ವೀ.ವಿ‌ ಸಂಘದ ಕುರುಹು ಕುರುಗೋಡು ಕಂಪ್ಲಿಯಲ್ಲಿರಲಿ
* ಆಡಳಿತ ಸುಧಾರಣೆ, ಉತ್ತಮ ಗುಣಮಟ್ಟದ  ಶಿಕ್ಷಣಕ್ಕೆ ಆಧ್ಯತೆ ನೀಡಿ
* ಬೈಲಾ ತಿದ್ದುಪಡಿ ಮಾಡಿ ಕ್ಷೇತ್ರ ವಿಂಗಡಣೆಯಾಗಲಿ
* ಚುನಾಣೆ ಸಂದರ್ಭದಲ್ಲಿ ಮಾತ್ರ ಸದಸ್ಯರನ್ನು ನೆನಪು ಮಾಡಿಕೊಳ್ಳಬೇಡಿ
ಎನ್.ವೀರಭದ್ರಗೌಡ
ಬಳ್ಳಾರಿ, ಮಾ.07: ವೀರಶೈವ ವಿದ್ಯಾವರ್ಧಕ ಸಂಘದ ಕುರುಹು ಜಿಲ್ಲೆಯ ಕಂಪ್ಲಿ,  ಕುರುಗೋಡು ಪಟ್ಟದಲ್ಲಿ ಒಂದು ಇರಲಿ ಎಂಬುದು ಕಂಪ್ಲಿ ಮತ್ತು  ಕುರುಗೋಡಿನ ಆಜೀವ ಸದಸ್ಯರ ಆಗ್ರಹವಾಗಿದೆ.
ಈ ತಿಂಗಳ 17 ರಂದು ನಡೆಯುವ ಸಂಘದ ಕಾರ್ಯಕಾರಿ ಚುನಾವಣೆ ನಿಮಿತ್ತ ಮತಯಾಚನೆಗೆ ತೆರಳಿದ ದಿ.ಅಲ್ಲಂ ಕರಿಬಸಪ್ಪ, ಎನ್.ತಿಪ್ಪಣ್ಣನವರ “ಹಿರಿಯರ ತಂಡ” ಕುರುಗೋಡಿನ ರಾಘವಾಂಕ ಮಠದಲ್ಲಿ ಆಜೀವ ಸದಸ್ಯರನ್ನು ಭೇಟಿಯಾದಾಗ. ಅಲ್ಲಿನ ಸದಸ್ಯರು ನಮ್ಮ ಸಂಪೂರ್ಣ ಬೆಂಬಲ ನಿಮ್ಮ ಹಿರಿಯರ ತಂಡಕ್ಕಿದೆ‌ ಎಂದು ಹೇಳಿದರು.
ನಂತರ ಕುರುಗೋಡಿನಲ್ಲಿ 160 ಕ್ಕೂ ಹೆಚ್ಚು ವೀರಶೈವ ಕುಟುಂಬಗಳಿವೆ. ಇಂತಹ ಪಟ್ಟದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವಂತೆ ಇಲ್ಲಿ ಒಂದು ಶಾಲೆ ಇಲ್ಲವೇ ಹಾಸ್ಟಲ್ ಆರಂಭಿಸಬೇಕು. ನಾವು ಕಳೆದ ಮೂರು ಚುನಾವಣೆಗಳಿಂದ ಈ ಬೇಡಿಕೆ ಇಡುತ್ತಲೇ ಇದೆ. ಆದರೆ ಈ ಕೆಲಸ ಆಗಿಲ್ಲ. ಇಲ್ಲಿ
2003 ರಿಂದ   ವೀರಶೈವ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆ ಮಾಡಿದೆ ಇದಕ್ಕೂ ಸಂಘದ  ಸಹಕಾರ ಬೇಕು ಎಂದು. ಸಂಘದ ಶಾಲಾ ಕಾಲೇಜುಗಳಿಗೆ ಬಂದಾಗ ಅಸಜೀವ ಸದಸ್ಯರಿಗೆ ಗೌರವ ಕೊಡಿ,  ಆಯ್ಕೆಯಾದ ಮೇಲೂ ನಮ್ಮ ಜೊತೆ ಸಂಪರ್ಕ ಇರಲಿ ಎಂದು  ಎಸ್.ಟಿ.ಎಂ.ಸದಾಶಿವಯ್ಯ ಮತ್ತು ಎನ್.ಎಂ.ಪಂಚಾಕ್ಷರಯ್ಯ ಮತ್ತಿತ್ತರರು ಮನವಿ ಮಾಡಿದರು. 
