ಪಶ್ಚಿಮ ಬಂಗಾಳ ಮಹಿಳಾ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಬೀದರ್:ಮಾ.7: ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರು ಮತ್ತು ಕುಟುಂಬಗಳ ಮೇಲಿನ ದೌರ್ಜನ್ಯವನ್ನು ಭಾರತೀಯ ಜನತಾ ಪಕ್ಷ ಜಿಲ್ಲಾ ಮಹಿಳಾ ಘಟಕ ಹಾಗೂ ಮಹಿಳಾ ಜಾಗೃತಿ ವೇದಿಕೆ ತಿವೃವಾಗಿ ಖಂಡಿಸಿತು.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಪಕ್ಷದ ಮಹಿಳಾ ಕಾರ್ಯಕರ್ತರು ಹಾಗೂ ಮಹಿಳಾ ಜಾಗೃತಿ ವೇದಿಕೆ ಪ್ರಮುಖರು ಮಮತಾ ಬ್ಯಾನರ್ಜಿ ವಿರೂದ್ಧ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶಕುಂತಲಾ ಬೆಲ್ದಾಳೆ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಮಹಿಳಾ ಮುಖ್ಯಮಂತ್ರಿ ಇದ್ದು, ಹೆಣ್ಣಾದವಳು ಹೆಣ್ಣು ಮಕ್ಕಳ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. 47 ದಿನಗಳ ಹಿಂದೆ ಐ.ಟಿ.ಆಧಿಕಾರಿಗಳ ಮೇಲೆ ನಡೆದ ದಾಳಿಯ ನಂತರವೇ ಈ ಅಕಾಲಿಕ ಘಟನೆಗಳು ಬೆಳಕಿಗೆ ಬಂದಿವೆ. ಮಕ್ಕಳು ಮತ್ತು ಮಹಿಳೆಯರನ್ನು ಕ್ರೂರವಾಗಿ ನಡೆಸಿಕೊಳ್ಳುವುದು, ಲೈಂಗಿಕ ಕಿರುಕುಳ ಮತ್ತು ಥಳಿಸುವ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಇದು ಪಶ್ಚಿಮ ಬಂಗಾಳ ರಾಜ್ಯದ ಆಡಳಿತ ಮತ್ತು ಪೆÇೀಲೀಸ್ ಇಲಾಖೆಯ ವೈಫಲ್ಯದ ಉದಾಹರಣೆ ಮಾತ್ರವಲ್ಲ. ಧಾರ್ಮಿಕ ಮತ್ತು ರಾಜಕೀಯ ವಿಷಯಗಳು ಒಳಗೊಂಡಿವೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲುಂಬಿಣೆ ಗೌತಮ್ ಈ ಸಂದರ್ಭದಲ್ಲಿ ಮಾತನಾಡಿ, ಈ ಘಟನೆಗಳು ಪಶ್ಚಿಮ ಬಂಗಾಳದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಆತಂಕಕಾರಿ ಪರಿಸ್ಥಿತಿ ಬಹಿರಂಗಪಡಿಸಿದೆ. ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ದೌರ್ಜನ್ಯ ನಡೆದು ಹಲವು ದಿನಗಳು ಕಳೆದರೂ ಪೆÇೀಲೀಸರು ಯಾವುದೇ ಪ್ರಥಮ ಮಾಹಿತಿ(ಈ.I.ಖ) ದಾಖಲೆ ಮಾಡಿಲಿಲ್ಲ. ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ವಿಷಯಗಳಲ್ಲಿ ಮಹಿಳೆಯರನ್ನು ಸಾಧನವಾಗಿ ಮಾಡುವುದು ನಾಚಿಕೆಗೇಡಿನ ಕೆಟ್ಟ ಕಲ್ಪನೆಯ ವಿಷಯವಾಗಿದೆ. ಈ ಘಟನೆಗಳನ್ನು ಮಹಿಳಾ ಜಾಗ್ರತಿ ಸಂಸ್ಥೆ ಹಾಗೂ ಸಂಘಟನೆಗಳಾದಿಯಾಗಿ ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.
ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರದಲ್ಲಿ ಈ ಕೆಳಕಂಡ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. 1. ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವ ಮಹಿಳೆಯರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತಕ್ಷಣವೇ ಈ ಕ್ರಮ ತೆಗೆದುಕೊಳ್ಳಬೇಕು.ಎಲ್ಲ ಸಂತ್ರಸ್ಥ ಮಹಿಳೆಯರ, ಮಕ್ಕಳ ಮತ್ತು ಕುಟುಂಬಗಳಿಗೆ ಕೂಡಲೇ ಭದ್ರತೆ ಮತ್ತು ಆರ್ಥಿಕ ನೆರವು ಒದಗಿಸಬೇಕು.ಮಹಿಳೆರ ಮೇಲಿನ ಈ ದೌರ್ಜನ್ಯಗಳನ್ನು ನ್ಯಾಯಾಲಯದ ಇನ್-ಕ್ಯಾಮರಾದಲ್ಲಿ ವಿಚಾರಣೆ ನಡೆಸಬೇಕು.ಮಹಿಳೆಯರ ನೈತಿಕ ಸ್ಥೆರ್ಯ ಕಾಪಾಡಿಕೊಳ್ಳಲು ಸರಕಾರದಿಂದ ತರಬೇತಿ ಪಡೆದ ಸಲಹೆಗಾರರಿಂದ ಅವರಿಗೆ ಸಮಾಲೋಚನಾ ಸೇವೆಗಳನ್ನು ಒದಗಿಸಬೇಕು.ಈ ನಿರ್ದಿಷ್ಟ ವಿಷಯಗಳ ಕುರಿತು ಮಾತನಾಡಲು/ಚರ್ಚೆ ಮಾಡಲು ಸ್ವತಂತ್ರ ಸಹಾಯವಾಣಿ ಸಂಖ್ಯೆಯನ್ನು ರಚಿಸಬೇಕು. ಇದರಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಮಹಿಳೆಯರು ಯಾವುದೇ ಭಯವಿಲ್ಲದೇ ತಮ್ಮ ಅಳಲನ್ನು ತೋಡಿಕೊಳ್ಳಲು ಅಲ್ಲಿ ಅವಕಾಶ ಇರಬೇಕು.ನಿಷ್ಪಕ್ಷಪಾತ ತನಿಖೆಗಾಗಿ ಈ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು.
ಈಗಾಗಲೇ ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ನೀಡಿದ ಸಲಹೆಗಳನ್ನು ನಾವು ಸ್ವಾಗತಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಯೋಗೇಶ್ವರಿ ಸೋನಕಾಂಬಳೆ, ಹೇಮಾರೆಡ್ಡಿ, ಪ್ರಸನ್ನ ಲಕ್ಷ್ಮಿ ದೇಶಪಾಂಡೆ, ಪೂಜಾ ಮಿಶ್ರಾ, ಸಂಗೀತಾ, ಸರಸ್ವತಿ, ಎಸ್.ಯು ಕೃಷ್ಣಮೂರ್ತಿ, ಅರಹಂತ ಸಾವಳೆ, ಹಾವಶೆಟ್ಟಿ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.