.
ಕೆರೆ ವೆಬ್‍ಸೈಟ್ ಲೋಕಾರ್ಪಣೆ: ಇದೇ ಸಂದರ್ಭದಲ್ಲಿ ಕೆರೆ ಆವರಣಕ್ಕೆ ಆಗಮಿಸುವ ದೇಶ ವಿದೇಶದ ಅತಿಥಿ ಪಕ್ಷಿ ಸಂಕುಲಗಳ ಪೂರ್ಣ ಮಾಹಿತಿ ನೀಡುವ ಪಕ್ಷಿ ಶಾಸ್ತ್ರಜ್ಞ, ನಿಸರ್ಗ ತಜ್ಞ ಡಾ.ಶಂಕರಪ್ಪ ಹತ್ತಿ ಅವರು ಬರೆದ ಕನ್ನಡ-ಇಂಗ್ಲೀμï ಆವೃತ್ತಿಯ ಪುಸ್ತಕ ಬಿಡುಗಡೆ, ಶರಣಬಸವೇಶ್ವರ ಕೆರೆಯ ವೆಬ್ ಸೈಟ್ ತಿತಿತಿ.sbಟಚಿಞe.iಟಿ ಸಹ ಲೋಕಾರ್ಪಣೆ ಮಾಡಲಾಯಿತು.
ಮುಖ್ಯಮಂತ್ರಿಗಳ ಸಲಹೆಗಾರರು ಮತ್ತು ಆಳಂದ ಶಾಸಕ ಬಿ.ಆರ್.ಪಾಟೀಲ, ಎಂ.ಎಲ್.ಸಿ.ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಅಲಮ್ ಖಾನ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ ಅಕ್ಷಯ್ ಎಂ. ಹಾಕೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕೆರೆ ಸಲಹಾ ಸಮಿತಿ ಸದಸ್ಯರಾದ ಸದಾನೆಂದ ಪೆರ್ಲಾ, ಶಂಕರಪ್ಪ ಹತ್ತಿ ಸೇರಿದಂತೆ ಮೊದಲಾದವರು ಇದ್ದರು. ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಬಾಜಪೇಯಿ ಅವರು ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕೆರೆ ಸುತ್ತ ಒಂದು ನೋಟ: ಹಸಿರು ಉದ್ಯಾನವಲಯದಡಿ ಅಭಿವೃದ್ಧಿಪಡಿಸಿದ ಪರಿಸರ ಪ್ರಿಯ ಕೆರೆ ಈಗ ನಳನಳಿಸುವ ಉದ್ಯಾನವನ್ನಾಗಿ ತಲೆ ಎತ್ತಿ ನಿಂತಿದೆ. ಹಸಿರು ನೆಲಹಾಸುಗಳಿಂದ ಶೃಂಗಾರಗೊಂಡು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಇಲ್ಲಿ ಬೃಂದಾವನ ನರ್ಸರಿ ಅಭಿವೃದ್ಧಿಪಡಿಸಲಾಗಿದ್ದು, ಭೇಟಿ ನೀಡಿದ ಪರಿಸರ ಪ್ರೇಮಿಗಳಿಗೆ ಗಿಡ, ಸಸ್ಯಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ದೇಶ ವಿದೇಶಗಳಿಂದ ಕೆರೆ ಆವರಣಕ್ಕೆ ಆಗಮಿಸುವ ವಿನೂತನ ವರ್ಗಗಳ ಪಕ್ಷಿಗಳು ಕೆರೆಯ ನಡುಗಡ್ಡೆ ಮತ್ತು ದಂಡೆಯಲ್ಲಿ ಆಶ್ರಯ ಪಡೆದು ಸ್ವಚ್ಚಂದ ಜೀವನ-ವಿಹಾರ ಮಾಡುವ ಅಪೂರ್ವ ತಾಣ ಇದಾಗಿದೆ. ಇಂತಹ ಅಪೂರ್ವ ವೈವಿಧ್ಯ ಪಕ್ಷಿಗಳನ್ನು ನೋಡಿ ಕಣ್ಣುಂಬಿಕೊಳ್ಳಲು ‘ಪಕ್ಷಿ ವೀಕ್ಷಣಾ ಗೋಪುರ’ವು ಸಿದ್ದಗೊಂಡಿದೆ. ಮಕ್ಕಳ ಮನರಂಜನೆಗಾಗಿ “ಮುಸ್ಕಾನ್ ಪುಟಾಣಿ ರೈಲು” ಇನ್ನೊಂದು ಪ್ರಮುಖ ಆಕರ್ಷಣೆಯಾಗಿದ್ದು, ಉದ್ಯಾನ ಸುತ್ತ ಪರ್ಯಟನೆ ಮಾಡಿ ದೋಣಿ ವಿಹಾರದ ಜೆಟ್ಟಿವರೆಗೆ ಆಹ್ಲಾದಕರ ಪ್ರಯಾಣದ ಸವಿಯನ್ನುಣ್ಣುವ ಅವಕಾಶವಿದೆ.
