ಯುವ ರೈತ ಸಂಗಮೇಶ ಬಿಜಾಪುರಗೆ ವಿಜಯಪುರ ರತ್ನ ಪ್ರಶಸ್ತಿ ವಿತರಣೆ
ಕೊಲ್ಹಾರ:ಸೆ.೧೭: ತಾಲೂಕಿನ ಮುಳವಾಡ ಗ್ರಾಮದ ಯುವ ರೈತ ಸಂಗಮೇಶ ಬಿಜಾಪೂರವರು ಸಾವಯವ ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರ್ತಿಸಿ ವಿಜಯಪುರ ಗಜಾನನ ಉತ್ಸವ ಮಹಾಮಂಡಲದವರು ವಿಜಯಪುರ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಭಾನುವಾರ ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಗಜಾನನ ಉತ್ಸವ ಮಹಾಂಡಲ ವತಿಯಿಂದ ಹಮ್ಮಿಕೊಂಡ ವಿಜಯಪುರ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ,ಮಾಜಿ ಕೇಂದ್ರ ಮಂತ್ರಿ ಹಾಗೂ ಸಂಸದ ರಮೇಶ ಜಿಗಜಿಣಗಿ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಕೃಷಿ ಅಧಿಕಾರಿ ಲಿಂಗರಾಜ ತಾಳಿಕೋಟಿ,ಮುಖಂಡ ಜಗದೀಶ ಮುಚ್ಚಂಡಿ, ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಸಂಗಮೇಶ ಚೂರಿ ಸೇರಿದಂತೆ ಅನೇಕರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಸಂಗಮೇಶ ಬಿಜಾಪೂರ ಮಾತನಾಡಿ,ಮುಳವಾಡ ಗ್ರಾಮದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತೀರುವುದನ್ನು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜಯಪುರ ಗಜಾನನ ಉತ್ಸವ ಮಹಾಮಂಡಲದ ಪಧಾಧಿಕಾರಿಗಳು ನನ್ನ ಸಾಧನೆಯನ್ನು ಗುರ್ತಿಸಿ ವಿಜಯಪುರ ರತ್ನ ಪ್ರಶಶ್ತಿ ನೀಡಿದ್ದಕ್ಕಾಗಿ ಎಲ್ಲರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.