ಪದವಿ ಪರೀಕ್ಷೆ: ‘ಶಾಹೀನ್’ ವಿದ್ಯಾರ್ಥಿನಿಗೆ ಚಿನ್ನದ ಪದಕ
ಬೀದರ್: ಮಾ.7:ಬಿ.ಎಸ್ಸಿ ಕೆಮಿಸ್ಟ್ರಿ ಪರೀಕ್ಷೆಯಲ್ಲಿ ಇಲ್ಲಿಯ ಶಾಹೀನ್ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿ ಸಿಮನ್ ಬಾನು ಡಿ.ಯು. ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಚಿನ್ನದ ಪದಕ ಗಳಿಸಿ ಸಾಧನೆಗೈದಿದ್ದಾರೆ.
ಕೆಮಿಸ್ಟ್ರಿ ವಿಷಯದಲ್ಲಿ ಶೇ 90.7 ರಷ್ಟು ಅಂಕಗಳೊಂದಿಗೆ ಅವರು ಗೌತಮ್ ಮೆಹ್ತಾ ಸಿಂಧನೂರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಕಾಲೇಜಿನ ಇನ್ನೊಬ್ಬರು ವಿದ್ಯಾರ್ಥಿನಿ ಮುಸ್ಕಾನ್ ಫಾತಿಮಾ ಪದವಿಯಲ್ಲಿ ಶೇ 90.95 ರಷ್ಟು ಅಂಕ ಪಡೆದು, ವಿಶ್ವವಿದ್ಯಾಲಯಕ್ಕೆ ಎಂಟನೇ ಯಾರ್ಂಕ್ ಗಳಿಸಿದ್ದಾರೆ.
ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಲು ಶಾಹೀನ್ ಮಹಿಳಾ ಪದವಿ ಕಾಲೇಜು ಆರಂಭಿಸಿದ್ದು, ಗುಣಮಟ್ಟದ ಶಿಕ್ಷಣದ ಕಾರಣ ಕಾಲೇಜು ವಿದ್ಯಾರ್ಥಿಗಳು ಪ್ರತಿ ವರ್ಷ ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದ್ದಾರೆ.
ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿನ ಸಿಮನ್ ಬಾನು ಡಿ.ಯು. ಹಾಗೂ ಮುಸ್ಕಾನ್ ಫಾತಿಮಾ ಅವರ ಸಾಧನೆಯನ್ನು ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯರಿಗೆ ಐಎಎಸ್, ಐಪಿಎಸನಂತಹ ಉನ್ನತ ಹುದ್ದೆಗೇರಲು ಪ್ರೇರಣೆ ನೀಡುತ್ತಿದೆ. ಎರಡು ವರ್ಷದಿಂದ ಯುಪಿಎಸಸಿ ಪರಿಕ್ಷೆ ತರಬೇತಿಯನ್ನು ಕೊಡುತ್ತಿದೆ ಎಂದು ತಿಳಿಸಿದ್ದಾಳೆ.