ಹಿರಿಯರ ತಂಡದ ನಾಯಕ ಅಲ್ಲಂ ಗುರುಬಸವರಾಜ್ ಅವರು ಕುರುಗೋಡು ದೊಡ್ಡಬಸವ ನಮ್ಮ‌ಮನೆ ದೇವರು. ಕುರುಗೋಡಿನ ಜನತೆಯ ಬೆಂಬಲ ಸದಾ ನಮಗಿದೆ. ಸಂಪೂರ್ಣ ತಂಡ ಬೆಂಬಲಿಸಿ ಅಧಿಕಾರಕ್ಕೆ ತನ್ನಿ  ಹಿಂದಿನದೇನೇ ಆಗಿರಲಿ. ಈ ಬಾರಿ ನಿಮ್ಮ ಆಶಯ ಈಡೇರಿಸಲಿದೆಂದು ಹೇಳಿದರು.
ನಂತರ ಗೆಣಿಕೆಹಾಳಿನಲ್ಲಿ ನಡೆದ ಸಭೆಯಲ್ಲಿ ಗ್ರಾಮದ ಹಿರಿಯರಾದ ಶಾಂತನಗೌಡ, ರಂಗನಟ ತಿಮ್ಮನಗೌಡ, ಶಾನವಾಸಪುರದ ಶಾಂತನಗೌಡ ಮೊದಲಾದವರು ಸಹ ಹಿರಿಯರ ತಂಡಕ್ಕೆ ಬೆಂಬಲ ಸೂಚಿಸಿದರು.
ಇದಕ್ಕೂ ಮುನ್ನ ಎಮ್ಮಿಗನೂರಿನ ಮಹಾಂತ ಮಠದದಲ್ಲಿ ಸಿರುಗುಪ್ಪದ ಸಮುದಾಯದ ಹಿರಿಯ ಮುಖಂಡ ಚೊಕ್ಕಬಸನಗೌಡರು, ಸ್ಥಳೀಯರಾದ ಮಹೇಶಗೌಡ, ಸದಾಶಿವಪ್ಪ ಮೊದಲಾದವರು ಸಭೆ ಸೇರಿ ತಂಡಕ್ಕೆ ಬೆಂಬಲ ಸೂಚಿಸಿದರು.
ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯತ್ವವನ್ನು ಕ್ಷೇತ್ರ ವಿಂಗಡಣೆ ಮಾಡಿ, ಗ್ರಾಮಾಂತರರಿಗೆ ತಾಲೂಕಿಗೊಂದು ಸದಸ್ಯತ್ವ ಮೀಸಲಿಡಿ ಎಂದರರು.
ಉತ್ತಮ ಶಿಕ್ಷಣ ನೀಡಲು
ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಿ. ವಿದ್ಯೆ ವರ್ಧಕವಾಗವು ಕೆಲಸ ಆಗಬೇಕು. ಈಗಿರುವ ಬೈಲ ತಿದ್ದುಪಡಿ ಆಗಬೇಕು ಎಂದರು. ನಿಮ್ಮ ಸಲಹೆಗಳನ್ನು ಸ್ವೀಕರಿಸಿ ಅನುಷ್ಟಾನಕ್ಕೆ ಪ್ರಯತ್ನಿಸಲಿದೆಂದರು. 
