ಶಿವನ ಅವತರಣೆಯ ದಿನವೇ ಶಿವರಾತ್ರಿ;-ಬಿ.ಕೆ.ರೂಪಕ್ಕ
ವಿಜಯಪುರ.ಮಾ೭: ಶಿವರಾತ್ರಿ ಎಂಬುದು ಶಿವನ ಅವತರಣೀಯ ದಿನವಾಗಿದ್ದು, ಉಪ(ಹತ್ತಿರ)ವಾಸ ಎಂದರೆ ಶಿವನ ಸಮೀಪದಲ್ಲಿ ವಾಸ ಮಾಡುವುದು ಎಂದರ್ಥವಾಗಿದ್ದು, ಅಂದು ಎಲ್ಲರೂ ಶಿವನ ಧ್ಯಾನದಲ್ಲಿ ನಿರತರಾಗಿರಬೇಕೆಂದು ಪಟ್ಟಣದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕರಾದ ಬಿಕೆ ರೂಪಕ್ಕರವರು ತಿಳಿಸಿದರು.
ಅವರು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ನಿರ್ಮಿತಗೊಂಡ ಶಿವ ಸಂದೇಶ ಸಾರುವ ರಥಯಾತ್ರೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
೮೮ನೇ ಶಿವ ಜಯಂತಿ ಮಹೋತ್ಸವದ ಪ್ರಯುಕ್ತ ಶಿವ ಸಂದೇಶ ಸಾರುವ ಶಾಂತಿ ಯಾತ್ರೆಯನ್ನು ಈಶ್ವರಿಯ ವಿಶ್ವವಿದ್ಯಾಲಯದಿಂದ ಕೈಗೊಂಡಿದ್ದು, ಈ ರಥಯಾತ್ರೆಯೂ ಈಗಾಗಲೇ ಆಂಧ್ರ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಚರಿಸಿ, ಸೋಮವಾರವಾದ ಇಂದು ವಿಜಯಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಸಾರ್ವಜನಿಕರಿಗೆ ಈಶ್ವರಿಯ ಸಂದೇಶವನ್ನು ನೀಡುತ್ತಲ್ಲಿದೆ ಎಂದು ತಿಳಿಸಿದರು.
ಮಾರ್ಚಿ ಎಂಟರ ಶುಕ್ರವಾರದಂದು ಶಿವರಾತ್ರಿ ಪ್ರಯುಕ್ತ ಪಟ್ಟಣದ ಬಸವೇಶ್ವರನಗರದಲ್ಲಿರುವ ಈಶ್ವರಿಯ ವಿಶ್ವವಿದ್ಯಾನಿಲಯದಲ್ಲಿ ಸೋಮನಾಥೇಶ್ವರ ಶಿವಲಿಂಗ ದರ್ಶನವನ್ನು ಸಂಜೆ ೬:೩೦ ರಿಂದ ಏರ್ಪಡಿಸಲಾಗಿದ್ದು, ಪಟ್ಟಣದ ಸಾರ್ವಜನಿಕರು ಆಗಮಿಸಿ ಭಗವಂತನ ದರ್ಶನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರುದ್ರಮೂರ್ತಿ, ನಂಜೇಗೌಡರು, ತಬಲ ಕಲಾವಿದರಾದ ನಾಗರಾಜು, ಬಿಕೆ ಲೋಕೇಶ್ ಅಣ್ಣ, ಪಾರ್ವತಕ್ಕ, ರಥಯಾತ್ರೆಯೊಂದಿಗೆ ಬೆಂಗಳೂರಿನಿಂದ ಆಗಮಿಸಿದ್ದ ವನಜಕ್ಕ, ವಿಜಯಕ್ಕ ಮತ್ತಿತರರು ಉಪಸ್ಥಿತರಿದ್ದರು.