ಪುರಾಣ ಮಂಗಲ
ಬೈಲಹೊಂಗಲ,ಮಾ7: ಸಾಂಸ್ಕೃತಿಕ ಕಾರ್ಯಕ್ರಮಗಳ ಬದಲಾಗಿ ಗುಡ್ಡಾಪೂರ ದಾನಮ್ಮ ದೇವಿಯ ಪುರಾಣ ಹಮ್ಮಿಕೊಳ್ಳುವುದರ ಮೂಲಕ ಬೈಲಹೊಂಗಲ ನಾಡಿನ ಭಕ್ತರನ್ನು ತನ್ನ ಕಡೆಗೆ ಸೆಳೆದ ಖ್ಯಾತಿ ಮೂರುಸಾವಿರ ಮಠಕ್ಕೆ ಸಲ್ಲುತ್ತದೆ ಎಂದು ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು.
ಪಟ್ಟಣದ ಮೂರುಸಾವಿರ ಮಠದ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ದಾನಮ್ಮ ದೇವಿ ಪುರಾಣ ಮಂಗಲ,ಗಣ್ಯರ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಜನ ಸೇರುತ್ತಾರೆ ಎಂಬ ಮಾತನ್ನು ಶ್ರೀಮಠ ಸುಳ್ಳಾಗಿಸಿದೆ.
ಶ್ರೀಮಠದ ಜಾತ್ರಾ ಮಹೋತ್ಸವದ ಪ್ರಯುಕ್ತ 11 ದಿನಗಳ ಕಾಲ ನೆರವೇರಿದ ದಾನಮ್ಮ ದೇವಿ ಪುರಾಣ ಕಾರ್ಯಕ್ರಮ ಹಾಗೂ ಧರ್ಮ ಜಾಗೃತಿ ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗಿಯಾದ ಭಕ್ತರೇ ಇದಕ್ಕೆ ಸಾಕ್ಷಿ ಎಂದರು .
ಲಿಂ.ಗಂಗಾಧರ ಮಹಾಸ್ವಾಮಿಗಳು 1977 ರಲ್ಲಿ ಅದ್ಭುತ ರಥವನ್ನು ನಿರ್ಮಾಣ ಮಾಡುವುದರ ಮೂಲಕ ಬೃಹತ್ ಮಟ್ಟದ ಜಾತ್ರಾ ಮಹೋತ್ಸವ ನಡೆಸಿದ್ದರು.
ಮೂವತ್ತು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕುವುದರ ಮೂಲಕ ಶಿಕ್ಷಣ ಕ್ರಾಂತಿಯನ್ನೇ ಮಾಡಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ ಎಂದು ಗಂಗಾಧರ ಮಹಾಸ್ವಾಮಿಗಳು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ದಾನಮ್ಮ ದೇವಿ ಪುರಾಣ ಮಂಗಲೋತ್ಸವ ಕಾರ್ಯಕ್ರಮ ನೆರವೇರಿತು.
ಸಾನಿಧ್ಯ ವಹಿಸಿದ್ದ ಮುನವಳ್ಳಿ ಯ ಮುರುಘರಾಜೇಂದ್ರ ಸ್ವಾಮೀಜಿ, ಬೈಲಹೊಂಗಲ ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ಶೆಗುಂಶಿಯ ಮಹಾಂತ ಪ್ರಭು ಮಹಾಸ್ವಾಮಿಗಳು,
ಆಶೀರ್ವಚನ ನೀಡಿದರು.
ಗರಗ ಮಡಿವಾಳೇಶ್ವರ ಮಠದ ಪ್ರಶಾಂತ ದೇವರು, ವಿಜಾಪುರದ ಚರಮೂರ್ತಿ ಸ್ವಾಮೀಜಿ ಗಳಿಗೆ ಶ್ರೀಮಠದಿಂದ ಗೌರವ ಸಮರ್ಪಣೆ ಹಾಗೂ ಅತಿಥಿಗಳಾಗಿ ಆಗಮಿಸಿದ ಪ್ರಕಾಶ್ ಮುಗಬಸವ,
ರಾಚಪ್ಪ ಬೊಳೆತ್ತಿನ, ಬಿ.ಎಸ್.ಗೂರನವರ, ವಿ.ಕೆ. ಬಡಿಗೇರ. ಎಸ್.ಎಸ್.ಮಾಟೋಳ್ಳಿ ಸೇರಿದಂತೆ ಗಣ್ಯರಿಗೆ ಗುರುರಕ್ಷೆ ದಯಪಾಲಿಸಲಾಯಿತು.
ಪುರಾಣ ಪ್ರವಚನ ಉಣಬಡಿಸಿದ ಸಿದ್ದಾಪುರದ ಶಿವಲಿಂಗ ಶಾಸ್ತ್ರಿಗಳು. ಸಂಗೀತ ಸೇವೆ ಸಲ್ಲಿಸಿದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.