ಯಶವಂತರಾಯಗೌಡರಿಂದ 137 ಕೋಟಿ ರೂ ಕಾಮಗಾರಿಗೆ ಚಾಲನೆ
ಇಂಡಿ :ಮಾ.7:ಇಂಡಿ ಮತಕ್ಷೇತ್ರದಲ್ಲಿ ವಿವಿಧ ಇಲಾಖೆಯ ಅಭಿವೃದ್ದಿ ಕಾಮಗಾರಿಗಳಿಗೆ ರೂ 137 ಕೋಟಿ ರೂ ಯೋಜನೆಗೆ ಶಾಸಕ ಯಶವಂತರಾಯಗೌಡ ಪಾಟೀಲರು ಚಾಲನೆ ನೀಡಿದರು.
ಪಟ್ಟಣದ ಅಮರ ಹೋಟೋಲ ಆವರಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಅವರು ಚಾಲನೆ ನೀಡಿದರು.
ಮತಕ್ಷೇತ್ರದ ವಿವಿಧ ಕಡೆ ಇರುವ ರಸ್ತೆ ಸುಧಾರಣೆಗೆ ಲೋಕೊಪಯೋಗಿ ಇಲಾಖೆಯಿಂದ 47 ಕೋಟಿ ರೂ, ಗಾಣಿಗ ಸಮುದಾಯಕ್ಕೆ ಶ್ರೀ ಸಿದ್ದೇಶ್ವರ ಭವನ ನಿರ್ಮಿಸಲು ರೂ ಐದು ಕೋಟಿ, ಶಾಂತೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಅಗಲೀಕರಣಕ್ಕೆ ಒಂದು ಕೋಟಿ, ಹುಸೇನಬಾಷಾ ದೇವಸ್ಥಾನಕ್ಕೆ ಒಂದು ಕೋಟಿ ರೂ,ಇಂಡಿಯಲ್ಲಿ ಕಟ್ಟುತ್ತಿರುವ ಬುದ್ಧ ವಿಹಾರಕ್ಕೆ ಒಂದು ಕೋಟಿ, ಸಾಲೋಟಗಿ ಶಿವಯೋಗೀಶ್ವರ ದೇವಸ್ಥಾನಕ್ಕೆ ಒಂದು ಕೋಟಿ, ಲಚ್ಯಾಣದ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಕೋಟಿ, ಹರಳಯ್ಯ ಸಮಾಜಕ್ಕೆ 50 ಲಕ್ಷ, ಜ್ಯೋತಿಬಾ ಫೂಲೆ ಸಮುದಾಯ ಭವನಕ್ಕೆ 50 ಲಕ್ಷ ಕಾಮಗಾರಿಗೆ ಚಾಲನೆ ನೀಡಿದರು.
ತಾಲೂಕಿನಲ್ಲಿರುವ ಸರಕಾರಿ ಶಾಲೆಗಳ ಕೋಣೆಗಳಿಗೆ 2 ಕೋಟಿ 91 ಲಕ್ಷ ರೂ,ಭೈರುಣಗಿಯಲ್ಲಿ 110 ಕೆವಿ ವಿದ್ಯುತ್ ಕೇಂದ್ರಕ್ಕೆ 12 ಕೋಟಿ ರೂ, ಶಾಲೆಗಳಲ್ಲಿ ಶೌಚಾಲಯಕ್ಕೆ 41 ಲಕ್ಷ ರೂ, ನಿಂಬೆ ಅಭಿವೃದ್ದಿ ಮಂಡಳಿಗೆ 7 ಕೋಟಿ 50 ಲಕ್ಷ ರೂ,ಅಲ್ಪ ಸಂಖ್ಯಾತ ಸಮುದಾಯಗಳ ಪ್ರದೇಶಗಳಲ್ಲಿ ಅಭಿವೃದ್ದಿಗೆ 5 ಕೋಟಿ ರೂ,ಅಂಜುಮನ್ ಇಸ್ಲಾಂ ಸಂಸ್ಥೆಗೆ 1 ಕೋಟಿ 20 ಲಕ್ಷ ರೂ,ಬರ ಪರಿಹಾರಕ್ಕೆ 8 ಕೋಟಿ 50 ಲಕ್ಷ ರೂ ಮತ್ತು ಹೋರ್ತಿ ಗ್ರಾಮದ ಶ್ರೀ ರೇವಣ ಸಿದ್ದೇಶ್ವರ ಏತ ನೀರಾವರಿ ಕಾಮಗಾರಿಯ ಎರಡನೆಯ ಹಂತದ ಮತ್ತು ಮೂರನೆಯ ಹಂತದ ಕಾಮಗಾರಿಗೆ ಸರಕಾರದಿಂದ ಹಣ ಮಂಜೂರಾತಿ ಸೇರಿದಂತೆ ಒಟ್ಟು 137 ಕೋಟಿ ಅನುದಾನ ತಂದಿದ್ದು ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಿದೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ ಶಾಸಕರು ಇಂಡಿ ತಾಲೂಕಿನ ಅಭಿವೃದ್ದಿ ರೂ 137 ಕೋಟಿ ರೂ ಅನುದಾನ ತಂದಿದ್ದು ಅಧಿಕಾರಿ ಪ್ರಾಮಾಣಿಕತೆಯಿಂದ ಎಲ್ಲ ಕೆಲಸಗಳನ್ನು ನಿಷ್ಠೆಯಿಂದ ಸಾರ್ವಜನಿಕರ ಸಹಕಾರದಿಂದ ಮಾಡಲು ವಿನಂತಿಸಿದರು.
ಧರ್ಮರಾಜ ಮುಜಗೊಂಡ,ಬಸವರಾಜ ಗೊರನಾಳ ಮಾತನಾಡಿದರು. ವೇದಿಕೆಯ ಮೇಲೆ ಎಂ.ಆರ್.ಪಾಟೀಲ,ಮಲ್ಲನಗೌಡ ಪಾಟೀಲ, ಬಿ.ಎಂ.ಕೋರೆ, ಭೀಮಣ್ಣ ಕವಲಗಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ, ಗ್ರೇಡ್ 2 ತಹಸೀಲ್ದಾರ ಧನಪಾಲಶೆಟ್ಟಿ,ಜಾವೇದ ಮೋಮಿನ್, ಇಲಿಯಾಸ ಬೋರಾಮಣಿ, ಸತೀಶ ಕುಂಬಾರ, ಪ್ರಶಾಂತ ಕಾಳೆ, ಭೀಮನಗೌಡ ಪಾಟೀಲ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ ಮತ್ತಿತರಿದ್ದರು.