ದೇವಸ್ಥಾನಕ್ಕೆ ಭೂಮಿ ಪೂಜೆ
ಸಂಜೆವಾಣಿ ವಾರ್ತೆ
ಕಾರಟಗಿ:ಮಾ:07: ಗುರುವಾರದಂದು ತಾಲೂಕಿನ ತೊಂಡಿಹಾಳ 28ನೇ ಕಾಲುವೆ ಗ್ರಾಮದಲ್ಲಿ ಮಾಜಿ ಶಾಸಕ ಬಸವರಾಜ ಧಡೆಸೂಗೂರು ಅವರು ಶಾಸಕರ ಅನುದಾನದ ದೇವಸ್ಥಾನ ಜಿರ್ಣೋದ್ಧಾರ ಅಡಿಯಲ್ಲಿ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನಕೆ ಒಂದು ಲಕ್ಷ ರೂಪಾಯಿ ಅನುದಾನ ನೀಡಿದ್ದರು, ಅದರ ಕಾರ್ಯರೂಪದಡಿಯಲ್ಲಿ ಇಂದು ಗುರುವಾರದಂದು ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಕಮಿಟಿಯ ಅಧ್ಯಕ್ಷರು ಬ್ರಹ್ಮರ್ಜುನರಾವ್, ಕಮಿಟಿಯ ಪ್ರಧಾನ ಕಾರ್ಯದರ್ಶಿ  ಬಿ.ಮಂಜುನಾಥ ನಾಯಕ, ಲಕ್ಕಪ್ಪ ಕಲ್ಗುಡಿ, ಚಂದ್ರಮೌಳಿ, ರಾಮಣ್ಣ ಬಿ, ಗುರುನಾಗ, ಸತ್ಯಪ್ಪ ಸುರಂಪುಡಿ, ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು,