ಉನ್ನತ ಸಾಧನೆ ವಿದ್ಯಾರ್ಥಿಗಳಿಗೆ ಅಭಿನಂದನೆ
ಆನೇಕಲ್, ಮಾ. ೭ – ಎಲೆಕ್ಟ್ರಾನಿಕ್‌ಸಿಟಿಯ ಐಎಸ್‌ಬಿಆರ್ ಪದವಿ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಈ ವೇಳೆ ಬೆಂಗಳೂರು ನ್ಯಾಷನಲ್ ಕಾನೂನು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ನಿಗಂ ನುಗ್ಗೇಹಳ್ಳಿ ಮಾತನಾಡಿ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುವ ಅವಶ್ಯಕತೆಯಿದೆ. ಪದವಿಯು ಹೊಸ ಆವಿಷ್ಕಕಾರಕ್ಕೆ ನಾಂದಿ ಹಾಡಬೇಕು. ಕಾನೂನು ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಠು ಅವಕಾಶಗಳಿದ್ದು ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನ್ಯಾಯಾಂಗ ಪರೀಕ್ಷೆ, ವಕೀಲ ವೃತ್ತಿ, ಕಂಪನಿಗಳ ಕಾನೂನು ಸಲಹೆಗಾರರು ಸೇರಿದಂತೆ ಅವಕಾಶಗಳನ್ನು ಬಳಸಿಕೊಳ್ಳುವ ಅವಶ್ಯಕತೆಯಿದೆ ಎಂದರು.
ಐಎಸ್‌ಬಿಆರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಮನೀಷ್ ಕೊತಾರಿಯಾ ಮಾತನಾಡಿ ಸತತ ಅಭ್ಯಾಸದಿಂದ ಯಶಸ್ಸು ಗಳಿಸಬಹುದು. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ನಿರಂತರ ಅಧ್ಯಯನ ಮಾಡಬೇಕು. ಉತ್ತಮ ಚಾರಿತ್ರ್ಯವನ್ನು ಜೀವನದ ಭಾಗವನ್ನಾಗಿಸಿಕೊಳ್ಳಬೇಕು. ಎಂದರು. ಕಾರ್ಯಕ್ರಮದಲ್ಲಿ ಕಾಗ್ನಿಸೆಂಟ್ ಕಂಪನಿಯ ಕಾನೂನು ವಿಭಾಗದ ಅಂಬಿಕಾ ಸಿನ್ಹಾ, ಇನ್ಫೋಸಿಸ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ವಿ.ರಾಜೇಶ್ ಕುಮಾರ್, ಐಎಸ್‌ಬಿಆರ್ ಕಾಲೇಜಿನ ಆಡಳಿತ ಮಂಡಳಿಯ ಆನಂದ್ ಅಗರ್ವಾಲ್, ಕೆ.ಎಸ್.ಆನಂದರಾಮ್, ಸಿ.ಮನೋಹರ್, ತಪನ್ ನಾಯಕ್, ಬಲವಂತ್ ಕಳಸ್ಕರ್ ಇದ್ದರು.