ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಮಾ.೬; ಮತದಾನದಿಂದ ವಂಚಿತರಾಗದೆ, 18ವರ್ಷ ಪೂರೈಸಿದ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎನ್ನುವ ಜಾಗೃತಿ ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರ, ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಸ್ವ ಸಹಾಯ ಸಂಘ, ಪ್ರೇರಣಾ ಶೈಕ್ಷಣಿಕಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮತ್ತು ಹೇಮರೆಡ್ಡಿ ಮಲ್ಲಮ್ಮ ಐಟಿಐ ಕಾಲೇಜು ಇವರ ಸಂಯುಕ್ತಾಶ್ರಮದಲ್ಲಿ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಶಾಂತಕುಮಾರ, ಉಪನ್ಯಾಸಕರಾದ ಬಸವರಾಜ, ಅನಿತಾ, ನಾಗರಾಜ, ಚನ್ನಪ್ಪ ಕಂಬಳಿ, ಸಂಸ್ಥೆಯ ನಿರ್ದೇಶಕಿ ಶ್ವೇತಾರವರು ಸೇರಿದಂತೆ ಇತರರು ಇದ್ದರು.