ವಿಜಯಪುರದಲ್ಲಿ ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆಗೆ ಮುಸ್ಲಿಂರಿAದ ತೀವ್ರ ವಿರೋಧ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೭ :ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ಆಸ್ತಿ ಕಾಯ್ದೆ ವಿರೋಧಿಸಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೋಮವಾರ ನಗರದಲ್ಲಿ ಆಯೋಜಿಸಿದ ಬೃಹತ್ ಶೋಭಾ ಯಾತ್ರೆಯಲ್ಲಿ ಕಾಯ್ದೆ ವಿರೋಧಿಸಿ ಮುಸ್ಲಿಂ ಬಾಂಧವರು ಭಿತ್ತಿಪತ್ರ ಪ್ರದರ್ಶಿಸಿ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು.
ಅನಂತರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಧರ್ಮಗುರು ಮೌಲಾನಾ ಸೈಯದ ತನ್ವೀರಪೀರಾ ಹಾಸ್ಮಿ ಮಾತನಾಡಿ, ವಕ್ಫ್ ಪದ್ಧತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಾಗಾಗಿ ವಕ್ಫ್ ಕಾಯ್ದೆಯನ್ನು ಸಂಪೂರ್ಣ ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ. ಬೇಕಿದ್ದರೆ ಅಗತ್ಯದ ತಿದ್ದುಪಡಿ ತರಲಿ. ಆದರೆ ಈ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವುದಕ್ಕೆ ತಮ್ಮ ವಿರೋಧವಿದೆ ಎಂದರು.
ನಮ್ಮ ಸಮಾಜದ ಗೌರವ ಕಡಮೆ ಮಾಡಲು ವಕ್ಫ್ ಕಾಯ್ದೆ ಮಾಡುತ್ತಿದ್ದಾರೆ. ನಾವು ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ವಿಶ್ವಾಸವಿಟ್ಟು ನಡೆದುಕೊಳ್ಳುತ್ತೇವೆ. ದೇಶ ರಕ್ಷಣೆಗೆ ಜೀವವನ್ನೇ ನೀಡುತ್ತೇವೆ. ನಮ್ಮ ಭಾರತ ದೇಶ ಜಾತ್ಯತೀತ ರಾಷ್ಟç. ನಮಗೆ ದೇಶದ ಬಗ್ಗೆ ಗೌರವವಿದೆ. ಭಾರತ ಅಭಿವೃದ್ಧಿ ಹೊಂದಬೇಕು ಎಂದು ಅವರು ಹೇಳಿದರು.
ದೇಶದಲ್ಲಿರುವ ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಚರ್ಚೆಯಾಗಬೇಕು. ದೇಶದ ಗಡಿ ರಕ್ಷಣೆಯಾಗಬೇಕು. ಗಡಿ ಕಾಯುವ ಸೈನಿಕರಿಗೆ ನಾವು ಸಲಾಂ ಹೇಳುತ್ತೇವೆ ಎಂದು ಧರ್ಮಗುರು ಮೌಲಾನಾ ಸೈಯದ ತನ್ವೀರ ಪೀರಾ ಹಾಸ್ಮಿ ನುಡಿದರು.
ಕರ್ನಾಟಕ ಹಾಗೂ ದೇಶದಲ್ಲಿ ಹೇಟ್ ಕ್ರೆöÊಂ ರೂಲ್ಸ್ ಜಾರಿಯಾಗಬೇಕು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಒಬ್ಬರ ಮೇಲೆ ಹಲ್ಲೆ ನಡೆಸುವ ಘಟನೆ ನಡೆಯಬಾರದು. ಈ ನಿಟ್ಟಿನಲ್ಲಿ ದಾಳಿ ನಡೆಸುವವರಿಗೆ ಕಠಿಣ ಶಿಕ್ಷೆಯಾಗಬೇಕು. ಭಾರತ ದೇಶವು ಅಮೆರಿಕ, ಯುರೋಪಕ್ಕಿಂತಲೂ ಸುಂದರ ದೇಶ. ನಾವು ಹಿಂದುಸ್ತಾನಿ ಮುಸ್ಲಿಂರು. ಹಿಂದುಸ್ತಾನಿ ಮುಸ್ಲಿಂರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ ಎಂದು ತಿಳಿಸಿದರು.
ಬೃಹತ್ ಶೋಭಾ ಯಾತ್ರೆ
ಇದಕ್ಕೂ ಮುನ್ನ ಜಗತ್ತಿಗೆ ಶಾಂತಿ, ಸಹೋದರತೆಯ ಸಂದೇಶ ಸಾರಿದ ಹಜರತ್ ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಜನ್ಮದಿನೋತ್ಸವದ ಈದ್ ಮಿಲಾದ್ ನಿಮಿತ್ತ ಸೋಮವಾರ ನಗರದಲ್ಲಿ ವಿಶ್ವ ಶಾಂತಿಗಾಗಿ ಬೃಹತ್ ಶೋಭಾ ಯಾತ್ರೆ ನಡೆಸಲಾಯಿತು.
ಧರ್ಮಗುರು ಹಜರತ್ ಮೌಲಾನಾ ತನ್ವೀರ್ ಪೀರಾ ಅವರ ನೇತೃತ್ವದಲ್ಲಿ ಬೃಹತ್ ಶಾಂತಿ ಶೋಭಾ ಯಾತ್ರೆಯು ಹಜರತ್ ಹಾಸಿಂಪೀರ ದರ್ಗಾದಿಂದ ಪ್ರಾರಂಭಗೊAಡು ಗೋಳಗುಮ್ಮಟ ಮಾರ್ಗವಾಗಿ, ಜಾಮೀಯಾ ಮಸೀದಿ ರಸ್ತೆ, ಅತಾವುಲ್ಲಾಃ ಚೌಕ್, ಬಾಗಲಕೋಟ ಕ್ರಾಸ್, ಕೇಂದ್ರ ಬಸ್ ನಿಲ್ದಾಣ, ಜೋಡುಗುಮ್ಮಟ, ಹುತಾತ್ಮ ಚೌಕ್, ಗಾಂಧಿ ಚೌಕ್, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಮೂಲಕ ದರಬಾರ ಹೈಸ್ಕೂಲ್ ಮೈದಾನ ತಲುಪಿತು. ಬಳಿಕ ಬೃಹತ್ ಸಮಾವೇಶ ನಡೆಯಿತು ಗಣ್ಯರು, ಮುಖಂಡರು ಇದ್ದರು.