ಅಕ್ಕ ಮಹಾದೇವಿ ಮಹಿಳಾ ವಿವಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ?
ವಿಜಯಪುರ, ಮಾ.7 :ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.
ವಿವಿಯ ಪೆÇ್ರಫೆಸರ್ ರಿಂದ ಪಿಎಚ್ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.
ಮಹಿಳಾ ವಿವಿಯ ಮ್ಯಾನೇಜ್ಮೆಂಟ್ ವಿಭಾಗದ ಪ್ರ. ಮಲ್ಲಿಕಾರ್ಜುನ ಎನ್ ಎಲ್ ಅವರಿಂದ ಪಿಎಚ್ಡಿ ಅಧ್ಯಯನ ಮಾಡುತ್ತಿರುವ ಓರ್ವ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆಪಾದನೆ ಮಾಡಲಾಗಿದೆ.
ಈ ಸಂಬಂಧ ನೊಂದ ವಿದ್ಯಾರ್ಥಿನಿ ಮಹಿಳಾ ವಿವಿ ಕುಲಪತಿ ಪೆÇ್ರ. ತುಳಸಿಮಾಲಾ ಅವರಿಗೆ ದೂರು ನೀಡಿದ್ದಾರೆ.
ಕಳೆದ ಫೆಬ್ರವರಿ 27 ರಂದು ವಿದ್ಯಾರ್ಥಿನಿ ನೀಡಿರುವ ದೂರಿನ ವಿಚಾರವನ್ನು ಕುಲಪತಿ ಪೆÇ್ರ. ತುಳಸಿಮಾಲಾ
ಯುಜಿಸಿ ನಿಯಮಗಳ ಪ್ರಕಾರ ಆಂತರಿಕ ದೂರು ಸಮಿತಿಗೆ ಸಲ್ಲಿಸಿದ್ದಾರೆ.
ಆಂತರಿಕ ದೂರು ಸಮಿತಿಯಿಂದ ಈ ಕುರಿತು ವಿಚಾರಣೆ ನಡೆಯಲಿರುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ವಿಚಾರಣೆ ಬಳಿಕ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ಬರಲಿದೆ.
ಮ್ಯಾನೇಜ್ಮೆಂಟ್ ವಿಭಾಗದ ಪೆÇ್ರ. ಮಲ್ಲಿಕಾರ್ಜುನ ಎನ್.ಎಲ್. ಕಳೆದ 2017 ರಿಂದ ಮಹಿಳಾ ವಿವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಪ್ರಕರಣ ಕುರಿತು ವಿದ್ಯಾರ್ಥಿನಿಗೆ ನ್ಯಾಯ ನೀಡಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯ ಮಾಡಿವೆ.