ಮಾ 16ರಂದು ಲೋಕ ಆದಾಲತ್  : ಹಿರಿಯ  ಸಿವಿಲ್ ನ್ಯಾಯಾಧೀಶರಾದ   ಎಂ. ಭಾರತಿ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ. ಮಾ.7: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದಂತೆ ಮಾರ್ಚ್ 9  ರಂದು ನಡೆಯಬೇಕಾಗಿದ್ದ ರಾಷ್ಟ್ರೀಯ ಲೋಕ ಆದಾಲತ್‌ನ್ನು   ಇದೇ ತಿಂಗಳ ಮಾರ್ಚ್ 16 ರಂದು ಮುಂದೂಡಲಾಗಿದ್ದು ಆದ್ದರಿಂದ ಸಾರ್ವಜನಿಕರು ಕಕ್ಷಿದಾರರು, ಹಾಗೂ ವಕೀಲರುಗಳು ಸಹಕರಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ ತಿಳಿಸಿದರು.ಪಟ್ಟಣದ ನ್ಯಾಯಾಲಯದ ಆವಣದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ  ತಿಳಿಸಿದರು. ಮಾರ್ಚ್ 09 ರಂದು ನಡೆಯಬೇಕಾಗಿದ್ದ ರಾಷ್ಟಿಯ ಲೋಕ ಅದಾಲತ್‌ನ್ನು ರದ್ದು ಪಡಿಸಿ ಮಾರ್ಚ್16 ರಂದು ನಡೆಸಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವರ ನಿರ್ದೇಶನದಂತೆ ಮುಂದೂಡಲಾಗಿದೆ ಎಂದರು.  ರಾಷ್ಟ್ರೀಯ ಲೋಕಆದಾಲತ್‌ನಲ್ಲಿ ರಾಜಿಯಾಗಬಹುದಾದ, ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವಪ್ರಕರಣಗಳಾದ ಪಾಲುವಿಭಾಗ, ಮೋಟರ್ ವಾಹನ ಅಪಘಾತ ಪರಿಹಾರ ವ್ಯಾಜ್ಯಗಳು, ಚೆಕ್ಬೌನ್ಸ್ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವಪ್ರಕರಣಗಳನ್ನು ರಾಜಿಯಾಗಬಹುದಾದ ಇತ್ಯಾರ್ಥಪಡಿಸಿಕೊಳ್ಳಲು ಅವಕಾಶ ಇದ್ದು, ಸಾರ್ವಜನಿಕರು ಕಕ್ಷಿದಾರರು ಹಾಗೂ ವಕೀಲರುಗಳುಅಂದಿನ ರಾಷ್ಟಿಯ ಲೋಕ ಆದಾಲತ್‌ನ್ನು  ಹರಪನಹಳ್ಳಿಯ ಉಭಯ ನ್ಯಾಯಾಲಯಗಳಲ್ಲಿ ನಡೆಯುವ ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜಿಯಾಗಬಹುದಾದ ವ್ಯಾಜ್ಯಗಳನ್ನು ಇತ್ಯಾರ್ಥಪಡಿಸಿಕೊಳ್ಳಬೆಕೆಂದು ಈ ಮೂಲಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.