9 ರಂದು ಪಂ.ಪುಟ್ಟರಾಜ ಕವಿ ಗವಾಯಿಗಳವರ ಜನ್ಮದಿನೋತ್ಸವ
ಕಲಬುರಗಿ,ಮಾ.7-ಗಡಿನಾಡ ಸಂಗೀತ ಸೇವಾ ಸಂಸ್ಥೆ ವತಿಯಿಂದ ಗಾನಯೋಗಿ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ 110 ನೇ ಜನ್ಮದಿನೋತ್ಸವದ ಅಂಗವಾಗಿ ಪಂ.ಪುಟ್ಟರಾಜ ಕವಿ ಗವಾಯಿಗಳವರ ವಿರಚಿತ ಕಾವ್ಯ ಕುಂಚ ಗಾಯನ ಸಾಂಸ್ಕøತಿಕ ಕಾರ್ಯಕ್ರಮವನ್ನು ನಗರದ ಕಲಾ ಮಂಡಳದಲ್ಲಿ ಮಾ.9 ರಂದು ಸಾಯಂಕಾಲ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಪಂ.ಪುಟ್ಟರಾಜ ಕವಿ ಗವಾಯಿಗಳವರು ರಚಿಸಿರುವ ವಚನಗಳು, ಭಾವಗೀತೆ ಮತ್ತು ಭಕ್ತಿಗೀತೆಗಳ ಕಾವ್ಯ ಕುಂಚ ಗಾಯನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ.ಗುರುಮೂರ್ತಿ ಶಿವಾಚಾರ್ಯರು ಹಾಗೂ ಸಂಗಮನಾಥ ದೇವರು ವಹಿಸುವರು. ಉದ್ಘಾಟಕರಾಗಿ ಹಿರಿಯ ರಾಜಕೀಯ ಮುಖಂಡರಾದ ಅಣ್ಣಾರಾವ ಧುತ್ತರಗಾಂವ ಆಗಮಿಸುವರು. ಅಧ್ಯಕ್ಷತೆಯನ್ನು ಡಾ. ಬಸವರಾಜ ಕಲಗುರ್ತಿ ಮಠ, ಮುಖ್ಯ ಅತಿಥಿಗಳಾಗಿ ಜಾನಕಿ ಹೊಸೂರು, ಶ್ರೀನಾಥ ಬಿರಾದಾರ, ಬಿ.ಎಚ್. ನಿರಗುಡಿ, ಡಾ.ಶಿವರಂಜನ ಸಂತ್ಯಂಪೇಟೆ, ರೇವಯ್ಯ ವಸ್ತ್ರದಮಠ, ಡಾ.ಮಲ್ಲಿಕಾರ್ಜುನ ಪೆÇೀಲಿಸ್ ಪಾಟೀಲ ಭಾಗವಹಿಸುವರು. ಕಲಾವಿದರಾದ ಬಾಬುರಾವ ಕೋಬಾಳ, ಗುರುಶಾಂತಯ್ಯ ಸ್ಥಾವರಮಠ, ಶಿವಾನಂದ ಮಂದೆವಾಲ, ಕವಿತಾ ಪಾಟೀಲ, ರವಿಕುಮಾರ ಆಳಂದ ಹಾಗೂ ಅನೇಕ ಕಲಾವಿದರು ಭಾಗವಹಿಸುವರು
ಎಂದು ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ತಿಳಿಸಿದ್ದಾರೆ.