ಕಂಪ್ಲಿಯಲ್ಲಿ ಸದಸ್ಯ ಆನಂದ ಮೂರ್ತಿ ಅವರು. ಸಂಘ ಆರಂಭಗೊಂಡು ಶತಮಾನ ಕಳೆದಿದೆ. ಆದರೆ ಕಂಪ್ಲಿಯಲ್ಲಿನ ಸದಸ್ಯರಿಗೆ ಕೇವಲ‌ ಮೂರು ವರ್ಷಕ್ಕೆವೊಮ್ಮೆ ಮತ ಕೇಳಲು‌ ಬರಯವುದು ಬಿಟ್ಟು. ಇಲ್ಲಿ ಏನು ಮಾಡಿದೆ. ಇತರೆಡೆಗಳಂತೆ ಸಂಘದಿಂದ ಇಲ್ಲಿಯೂ ಒಂದು ಶಾಲೆ ಕಾಲೇಜು ತೆರೆಯಬೇಕು. ಸಂಘದಿಂದ ನಿವೇಶನ ನೀಡಿದರೆ,  ಇಲ್ಲಿ ನಮ್ಮ ಸಮಾಜದವರೆಲ್ಲ ಸೇರಿ ಕಟ್ಟಡ ಕಟ್ಟುವ ಪ್ರಯತ್ನ ಮಾಡಲಿದೆಂದು ಹೇಳಿದ್ದಾರೆ.
ಒಟ್ಟಾರೆ ಹಿರಿಯರ ತಂಡ ತೆರಳಿದ ಕಡೆ ಈ ಬಾರಿ ನಿಮ್ಮ ತಂಡಕ್ಕೆ ನಮ್ಮ‌ಸಂಪೂರ್ಣ ಬೆಂಬಲ‌ ಇದೆ. ಒಂದಿಷ್ಟು ಸಂಘದಲ್ಲಿ ಆಡಳಿತ ಸುಧಾರಣೆ ತನ್ನಿ, ಬೈಲ ತಿದ್ದುಪಡಿ ಮಾಡಿ, ಸಂಘದ ಸದಸ್ಯರನ್ನು ಚುನಾವಣೆಗೆ ಮಾತ್ರ ನೆನಪಿಸಿಕೊಳ್ಳಬೇಡಿ ಎಂಬ ಸಲಹೆ ಮತದಾರರ ಮನದಾಳದ ಮಾತಾಗಿದೆ.
ಈ ಬಾರಿ ವೀರಶೈವ ವಿದ್ಯಾವರ್ಧಕ ಸಂಘದಿಂದ ಕುರುಗೋಡಿನಲ್ಲೂ ಒಂದು ಕುರುಹು ಆಗಲೇ ಬೇಕು.
ಎನ್.ಎಂ.ಪಂಚಾಕ್ಷರಯ್ಯ, ಕುರುಗೋಡು.
ಚುನಾವಣೆಯಲ್ಲಿ ಒಳ ಜಾತಿ ಭೇದ ಮರೆತು ಎಲ್ಲ 30 ಮತಗಳನ್ನು ಚಲಾಯಿಸಬೇಕು. ನಗರ ಮತದಾರರಿಂದ ಈ ಕೆಲಸ ಆಗಬೇಕು.
ಚೊಕ್ಕಬಸನಗೌಡ, ಸಿರುಗುಪ್ಪ.
ಕಂಪ್ಲಿಯಲ್ಲೂ ವೀರಶೈವ ವಿದ್ಯಾವರ್ಧಕ ಸಂಘದಿಂದ ಉದ್ಯೋಗ ಅವಕಾಶ ಕಲ್ಪಿಸುವ ಕೋರ್ಸ್ ನ ಕಾಲೇಜು ಆರಂಭಿಸಿ.
ಆನಂದ ಮೂರ್ತಿ, ಕಂಪ್ಲಿ.