ಮಂದಿರಗಳ ಅಭಿವೃದ್ದಿಗೆ ಅನುದಾನ ಕೊಡಿ
ಕಲಬುರಗಿ,ಮಾ.7: ಸಾರ್ವಜನಿಕರಿಗೆ ಆಶ್ರಯ ನೀಡುವ ನಗರದ ಎಲ್ಲ ದೇವಸ್ಥಾನಗಳ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ಲಾತೂರಕರ್ ಆಗ್ರಹಿಸಿದ್ದಾರೆ.
ಕಲಬುರ್ಗಿ ಗ್ರಾಮದೇವತೆ ಶರಣ ಬಸವೇಶ್ವರ ಜಾತ್ರೆ ಬರುತ್ತಿದೆ. ಅದಕ್ಕೆ ಹೆಚ್ಚಿನ ಅನುದಾನ ನೀಡಿ, ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಗರದ ಎಲ್ಲ ಚಿತಾಗಾರಗಳ ಅಭಿವೃದ್ಧಿ ಮಾಡಬೇಕು. ಪ್ರತಿಯೊಂದು ವಾರ್ಡ್‍ಗಳಲ್ಲಿ ಬಯಲು ಗ್ರಂಥಾಲಯ ಸ್ಥಾಪಿಸಬೇಕು. ಈ ಬಾರಿ ಬೇಸಿಗೆ ಬಿಸಿಲು ಹೆಚ್ಚು ಇರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸ್ಯವಸ್ಥೆ ಮಾಡಬೇಕು. ನಗರದ ಎಲ್ಲಾ ಬೋರ್‍ವೆಲ್ ಬತ್ತಿ ಹೋಗಿವೆ. ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.