ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿದ್ವಾದಶ ಜ್ಯೋತಿರ್ಲಿಂಗಗಳ ಶೋಭಾ ಯಾತ್ರೆ
ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.07 : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು, ನಗರದ ಪ್ರಮುಖ ರಸ್ತೆಗಳಲ್ಲಿ ವಿಶೇಷ ಆಕರ್ಷಣೆ ಗೊಂಬೆ ಕುಣಿತದ ಮೂಲಕ, ಶ್ವೇತ ವಸ್ತ್ರಧಾರಿಗಳೊಂದಿಗೆ ದ್ವಾದಶ ಜ್ಯೋತಿರ್ಲಿಂಗಗಳ ಮೆರವಣಿಗೆಯನ್ನು ಅದ್ದೂರಿಯಾಗಿ ನೆರವೇರಿತು.
ಸರ್ವರಲ್ಲಿ ಶಾಂತಿ, ಸದ್ಭಾವನೆ, ಭಾವೈಕ್ಯತೆಯನ್ನು, ಜಾಗೃತಗೊಳಿಸಲು ಈ ಒಂದು ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಹೊಸಪೇಟೆ ಕೇಂದ್ರದ ಮುಖ್ಯಸ್ಥೆ ಮಾನಸ ತಿಳಿಸಿದರು.
ಎರಡು ದಿನಗಳಿಗಾಗಿ ಶ್ರೀ ಪದ್ಮಶಾಲಿ ಬಹುತ್ತಮ ಕಲ್ಯಾಣ ಮಂಟಪದಲ್ಲಿ ,ಮಾರ್ಕಂಡೇಶ್ವರ ಗುಡಿಯ ಹತ್ತಿರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದವರು  ವೈವಿಧ್ಯಮಯ ಆಕರ್ಷಣೆಗಳೊಂದಿಗೆ ಆಯೋಜಿಸಿರುವ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ, ಸಹಸ್ರಲಿಂಗ ದರ್ಶನ, ಶಿವನೊಂದಿಗೆ ಸೆಲ್ಫಿ ಪಾಯಿಂಟ್, ಆಧ್ಯಾತ್ಮಿಕ ಚಿತ್ರ ಪ್ರದರ್ಶನ, ನವರತ್ನಗಳಿಂದ ಅಲಂಕೃತಗೊಂಡ ನವಲಿಂಗದರ್ಶನ, ಹೀಗೆ ಒಂದೇ ಸ್ಥಾನದಲ್ಲಿ ಹಲವಾರು ಶಿವಲಿಂಗದ ದರ್ಶನವನ್ನು ಪಡೆಯಲು ವಿಜಯನಗರ ಜಿಲ್ಲೆಯ ಸಾರ್ವಜನಿಕರನ್ನು  ಮಾನಸಕ್ಕ ಮತ್ತು ರೇವತಿ ಅಕ್ಕ ಕೋರಿದರು.