ಕೆರೆಯಲ್ಲಿ ದೋಣಿ ವಿಹಾರದ ಅಪೂರ್ವ ಅನುಭವ ಸವಿಯಲು ಯಾಂತ್ರಿಕ ದೋಣಿಗಳು ಮತ್ತು ಪೆಡೆಲ್ ಬೋಟಿಂಗ್ ಸಜ್ಜಾಗಿ ನಿಂತಿವೆ. ಮಕ್ಕಳಿಗಾಗಿ ಒಳ ಕ್ರೀಡಾಂಗಣ ಆಟದ ಮಜಾಮಸ್ತಿ ವ್ಯವಸ್ಥೆ ಸಿದ್ದಗೊಂಡಿದೆ. ಮಕ್ಕಳು ಹಾಗೂ ಸಾಂಸ್ಕøತಿಕ ತಂಡಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕಾಗಿ ಬಯಲು ರಂಗಮಂದಿರ ಹಾಗೂ ಮ್ಯೂಸಿಕ್ ಸಿಸ್ಟಂ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯೋಗಪಟುಗಳಿಗಾಗಿ ಪ್ರತ್ಯೇಕ ಜಾಗ ಕಾಯ್ದಿರಿಸಲಾಗಿದೆ. ಪ್ರವಾಸಿಗರಿಗೆ ಉತ್ತಮ ಪಾನಿಯ ಹಾಗೂ ನಂದಿನಿ ಉತ್ಪನ್ನ ಪೂರೈಕೆಗಾಗಿ ನಂದಿನಿ ಸ್ಟಾಲ್, ಶುಚಿರುಚಿ ತಿಂಡಿ ತಿನಸು ಲಭ್ಯವಾಗಲು ಕೆಫೆಟೇರಿಯಾ ಹಾಗೂ ಲಘು ಉಪಹಾರ ಗೃಹಗಳು ಸೇವೆಗೆ ಸಿದ್ದಗೊಂಡಿದೆ. ಕೆರೆಯ ಉದ್ಯಾನ, ಆವರಣ ಮನೋಲ್ಲಾಸ ನೀಡುವ ಪ್ರಕೃತಿ ರಮಣಿಯತೆ ಸವಿಯುವ ಸುಂದರ ತಾಣವಾಗಿ ಪುನರ್ ನವೀಕರಿಸಲಾಗಿದೆ. ವಿದ್ಯುದ್ದೀಪಗಳಿಂದ ಇಡೀ ಕೆರೆ ಆವರಣ ಝಗಮಗಿಸುವಂತೆ ಶೃಂಗರಿಸಲಾಗಿದೆ. ಪೂರ್ಣ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಪ್ರಕೃತಿ ಸ್ನೇಹಿ ಕೆರೆಯಾಗಿ ಇದೀಗ ರೂಪಗೊಂಡಿದೆ.