ಹಿಂದೂ ಗೆಳೆಯರಿಂದ ಮುಸ್ಲಿಂ ಸ್ನೇಹಿತರಿಗೆ ಸನ್ಮಾನಉಮ್ರಾ ಯಾತ್ರಿಗಳಿಗೆ ಬಿಳ್ಕೋಡುಗೆ
ಸಂಜೆವಾಣಿ ವಾರ್ತೆ
ಔರಾದ್:ಮಾ.7: ಮುಸ್ಲಿಂ ಸಮುದಾಯದಲ್ಲಿ ಹಜ್ ಮತ್ತು ಉಮ್ರಾ ಯಾತ್ರೆಗೆ ವಿಶೇಷ ಮಹತ್ವವಿದ್ದು ಉಮ್ರಾ ಯಾತ್ರಿಗಳಿಗೆ ಹಿಂದೂ ಸಹೋದರರು ಮುಸ್ಲಿಂ ಸ್ನೇಹಿತರಿಗೆ ಸನ್ಮಾನಿಸಿ ಶುಭಹಾರೈಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು.
ಉಮ್ರಾ ಯಾತ್ರೆಗೆ ತೆರಳುತ್ತಿರುವ ತಾಲ್ಲೂಕಿನ ಕೊಳ್ಳೂರ ಗ್ರಾಮದ ಚಾಂದಪಾಶಾ ಹಾಗೂ ಘುಡುಸಾಬ ಅವರನ್ನು ಮಂಗಳವಾರ ಗೆಳೆಯರ ಬಳಗದಿಂದ ಸನ್ಮಾನಿಸಿ ಬಿಳ್ಕೋಡಲಾಯಿತು. ಮುಸ್ಲಿಂ ಗೆಳೆಯರಿಗೆ ಹಿಂದೂ ಸ್ನೇಹಿತರು ಸೇರಿ ಮಾಡುತ್ತಿರುವ ಈ ಸನ್ಮಾನ ಭಾವೈಕ್ಯತೆಯ ಪ್ರತೀಕ. ಈ ಸೌಹಾರ್ದತೆ ಪ್ರೀತಿ ಸಹೋದರತೆಗೆ ನಾಂದಿಯಾಗಿದೆ.
ಬಕ್ರೀದ್ ಸಮಯದಲ್ಲಿ 40 ದಿನದ ಹಜ್ ಯಾತ್ರೆ ಇರುತ್ತದೆ. ವರ್ಷದ ಯಾವುದಾದರೂ ಸಮಯದಲ್ಲಿ ಕನಿಷ್ಟ 15 ದಿನ ಯಾತ್ರೆಗೆ ಹೋಗುವುದಕ್ಕೆ ಉಮ್ರಾ ಯಾತ್ರೆ ಎನ್ನುತ್ತಾರೆ. ಯಾತ್ರೆಗೆ ತೆರಳುವುದು ಮಕ್ಕಾ ಮದೀನಾ ದರ್ಶನ ಮಾಡುವುದು ಜೀವನದ ಪರಮಗುರಿ. ಅಲ್ಲಾನ ಆಶೀರ್ವಾದವಿದ್ದರೆ ಮಾತ್ರ ಯಾತ್ರೆ ಕೈಗೂಡುತ್ತದೆ.
ಆತ್ಮಿಯ ಮುಸ್ಲಿಂ ಸ್ನೇಹಿತರು ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವುದು ಬಹಳ ಸಂತೋಷದ ವಿಷಯ ಅವರ ಪ್ರಯಾಣ ಸುಖಕರವಾಗಿರಲಿ ಮತ್ತು ಉತ್ತಮ ರೀತಿಯಲ್ಲಿ ಜರುಗಲಿ, ಪ್ರತಿಯೊಬ್ಬರಲ್ಲಿಯು ಸಹೋದರತೆ ಭಾವೈಕ್ಯತೆ ಬೆಳೆಯಬೇಕು ಎಂದು ಗ್ರಾಮದ ಬಸವರಾಜ ದೇಗಲವಾಡೆ ಹೇಳಿದರು.
ಎಲ್ಲ ಸ್ನೇಹಿತರು ನಮ್ಮನ್ನು ಅತ್ಮೀಯವಾಗಿ ಬೀಳ್ಕೊಡುತ್ತಿರುವುದು ನಮ್ಮ ಹೃದಯ ತುಂಬಿ ಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಲ್ಲಾಹುನಲ್ಲಿ ಪ್ರಾರ್ಥಿಸುತ್ತೇವೆ ಎಂದು ಚಾಂದಪಾಶಾ ಮತ್ತು ಘುಡುಸಾಬ ಹೇಳಿದರು.
ಈ ಸಂದರ್ಭದಲ್ಲಿ ಶಿವಲಿಂಗಯ್ಯ ಸ್ವಾಮಿ, ಬಂಡೆಪ್ಪ ದೇಗಲವಾಡೆ, ಬಸವರಾಜ ಹೋನ್ನಶಟ್ಟೆ, ಸಿದ್ದಪ್ಪ ಶಂಬೆಳ್ಳೆ, ಅಜಿಜೋದ್ದಿನ್, ತಾಜುದ್ದಿನ್ ಬೋರ್ಗಿ, ದಸ್ತಗೀರ ದಾಬಕಾ, ನಜೀರ್ ಅಹ್ಮದ್, ಅಜೀಮುದ್ದಿನ್, ಹುಸೇನಸಾಬ, ಸಿರಾಜುದ್ದಿನ್, ಶಾದುಲ ಸಾಬ, ಕಲಿಮಪಾಶಾ ಸೇರಿದಂತೆ ಇತರರು ಇದ್ದರು.