ನಿಮ್ಮ ಅಂತಸ್ತು ಬಿಡುವ ಸ್ಥಳ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.07: ಬಹುತೇಕರಿಗೆ   ಜೀವನದಲ್ಲಿ ಹೆಚ್ಚಿನ ಸಂಪತ್ತು ಗಳಿಸದ ಮೇಲೆ ಅಹಂಕಾರ ಹೆಚ್ಚುವುದು ಸಾಧ್ಯ. ಅಂತಹವರಿಗೆ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಚಿತ್ತವಾಡಿಗಿ ಪ್ರದೇಶದ ಶ್ರೀ ಕಲ್ಮಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಉತ್ತಮ ಸೂಕ್ತಿಯೊಂದು ಶ್ರೀಮಂತ ಅಹಂಕಾರಿಗಳಿಗೆ ಪಾಠ ಹೇಳುವಂತಿದೆ.
ದೇವಸ್ಥಾನದ ಮುಂಭಾಗದಲ್ಲಿ ಇದು ನಿಮ್ಮ ಚಪ್ಪಲಿ ಮತ್ತು ಅಂತಸ್ತು ಬಿಡುವ ಸ್ಥಳ ಎಂದು ಬರೆಯಲಾಗಿದೆ.
ಹಣದ ಗಮ್ಮತ್ತಿನಿಂದ ಮೆರೆಯುವ ಜನತೆಗೆ ಈ ಸೂಕ್ತಿ ಜೀವನದಲ್ಲಿ ಬದಲಾವಣೆಗೆ ಮಾರ್ಗದರ್ಶನವಾಗಲಿದೆಂದರೆ ತಪ್ಪಾಗಲಾರದು.