ಪಾನ ಮುಕ್ತ ಸದಸ್ಯರ ನವಜೀವನೋತ್ಸವ

ಸಂಜೆವಾಣಿ ವಾರ್ತೆ
ಹೊನ್ನಾಳಿ ಮಾ.೭; ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದಪಾನ ಮುಕ್ತ ಸದಸ್ಯರ ನವಜೀವನೋತ್ಸವ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ಪಾನಮುಕ್ತ ಸದಸ್ಯರ ನವ ಜೀವನೋತ್ಸವ ಎಂಬ ವಿಶೇಷ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಚನ್ನಪ್ಪ ಸ್ವಾಮಿ ಆವರಣದಲ್ಲಿ ನಡೆಯಿತು.ದಾವಣಗೆರೆ ಜಿಲ್ಲೆಯ ಒಟ್ಟು 28 ಶಿಬಿರಗಳಲ್ಲಿ ಹೊನ್ನಾಳಿಯಲ್ಲಿ ನಡೆದ ಆರು ಪಾನಮುಕ್ತ ಶಿಬಿರಗಳಲ್ಲಿ 600 ಜನರು ಭಾಗಿಯಾಗಿ ಮದ್ಯ ತ್ಯಜಿಸಿ ತಮ್ಮ ಸುಂದರ ಬದುಕನ್ನು ಕಟ್ಟಿಕೊಂಡಿರುವ ನೈಜ ಘಟನೆ ಎಲ್ಲರ ಕಣ್ಮುಂದೆ  ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಮಹಾ ಪ್ರಸಾದವೆ ಸ್ವೀಕರಿಸಿದಂತೆ ಭಾಸವಾಯಿತು.ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಧರ್ಮಸ್ಥಳ ಜನಜಾಗೃತಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕ್ ವಿನ್ಸಂಟ್ ಪಾಯಾಸ್ಸಭೆಯಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮದ್ಯ ತ್ಯಜಿಸಿ ಸುಖ ಜೀವನ ನಡೆಸುತ್ತಿರುವಂತ ರಮೇಶ್   ತಮ್ಮ ಅನಿಸಿಕೆಗಳನ್ನು ತಿಳಿಸಿದರು.  ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಹೊಸಕೇರಿ ಸುರೇಶ್ ಮಾತನಾಡಿ ನಮ್ಮ ಹೊನ್ನಾಳಿಯಲ್ಲಿಯೇ ಇಂತಹ  ಕಾರ್ಯಕ್ರಮವನ್ನು ಆಯೋಜಿಸಿದ್ದು  ಸಂತೋಷ ತಂದಿದೆ ಪಾನಮುಕ್ತ ಸದಸ್ಯರ ನವ ಜೀವನೋತ್ಸವದ ಕಾರ್ಯಕ್ರಮ ಹೊನ್ನಾಳಿಯಲ್ಲಿ ನಡೆಯುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಎಂದರು.ಈ ಸಂದರ್ಭದಲ್ಲಿ ಕುಮಾರಸ್ವಾಮಿ, ಬಿ ಎಲ್. ನಾಗರಾಜ್  ಕತ್ತಿಗೆ, ಮಂಜಪ್ಪ ಸರಳಿನ ಮನೆ, ಹವಳದ ಲಿಂಗರಾಜ್, ಶ್ರೀನಿವಾಸ್, ನಟರಾಜ್, ದಾವಣಗೆರೆ ನಿರ್ದೇಶಕರಾದ ಲಕ್ಷ್ಮಣ್ ಎಂ, ಹೊನ್ನಾಳಿ ಬಸವಪಟ್ಟಣ ಯೋಜನಾಧಿಕಾರಿ  ಹಾಗೂ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು  ಉಪಸ್ಥಿತರಿದ್ದರು.