ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿಮಾನ ನಿಲ್ಧಾಣ ಸ್ಥಳಕ್ಕೆ ಭೇಟಿ, ಪರಿಶೀಲನೆ
ವಿಜಯಪುರ,ಮಾ. 7 : ವಿಜಯಪುರ ವಿಮಾನ ನಿಲ್ಧಾಣ ನಿರ್ಮಾಣ ಕಾಮಗಾರಿಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಮಧಭಾವಿ, ಅಲಿಯಾಬಾದ ಹಾಗೂ ಬುರಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಟಿ.ಬೂಬಾಲನ್ ಹೇಳಿದರು.
ಬುಧವಾರ ಬುರಣಾಪುರ ಹತ್ತಿರ ವಿಮಾನ ನಿಲ್ಧಾಣಕ್ಕೆ ಭೇಟಿ ನೀಡಿ ಈ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರೊಂದಿಗೆ ಪರಿಸರ ಅಭಿಯಾನ ಜಾಗೃತಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾವು ಮಂಡಿಸಿರುವ ತಮ್ಮ ಅನಿಸಿಕೆಗಳನ್ನು ದೃಡೀಕರಿಸಿ ಭಾರತದ ಸರ್ಕಾರದ ಅರಣ್ಯ ಮಂತ್ರಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಹಿರಿಯ ಪರಿಸರ ಅಭಿಯಂತರ ಗೋಪಾಲಕೃಷ್ಣ ಸಣ್ಣತಂಗಿ, ಜಿಲ್ಲಾ ಪರಿಸರ ಅಧಿಕಾರಿ ಎಮ್.ಎ ಮಣಿಯಾರ, ಎಕ್ಸಿಕ್ಯೂಟಿವ ಇಂಜಿನಿಯರ್ ರಾಜು ಮಜುಮದಾರ, ಸಹಾಯಕ ಅಭಿಯಂತರರಾದ ಎಮ್.ಎಮ್. ಪಾಟೀಲ, ರವಿ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.