ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಕೇಶವರೆಡ್ಡಿ ಮಂದುವರಿಕೆ
ಚಿಕ್ಕಬಳ್ಳಾಪುರ.ಮಾ೭:ಚಿಕ್ಕಬಳ್ಳಾಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಾದಿ ಈಗಾಗಲೇ ಪ್ರಕಟಗೊಂಡಿದ್ದು ಚಿಕ್ಕಬಳ್ಳಾಪುರ ನಗರ ಅಭಿವೃದ್ಧಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾಗಿ ಕೆ ಎನ್ ಕೇಶವ ರೆಡ್ಡಿ ರವರನ್ನು ಸರ್ಕಾರ ನೇಮಕ ಮಾಡಿದ್ದು ಇವರನ್ನೇ ಮುಂದುವರಿಸಬೇಕು ಎಂದು ಕಾಂಗ್ರೆಸ್ ಮುಖಂಡ ತಿಳಿಸಿದರು.
ಅವರು ನಗರದಲ್ಲಿನ ಅವರ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಕೆ ಎನ್ ಕೇಶವ್ ರೆಡ್ಡಿರವರ ನೇಮಕಕ್ಕೆ ಕೆಲವು ಕಾಂಗ್ರೆಸ್ ಮುಖಂಡರಿಂದ ವಿರೋಧ ವ್ಯಕ್ತವಾಗಿದೆ ಆದರೆ ಯಾವುದೇ ಕಾರಣದಿಂದಲೂ ಸರ್ಕಾರ ಕೇಶವ್ರೆಡ್ಡಿರವರ ನೇಮಕವನ್ನು ಬದಲಾಯಿಸಬಾರದು ಎಂದು ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ರಾಮಚಂದ್ರ ಮಾತನಾಡಿ ಒಂದು ಬಾರಿ ಅವರನ್ನು ನೇಮಕ ಮಾಡಲಾಗಿದೆ ಕೊಟ್ಟ ಅಧಿಕಾರವನ್ನು ಹಾಗೆಯೇ ಹಿಂತೆಗೆದುಕೊಳ್ಳುವುದು ಸರಿ ಇಲ್ಲ ಎಂದರು.
ಪಕ್ಷದ ಮುಖಂಡರುಗಳಲ್ಲಿ ಈ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದರೆ ಪಕ್ಷದ ಒಳಗೆ ಚರ್ಚಿಸಬಹುದು ಆದರೆ ಬಹಿರಂಗವಾಗಿ ಚರ್ಚಿಸಿರುವುದು ಸರಿ ಅಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಜಿಲ್ಲಾ ಘಟಕದ ಅಧ್ಯಕ್ಷ ಸಹಿದ್ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇಲ್ಲದೆ ಇದ್ದ ಸಂದರ್ಭದಲ್ಲಿ ಕಳೆದ ಆರು ವರ್ಷಗಳಿಂದಲೂ ಕೆಎನ್ ಕೇಶವ ರೆಡ್ಡಿ ರವರು ಅಪಾರ ಶ್ರಮದಿಂದ ಪಕ್ಷವನ್ನು ಸಂಘಟಿಸಿದ್ದಾರೆ ಅವರನ್ನೇ ಮುಂದುವರಿಸಬೇಕು ಎಂದರು.