ಮಾ.12 ರಿಂದ ಮಳ್ಳಿ ತುಳಜಪ್ಪಯ್ಯಸ್ವಾಮಿ ಆರಾಧನೆ
ಕಲಬುರಗಿ,ಮಾ.7: ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಸದ್ಗುರು ತುಳಜಪ್ಪಯ್ಯಸ್ವಾಮಿ ಅವರ ಮೂರು ದಿನಗಳ ಆರಾಧನೆ ಮಹೋತ್ಸವವು ಮಾರ್ಚ 12 ರಿಂದ ಪ್ರಾರಂಭವಾಗಲಿದೆ.
ಮಾ.12 ರಂದು ಮುಖ್ಯ ಪ್ರತಿಮಾ ಉದ್ಧರಣ,ಅಂಬಾಭವಾನಿ ಮೂರ್ತಿಪೂಜೆ ,ಧ್ವಜಾರೋಹಣ ನಡೆಯಲಿದೆ.13 ರಂದು ವಿಪ್ರರ ಪಾದಪೂಜೆ,ರುದ್ರಾಭಿಷೇಕ,ಭಜನೆ ಮತ್ತು ಸಂಗೀತ ಕಾರ್ಯಕ್ರಮವಿದೆ.14 ರಂದು ಗೋಪಾಳ ಕಾವಲಿ ಮತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.ವೇದಮೂರ್ತಿ ಸತೀಶಭಟ್ ಜೋಶಿ ಅವರಿಂದ ಮೂರು ದಿನಗಳವರೆಗೆ ಪೂಜೆ,ರುದ್ರಾಭಿಷೇಕ,ಪ್ರವಚನ,ವೇದ ಘೋಷ ನಡೆಯಲಿದೆ ಎಂದು ಪೀಠಾಧಿಪತಿಗಳು ಮತ್ತು ವ್ಯವಸ್ಥಾಪಕರಾದ ಪ್ರಹ್ಲಾದ ಹ.ಸರ್ನಾಡ ಮತ್ತು ಭೀಮರಾವ ಹ.ಸರ್ನಾಡ ಅವರು ತಿಳಿಸಿದ್ದಾರೆ.